ಪರೀಕ್ಷೆ ಬಗ್ಗೆ ಮಕ್ಕಳಿಗಿರುವ ಫೋಬಿಯಾ ಹೋಗಲಾಡಿಸಿ ವಿದ್ಯಾರ್ಥಿಗಳ ಆತ್ಮ ಸ್ಥೈರ್ಯ ಹೆಚ್ಚಿಸುವ ಕೆಲಸವನ್ನು ದೇಶದ ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿದ್ದಾರೆ.
ವರದಿ: ಮಧು.ಎಂ.ಚಿನಕುರಳಿ
ಮೈಸೂರು (ಮಾ.31): ಪರೀಕ್ಷೆ ಬಗ್ಗೆ ಮಕ್ಕಳಿಗಿರುವ ಫೋಬಿಯಾ ಹೋಗಲಾಡಿಸಿ ವಿದ್ಯಾರ್ಥಿಗಳ ಆತ್ಮ ಸ್ಥೈರ್ಯ ಹೆಚ್ಚಿಸುವ ಕೆಲಸವನ್ನು ದೇಶದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಾಡುತ್ತಿದ್ದಾರೆ. ಇದಕ್ಕಾಗಿ ಕಳೆದ ನಾಲ್ಕು ವರ್ಷಗಳಿಂದ 'ಪರಿಕ್ಷಾ ಪೇ ಚರ್ಚೆ' (Pariksha Pe Charcha) ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದು, ವಿದ್ಯಾರ್ಥಿಗಳ ಜೊತೆ ನೇರ ಮಾತುಕತೆ ನಡೆಸಿ ಅವರ ಮನೋಬಲವನ್ನ ಬಲಗೊಳಿಸುತ್ತಿದ್ದಾರೆ. ಈ ಸಾಲಿನ ಪರಿಕ್ಷಾ ಪೇ ಚರ್ಚೆ ಕಾರ್ಯಕ್ರಮ ಏಪ್ರಿಲ್ 1ರಂದು ನಡೆಯುತ್ತಿದ್ದು, ಪ್ರಧಾನಿಯೊಂದಿಗೆ ಚರ್ಚೆ ನಡೆಸಲು ದೇಶದ ನಾನಾ ರಾಜ್ಯಗಳ 40 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಮೋದಿ ಜೊತೆಗಿನ ಚರ್ಚೆಯ 40 ವಿದ್ಯಾರ್ಥಿಗಳ ಪಟ್ಟಿಯಲ್ಲಿ ರಾಜ್ಯದ ಏಕೈಕ ವಿದ್ಯಾರ್ಥಿ ಆಯ್ಕೆಯಾಗಿದ್ದು, ಆತ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ (Mysuru) ವ್ಯಾಸಂಗ ಮಾಡುತ್ತಿದ್ದಾನೆ ಎಂಬುದು ಮತ್ತಷ್ಟು ಹೆಮ್ಮೆಯ ವಿಚಾರವಾಗಿದೆ.
ಏಪ್ರಿಲ್ 1ರಂದು ಪ್ರಧಾನಿ ಮೋದಿ ಹಾಗೂ ದೇಶದ ವಿದ್ಯಾರ್ಥಿಗಳ ಜೊತೆ ‘ಪರೀಕ್ಷಾ ಪೇ ಚರ್ಚೆ’ ನಡೆಯುತ್ತಿದ್ದು, ಪ್ರಧಾನಿಯೊಂದಿಗೆ ಚರ್ಚೆಯಲ್ಲಿ ಪಾಲ್ಗೊಳ್ಳಲು ಮೈಸೂರಿನ ವಿದ್ಯಾರ್ಥಿ ಸಿದ್ದವಾಗಿದ್ದಾರೆ. ರಾಜ್ಯದಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿ ಎಂಬ ಹೆಗ್ಗಳಿಕೆಯೊಂದಿಗೆ ಜವಾಹರ ನವೋದಯ ವಿದ್ಯಾಲಯದ ಎಂ.ಬಿ. ತರುಣ್ ಚರ್ಚೆಗೆ ಸಿದ್ದತೆ ನಡೆಸಿದ್ದಾರೆ. ಪ್ರಧಾನಿ ಮೋದಿ ಪ್ರತಿ ವರ್ಷ ಹಲವು ಬಗೆಯ ವಿದ್ಯಾರ್ಥಿಗಳ ಜೊತೆ ಇಂತಹ ಚರ್ಚೆ ನಡೆಸುತ್ತಾರೆ. ಈ ಬಾರಿ ಬೋರ್ಡ್ ಪರೀಕ್ಷೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಜೊತೆ ಮೋದಿ ಮಾತುಕತೆ ನಡೆಸಲಿದ್ದಾರೆ. 10 ಮತ್ತು 12ನೇ ತರಗತಿ ಮಕ್ಕಳನ್ನು ಉದ್ದೇಶಿಸಿ ಮೋದಿ ಮಾತುನಾಡಿ ಚರ್ಚೆ ನಡೆಸುವರು.
Student Death: 'ಉತ್ತರ ಪತ್ರಿಕೆ ಕಿತ್ತುಕೊಂಡಿದ್ದೆ ಮಗಳ ಸಾವಿಗೆ ಕಾರಣ' ತಾಯಿಯ ನೋವು
ಕರ್ನಾಟಕದಿಂದ ಏಕೈಕ ವಿದ್ಯಾರ್ಥಿಯಾಗಿ ಮೈಸೂರಿನ ಬಾಲಕ: ಈ ಬಾರಿಯ ಪರೀಕ್ಷಾ ಪೇ ಚರ್ಚೆ ಕಾರ್ಯಕ್ರಮದಲ್ಲಿ ದೇಶಾದ್ಯಂತ ಒಟ್ಟು 40 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ಅವರಲ್ಲಿ ನವೋದಯ ಶಾಲೆ ತರುಣ್ ಕೂಡ ಒಬ್ಬರಾಗಿದ್ದು ಕರ್ನಾಟಕದಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿ ಎನಿಸಿಕೊಂಡಿದ್ದಾರೆ. ಎಂ.ಬಿ ತರುಣ್ ಮೂಲತಃ ಮಂಡ್ಯ ನಗರದವರು. ತಾಯಿ ಶಾಲಾ ಶಿಕ್ಷಕಿಯಾಗಿದ್ದು, ತಂದೆ ತೀರಿಕೊಂಡಿದ್ದಾರೆ. ಮಂಡ್ಯದ ನವೋದಯ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ತರುಣ್ ಕಳೆದ ವರ್ಷ ಮೈಸೂರಿನ ದೊಡ್ಡ ಮಾರಗೌಡನಹಳ್ಳಿ ಜವಾಹರ್ ನವೋದಯ ಶಾಲೆಗೆ ವರ್ಗಾವಣೆ ಆಗಿದ್ದ. ಸದ್ಯ 11ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ. ಪ್ರಧಾನಿ ಜೊತೆಗಿನ ಪ್ರಶ್ನೋತ್ತರದಲ್ಲಿ ಭಾಗಿಯಾಗಲು ಸಿದ್ದವಾಗಿದ್ದಾರೆ.
ಶಿಕ್ಷಣದಲ್ಲಿ ಮೀಸಲಾತಿ ನೀತಿ ಬದಲಾಗಲಿ: ಮೋದಿ ಜೊತೆಗಿನ ಚರ್ಚೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದೇಶದ ಲಕ್ಷಾಂತರ ವಿದ್ಯಾರ್ಥಿಗಳು ಪ್ರಯತ್ನ ನಡೆಸಿದ್ದರು. ತರುಣ್ ಸೇರಿದಂತೆ ನವೋದಯ ಶಾಲೆಯ 80 ವಿದ್ಯಾರ್ಥಿಗಳು ಪ್ರಬಂಧ ಬರದು ಪ್ರಧಾನಿ ಕಾರ್ಯಾಲಯಕ್ಕೆ ಕಳುಹಿಸಿದ್ದರು. ತರುಣ್ ಕೂಡ ಆನ್‌ಲೈನ್ ಶಿಕ್ಷಣ, ರಿಸರ್ವೇಶನ್ ಪಾಲಿಸಿ ಬಗ್ಗೆ ಪ್ರಬಂಧ ಬರೆದು ಕಳುಹಿಸಿದ್ದರು. ಆನ್‌ಲೈನ್ ಶಿಕ್ಷಣದಿಂದ ವಿದ್ಯಾರ್ಥಿ ಸಮುದಾಯಕ್ಕೆ ಸರಿಯಾದ ಶಿಕ್ಷಣ ದೊರಕುತ್ತಿಲ್ಲ. ಇದರಿಂದ ಅವರು ದಾರಿ ತಪ್ಪುತ್ತಿದ್ದಾರೆ ಎಂಬುದನ್ನು ಬರೆಯಲಾಗಿತ್ತು. ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿರುವ ಮೀಸಲಾತಿ ಬದಲಾವಣೆ ಬಗ್ಗೆ ಕೂಡ ಪ್ರಬಂದ ಬರೆದು ಎರಡು ತಿಂಗಳ ಹಿಂದೆಯೇ ಕಳುಹಿಸಿಕೊಟ್ಟಿದ್ದ.
ಶಾಲೆಯಲ್ಲಿ ಎಲ್ಲರ ಸಂಭ್ರಮ: ಇನ್ನು ವಿದ್ಯಾರ್ಥಿ ಎಂಬಿ.ತರುಣ್ ಪರೀಕ್ಷಾ ಪೇ ಚರ್ಚೆ ಕಾರ್ಯಕ್ರಮಕ್ಕೆ ಆಯ್ಕೆ ಆಗಿರೋದು ಜವಾಹರ ನವೋದಯ ವಿದ್ಯಾಲಯದ ಮುಖ್ಯಸ್ಥರು ಸೇರಿ ಸಹಪಾಠಿಗಳಿಗೆ ಸಂತೋಷ ತಂದಿದೆ. ಇದೇ ಸಂತೋಷ ಹಂಚಿಕೊಂಡ ಪ್ರಾಂಶುಪಾಲ ಮಧುಸೂದನ್, ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ವಿದ್ಯಾರ್ಥಿಗಳ ಒತ್ತಡ ಕಡಿಮೆ ಮಾಡಲು ನೆರವಾಗುವ ಕಾರ್ಯಕ್ರಮ ಎಂದರು. ಪರೀಕ್ಷಾ ಭಯ ಹೋಗಲಾಡಿಸಲು ಇದು ಸಹಕಾರಿಯಾಗಿದೆ. ಇಲ್ಲಿ ವಿದ್ಯಾರ್ಥಿಗಳು ಪ್ರಧಾನಮಂತ್ರಿ ಅವರನ್ನೆ ನೇರವಾಗಿ ಪ್ರಶ್ನಿಸಬಹುದು. ಇದೊಂದು ಅಪರೂಪ ಅವಕಾಶವಾಗಿದ್ದು ಇದೊಂದು ಸುವರ್ಣ ಅವಕಾಶವಾಗಿದೆ ಎಂದರು.
Puneeth Rajkumar: ಸೆಲೆಬ್ರಿಟಿಗಳ ಪ್ರತಿಮೆ ಗುಚ್ಛ ಸೇರಿದ ಪವರ್ ಸ್ಟಾರ್ ಡಾ.ಅಪ್ಪು
ಎಲ್ಲಾ ವಿದ್ಯಾರ್ಥಿಗಳು ಪ್ರಧಾನಿ ಚರ್ಚೆ ವೀಕ್ಷಿಸಲು ಅವಕಾಶ: ಇಡೀ ಕಾರ್ಯಕ್ರ ವೀಕ್ಷಣೆ ಮಾಡಲು ನವೋದಯ ಶಾಲೆಯಲ್ಲಿ ದೊಡ್ಡ ಪರದೆ ಹಾಕಿ ವೀಕ್ಷಣೆ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ವೆಬಿನಾರ್ ಮೂಲಜ ಮಕ್ಕಳ ವೀಕ್ಷಣೆಗೆ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಜೂಂ ಮೀಟಿಂಗ್ ಮಾಡಿ ಕ್ರಮ ವಹಿಸಿದ್ದು, ಎಲ್ಲ ಶಾಲೆಗಳಲ್ಲೂ ಇದನ್ನು ತೋರಿಸಲು ಸಿದ್ದತೆ ಮಾಡಲಾಗಿದೆ.