ಸಿಎ ಪರೀಕ್ಷೆಯಲ್ಲಿ ಗದುಗಿನ ಆದಿತ್ಯ ರಾಜ್ಯಕ್ಕೆ ಪ್ರಥಮ!

Published : Feb 03, 2021, 12:46 PM ISTUpdated : Feb 03, 2021, 02:16 PM IST
ಸಿಎ ಪರೀಕ್ಷೆಯಲ್ಲಿ ಗದುಗಿನ ಆದಿತ್ಯ ರಾಜ್ಯಕ್ಕೆ ಪ್ರಥಮ!

ಸಾರಾಂಶ

ಸಿಎ ಪರೀಕ್ಷೆಯಲ್ಲಿ ಗದುಗಿನ ಹುಡುಗ| ರಾಜ್ಯಕ್ಕೆ ನಂ.1, ದೇಶಕ್ಕೆ 10ನೇ ರಾರ‍ಯಂಕ್‌| ದಿನಕ್ಕೆ 8 ರಿಂದ 10 ತಾಸು ಅಧ್ಯಯನ ಮಾಡ್ತಿದ್ದೆ| ತಂದೆ ಪುರೋಹಿತ್ಯ ಮಾಡಿ ಬೆಳೆಸಿದ್ದಾರೆ: ಆದಿತ್ಯ

ಗದಗ(ಫೆ.03): ಚಾರ್ಟ​ರ್ಡ್‌ ಅಕೌಂಟೆಂಡ್‌ (ಸಿಎ) ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ನಗ​ರದ ಆದಿತ್ಯ ಚಂದ್ರಶೇಖರ್‌ ಅಡಿಗ 10ನೇ ರಾರ‍ಯಂಕ್‌ ಹಾಗೂ ರಾಜ್ಯಕ್ಕೆ ಪ್ರಥಮ ರಾರ‍ಯಂಕ್‌ಗಳಿ​ಸಿದ್ದಾರೆ.

2013-14ನೇ ಸಾಲಿನಲ್ಲಿ ಗದಗ ನಗರದ ಎಎಸ್‌ಎಸ್‌ ಕಾಲೇಜಿನಲ್ಲಿ ಪಿಯುಸಿ ಪೂರ್ಣಗೊಳಿಸಿದ ಆದಿತ್ಯ ಪ್ರಥಮ ಪ್ರಯತ್ನದಲ್ಲಿಯೇ ಸಿಪಿಟಿ ತೇರ್ಗಡೆಯಾಗಿ ಸಿಎ ಪರೀಕ್ಷೆಗೆ ಅರ್ಹತೆ ಪಡೆದಿದ್ದರು. ತಮ್ಮ ಈ ಯಶ​ಸ್ಸಿನ ಬಗ್ಗೆ ಕನ್ನ​ಡ​ಪ್ರ​ಭ​ದೊಂದಿಗೆ ಸಂತಸ ಹಂಚಿ​ಕೊಂಡ ಅವರು, ತಂದೆ, ತಾಯಿ ಮುಖ್ಯವಾಗಿ ಸಹೋದರಿ ದಿವ್ಯಾ ಅವರ ಪ್ರೋತ್ಸಾಹವೇ ನನ್ನ ಯಶಸ್ಸಿಗೆ ಕಾರಣವಾಗಿದೆ. ತಂದೆ ಪೌರೋ​ಹಿತ್ಯ ಮಾಡಿ ನಮ್ಮನ್ನು ಪಾಲನೆ, ಪೋಷಣೆ ಮಾಡಿದ್ದಾರೆ ಎಂದರು.

ನಾನು ಸಿಎ ಮೊದಲ ಪ್ರಯತ್ನದಲ್ಲಿ ವಿಫಲನಾಗಿದ್ದೆ. ಆದರೆ, ನಿರಂತರ ಪರಿಶ್ರಮದಿಂದ 2ನೇ ಪ್ರಯತ್ನದಲ್ಲಿ ಯಶಸ್ಸು ಸಿಕ್ಕಿದೆ. ದಿನಕ್ಕೆ 8ರಿಂದ 10 ತಾಸು ಅಧ್ಯಯನ ಮಾಡುತ್ತಿದ್ದೆ. ಮುಖ್ಯವಾಗಿ ಯುವಕರಲ್ಲಿ ತಾಳ್ಮೆ ಮತ್ತು ನಿರಂತರ ಅಧ್ಯಯನ ಅಗತ್ಯ. ಪಾಲಕರು ಮಕ್ಕಳಿಗೆ ಮನೆಯಲ್ಲಿ ಪೂರಕವಾದ ವಾತಾವರಣ ನಿರ್ಮಿಸಬೇಕು ಎಂದು ತಿಳಿಸಿದರು.

PREV
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ