ವಿಜಯನಗರ ಸಾಮ್ರಾಜ್ಯ ಸ್ಥಾಪಕರು ಯಾರು? ವಿದ್ಯಾರ್ಥಿಯ ಫನ್ನಿ ಉತ್ತರ ವೈರಲ್

By Suvarna NewsFirst Published Feb 3, 2021, 9:06 PM IST
Highlights

ವಿಜಯನಗರ ಸಾಮ್ರಾಜ್ಯದ ಸ್ಥಾಪಕ ಯಾರು ಎಂಬ ಪ್ರಶ್ನೆಗೆ ವಿದ್ಯಾರ್ಥಿಯೋರ್ವ ಬರೆದ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ಸಖ್ ವೈರಲ್ ಆಗುತ್ತಿದೆ.

ಬಳ್ಳಾರಿ, (ಫೆ.03): ವಿಜಯನಗರ ಸಾಮ್ರಾಜ್ಯದ ಸ್ಥಾಪಕರು ಯಾರು..? ಈ ಪ್ರಶ್ನೆಗೆ ವಿದ್ಯಾಥಿರ್ಯೊಬ್ಬ ಶಾಸಕ ಆನಂದ ಸಿಂಗ್​ ಎಂದು ಉತ್ತರಿಸಿದ್ದಾನೆ. ಈ ಕುರಿತ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ನೋಟ್​ಬುಕ್​ನಲ್ಲಿ ವಿಜಯನಗರ ಸಾಮ್ರಾಜ್ಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳನ್ನು ಬರೆಯಲಾಗಿದ್ದು, ಅದರಲ್ಲಿ  ವಿಜಯನಗರ ಸಾಮ್ರಾಜ್ಯದ ಸ್ಥಾಪಕ ಯಾರು ಎಂದು ಒಂದೇ ವಾಕ್ಯದಲ್ಲಿ ಉತ್ತರಿಸಿ ಎಂದು ಪ್ರಶ್ನೆ ಕೇಳಲಾಗಿದೆ. ಈ ಪ್ರಶ್ನೆಗೆ ವಿಜಯನಗರ ಸಾಮ್ರಾಜ್ಯದ ಸ್ಥಾಪಕ ಆನಂದ ಸಿಂಗ್​ ಎಂದು ಬರೆಯಲಾಗಿದೆ. 

100ಕ್ಕೆ 100 ಅಂಕ ಪಡೆದ ವಿದ್ಯಾರ್ಥಿನಿಯ ಕನ್ನಡ ಉತ್ತರ ಪತ್ರಿಕೆ ಹೀಗಿದೆ ನೋಡಿ.....

ವಿಜಯನಗರ ಕ್ಷೇತ್ರದ ಶಾಸಕ ಆನಂದ ಸಿಂಗ್​ ಮೂಲ ಸೌಕರ್ಯ, ಹಜ್​ ಮತ್ತು ವಕ್ಫ  ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ವಿಜಯನಗರ ಜಿಲ್ಲೆ ರಚನೆ ಬೇಡಿಕೆಯೊಂದಿಗೆ ಆನಂದ ಸಿಂಗ್​ ತೀವ್ರ ಚರ್ಚೆಯಲ್ಲಿದ್ದಾರೆ.

ವಿಜಯನಗರ ಜಿಲ್ಲೆಯನ್ನಾಗಿ ಮಾಡುವಲ್ಲಿ ಸಚಿವ ಆನಂದ್ ಸಿಂಗ್ ಯಶಸ್ವಿಯಾಗಿದ್ದು, ಬಳ್ಳಾರಿ ರೆಡ್ಡಿ ಸಹೋದರರ ವಿರೋಧದ ನಡುವೆಯೂ ಸರ್ಕಾರಕ್ಕೆ ಒತ್ತಡ ಹಾಕಿ ವಿಜಯನಗರವನ್ನು ರಾಜ್ಯದ 31 ಜಿಲ್ಲೆಯನ್ನಾಗಿ ಮಾಡಿಸಿದ್ದಾರೆ.

 1336ರಲ್ಲಿ ಸಂಗಮ ರಾಜಮನೆತನದ ಅಕ್ಕ-ಬುಕ್ಕರು ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿದ್ದಾರೆ.

click me!