ಹೊಲಿಗೆಯನ್ನೇ ಸ್ವಉದ್ಯೋಗ ಮಾಡಿಕೊಳ್ಳುವ ಮಹಿಳೆಯರಿಗೆ Mudra Loan -ಪ್ರಲ್ಹಾದ್ ಜೋಶಿ

By Ravi Nayak  |  First Published Sep 1, 2022, 3:49 PM IST

ಹೊಲಿಗೆಯನ್ನು ಸ್ವ ಉದ್ಯೋಗ ಮಾಡಿಕೊಳ್ಳಲು ಬಯಸುವ ಮಹಿಳೆಯರಿಗೆ ಮುದ್ರಾ ಯೋಜನೆ(Mudra Scheme)ಯಡಿ ಸಾಲ( Loan) ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ(Pralhad joshi) ಹೇಳಿದ್ದಾರೆ. ಧಾರವಾಡ(Dharwad)ದಲ್ಲಿಂದು ಹಮ್ಮಿಕೊಳ್ಳಲಾಗಿದ್ದ ಉಚಿತ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ(Free skill development program) ಉದ್ಘಾಟಿಸಿ ಅವರು ಮಾತನಾಡಿದರು.


ಧಾರವಾಡ (ಸೆ.1) : ಹೊಲಿಗೆಯನ್ನು ಸ್ವ ಉದ್ಯೋಗ ಮಾಡಿಕೊಳ್ಳಲು ಬಯಸುವ ಮಹಿಳೆಯರಿಗೆ ಮುದ್ರಾ ಯೋಜನೆ(Mudra Scheme)ಯಡಿ ಸಾಲ( Loan) ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ(Pralhad joshi) ಹೇಳಿದ್ದಾರೆ. ಧಾರವಾಡ(Dharwad)ದಲ್ಲಿಂದು ಹಮ್ಮಿಕೊಳ್ಳಲಾಗಿದ್ದ ಉಚಿತ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ(Free skill development program) ಉದ್ಘಾಟಿಸಿ ಅವರು ಮಾತನಾಡಿದರು.

ಧರ್ಮ ರಾಜಕಾರಣ, ಸಿದ್ದರಾಮಯ್ಯ ಪ್ರಾಯಶ್ಚಿತ ಮಾಡಿಕೊಳ್ಳಲಿ: ಪ್ರಹ್ಲಾದ್‌ ಜೋಶಿ

ಮಹಿಳೆಯರಿಗೆ ಬದುಕು ಕಟ್ಟಿಕೊಳ್ಳಲು ಅನುಕೂಲವಾಗುವಂತೆ ಉಚಿತ ವೃತ್ತಿಪರ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ನ CSR ಕಾರ್ಯ ಚಟುವಟಿಕೆಗಳ ಅಡಿಯಲ್ಲಿ, ಗ್ರಾಮ ವಿಕಾಸ ಸೊಸೈಟಿ ಮೂಲಕ ಹಮ್ಮಿಕೊಳ್ಳಲಾಗಿತ್ತು. pic.twitter.com/kJYoN7EJI0

— Pralhad Joshi (@JoshiPralhad)

Tap to resize

Latest Videos

ಮಹಿಳೆಯರಿಗೆ ಅನುಕೂಲವಾಗುವಂತೆ ಉಚಿತ ವೃತ್ತಿಪರ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ಗ್ರಾಮ ವಿಕಾಸ ಸೊಸೈಟಿ CSR ಅನುದಾನದಡಿಯಲ್ಲಿ ಹಮ್ಮಿಕೊಂಡಿತ್ತು.‌ ಇದೇ ವೇಳೆ ತರಬೇತಿ ಪಡೆದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರವನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿತರಿಸಿದರು.

ಈ ವೇಳೆ ಮಾತಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಮಹಿಳೆಯರು ಬದುಕು ಕಟ್ಟಿಕೊಳ್ಳಲು ಧಾರವಾಡ ಜಿಲ್ಲೆಯಲ್ಲಿ ಉಚಿತ ಕೌಶಲ್ಯ ಅಭಿವೃದ್ಧಿ ಕಾರ್ಮಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ. ಪ್ರಧಾನಿ ಮೋದಿ(PM Narendra Modi)ಯವರ ಆಶಯದಂತೆ ಗ್ರಾಮೀಣ ವಿಕಾಸ(Grama Vikas)ಕ್ಕಾಗಿ ಹಲವು ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನ ನಡೆಸಲಾಗ್ತಿದೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ 4 ಕೌಶಲ್ಯಾಭಿವೃದ್ದಿ ತರಬೇತಿ ಕೇಂದ್ರ(Skill Development Training Centre)ಗಳನ್ನ ಪ್ರಾರಂಭಿಸಲಾಗಿದ್ದು, 1200 ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದೆ ಎಂದರು. 

ಪ್ರಧಾನಮಂತ್ರಿ ಮುದ್ರಾ ಯೋಜನೆ ಅಂದ್ರೇನು? ಲಾಭವೇನು? ಇಲ್ಲಿದೆ ಸಂಪೂರ್ಣ ವಿವರ

ಈ ತರಬೇತಿ ಪಡೆದ ಮಹಿಳೆಯರು, ಸ್ವ ಉದ್ಯೋಗ(Job) ಕೈಗೊಳ್ಳಲು ಮುಂದಾದರೆ, ಅವರೆಲ್ಲರಿಗೂ ಮುದ್ರಾ ಯೋಜನೆಯಡಿ ಸಾಲ ನೀಡಲು ಸಹ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.‌ ಇದೇ ವೇಳೆ ತರಬೇತಿ ಕೇಂದ್ರಗಳಲ್ಲಿರುವ ವ್ಯವಸ್ಥೆಗಳನ್ನ ಜೋಶಿ ಪರಿಶೀಲಿಸಿದರು.

click me!