ಪಠ್ಯದಲ್ಲಿ ಇಲ್ಲದ ವಿಷಯಗಳ ಬಗ್ಗೆ 50 ಪ್ರಶ್ನೆಗಳನ್ನು ಕೇಳುವ ಮೂಲಕ ತೀವ್ರ ವಿವಾದ ಸೃಷ್ಟಿಸಿದ್ದ 2024ನೇ ಸಾಲಿನ ಸಿಇಟಿ ಫಲಿತಾಂಶ ಬಿಡುಗಡೆ ಮಾಡಿದ ಕೆಇಎ ಇದೀಗ ಮತ್ತೊಂದು ಮಹಾ ಪ್ರಮಾದ ಮಾಡಿದೆ.
ಬೆಂಗಳೂರು (ಜೂ.3): ಪಠ್ಯದಲ್ಲಿ ಇಲ್ಲದ ವಿಷಯಗಳ ಬಗ್ಗೆ 50 ಪ್ರಶ್ನೆಗಳನ್ನು ಕೇಳುವ ಮೂಲಕ ತೀವ್ರ ವಿವಾದ ಸೃಷ್ಟಿಸಿದ್ದ 2024ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಯಾವುದೇ ಮುನ್ಸೂಚನೆ ನೀಡದೆ ಶನಿವಾರ ಸಂಜೆ ಏಕಾಏಕಿ ಪ್ರಕಟ ಮಾಡಿತ್ತು. ಆದರೀಗ ಮತ್ತೊಂದು ಮಹಾ ಎಡವಟ್ಟು ಮಾಡಿದೆ.
ಸಿಇಟಿ ಫಲಿತಾಂಶ ಪ್ರಕಟ ಬೆನ್ನಲ್ಲೇ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರಣ ಕೆಇಎ ಎಡವಟ್ಟಿನಿಂದ ರ್ಯಾಂಕ್ ಪಡೆದ ವಿಧ್ಯಾರ್ಥಿಗಳು ಈಗ ಸಂಕಷ್ಟ ಎದುರಿಸುತ್ತಿದ್ದಾರೆ. 97%, 98% ಪರ್ಸೆಂಟ್ ಬಂದ್ರು ವಿದ್ಯಾರ್ಥಿಗಳಿಗೆ ಸಿಇಟಿ ರ್ಯಾಕಿಂಗ್ ಇಲ್ಲ. ಹೀಗಾಗಿ ಕೆಇಎ ಕಛೇರಿ ಮುಂಭಾಗದಲ್ಲಿ ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
undefined
ಶಾಲಾ ಮಕ್ಕಳ ಶೂ, ಸಾಕ್ಸ್ ಖರೀದಿಗೆ ಏಳು ವರ್ಷ ಹಿಂದಿನ ದರ ನಿಗದಿಪಡಿಸಿದ ಸರ್ಕಾರ!
ಇನ್ನೂ ಕೆಲವರಿಗೆ ಪರೀಕ್ಷೆ ಹಾಜರಾಗಿದ್ರು ಕೂಡ ಗೈರಾಗಿದ್ದಾರೆಂದು ರಿಸಲ್ಟ್ ಬಂದಿದೆ. ಕೆಲ ವಿಧ್ಯಾರ್ಥಿಗಳ ಸಿಇಟಿ ರ್ಯಾಕಿಂಗ್ ಗೆ ತಡೆಯಾಗಿದ್ದು, ನೂರಾರು ಸಂಖ್ಯೆಯಲ್ಲಿ ಮಲೇಶ್ವರಂ ಕೆಇಎ ಕಛೇರಿ ಮುಂಭಾಗದಲ್ಲಿ ಪೋಷಕರು, ವಿಧ್ಯಾರ್ಥಿಗಳು ಜಮಾಯಿಸಿದ್ದಾರೆ. ನಮ್ಮ ಮಕ್ಕಳು ಉತ್ತಮ ಅಂಕ ಪಡೆದ್ರು ರ್ಯಾಕಿಂಗ್ ಇಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಹೇಳಿಕೆ ನೀಡಿ, ಪಿಯು ಬೋರ್ಡ್ ನಲ್ಲಿ ವಿಧ್ಯಾರ್ಥಿಗಳಿಗೆ ಕೊಡಲಾಗಿರೋ ಯೂನಿಕ್ ನಂಬರ್ ತಪ್ಪಾಗಿ ಎಂಟ್ರಿ ಮಾಡಲಾಗಿದೆ. 3 ಸಾವಿರಕ್ಕೂ ಹೆಚ್ಚು ವಿಧ್ಯಾರ್ಥಿಗಳಿಗೆ ಈ ರೀತಿಯಾಗಿದೆ. ಸಮಸ್ಯೆ ಬಗೆಹರಿಸಲು ವಿಶೇಷ ತಂಡ ರಚನೆ ಮಾಡಲಾಗಿದೆ. ಮುಂದಿನ ಮೂರು ದಿನಗಳಲ್ಲಿ ಸಮಸ್ಯೆ ಬಗೆ ಹರಿಸಿ ರ್ಯಾಕಿಂಗ್ ನೀಡಲಾಗುವುದು ಎಂದಿದ್ದಾರೆ.
ದೇಶಾದ್ಯಂತ ಇಂದಿನಿಂದ ಟೋಲ್ ದರ ಶೇ.5 ಹೆಚ್ಚಳ, ಚುನಾವಣೆ ಕಾರಣ 2 ತಿಂಗಳ ಬಳಿಕ ಜಾರಿ!
ವಿಧ್ಯಾರ್ಥಿಗಳ ಹಾಗೂ ಪೋಷಕರಿಗೆ ಮನವಿ ಮಾಡಿದ್ದು, ಯಾವುದೇ ಕಾರಣಕ್ಕೂ ,ಪೋಷಕ ಹಾಗೂ ವಿಧ್ಯಾರ್ಥಿಗಳು ಗಾಬರಿ ಪಡುವ ಅಗತ್ಯವಿಲ್ಲ. ಸಮಸ್ಯೆ ಬಗ್ಗೆ ಕೆಇಎ ಅಧಿಕೃತ ಇಮೇಲ್ ಐಡಿಗೆ ಮೇಲ್ ಮಾಡಿ. ತಜ್ಞರ ತಂಡ ಸಮ್ಯಸೆಗಳಿದ್ದರೆ ಅವರೇ ನಿಮಗೆ ಕರೆ ಮಾಡಿ ಮಾಹಿತಿ ನೀಡ್ತಾರೆ. ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕ ಹೆಚ್ ಪ್ರಸನ್ನ ಹೇಳಿಕೆ ನೀಡಿದ್ದಾರೆ.
ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸುಗಳಿಗೆ ಏ.18 ಮತ್ತು 19ರಂದು ಸಿಇಟಿ ಪರೀಕ್ಷೆ ನಡೆಸಲಾಗಿತ್ತು. ಈ ಫಲಿತಾಂಶವನ್ನು http://kea.kar.nic.in ನಲ್ಲಿ ಪ್ರಕಟಿಸಲಾಗಿತ್ತು. ಒಟ್ಟು 3,49,653 ಅಭ್ಯರ್ಥಿಗಳು ಸಿಇಟಿಗೆ ಅರ್ಜಿ ಸಲ್ಲಿಸಿದ್ದು, ಅಂತಿಮವಾಗಿ 3,10,314 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ, ಫಲಿತಾಂಶದ ಆಧಾರದಲ್ಲಿ 2,15,595 ಅಭ್ಯರ್ಥಿಗಳು ಎಂಜಿನಿಯರಿಂಗ್, 2,15,965 ಅಭ್ಯರ್ಥಿಗಳು ಬಿ.ಎಸ್ಸಿ (ಕೃಷಿ), 2,19,887 ವಿದ್ಯಾರ್ಥಿಗಳು ವೆಟರ್ನರಿ ಕೋರ್ಸುಗಳಿಗೆ ಪ್ರವೇಶ ಪಡೆಯಲು ಅರ್ಹತೆ ಪಡೆದಿದ್ದಾರೆ.
50 ಪ್ರಶ್ನೆಗಳನ್ನು ಕೈಬಿಟ್ಟ ಪಠ್ಯಕ್ರಮದಿಂದ ಕೇಳಿದ್ದರಿಂದ ಸಾಕಷ್ಟು ವಿವಾದ ಸೃಷ್ಟಿಯಾದ ಹಿನ್ನೆಲೆ ಸರಕಾರ ತನಿಖೆಗಾಗಿ ತಜ್ಞರ ಸಮಿತಿ ರಚನೆ ಮಾಡಿ 50 ಪ್ರಶ್ನೆಗಳನ್ನು ಹೊರಗಿಟ್ಟು ಮೌಲ್ಯಮಾಪನ ಮಾಡಿತ್ತು.