ಎಂಐಟಿ ಬೆಂಗಳೂರು ಕಾಲೇಜಿಗೆ ಹಿರಿಮೆ, ಬರೋಬ್ಬರಿ ₹52 ಲಕ್ಷದ ಪ್ಯಾಕೇಜ್‌ ಉದ್ಯೋಗ ಪಡೆದ ವಿದ್ಯಾರ್ಥಿ!

Published : Jun 30, 2025, 06:28 PM IST
MAHE Bengaluru placements

ಸಾರಾಂಶ

ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ), ಬೆಂಗಳೂರು ತನ್ನ ಮೊದಲ ಬ್ಯಾಚ್ ಪ್ಲೇಸ್‌ಮೆಂಟ್‌ನಲ್ಲಿ ಅದ್ಭುತ ಸಾಧನೆ ಮಾಡಿದೆ. ಒಬ್ಬ ವಿದ್ಯಾರ್ಥಿ ₹52 ಲಕ್ಷದ ವಾರ್ಷಿಕ ಪ್ಯಾಕೇಜ್ ಪಡೆದಿದ್ದಾರೆ, ಇದು ಸಂಸ್ಥೆಯ ಯಶಸ್ಸಿಗೆ ಸಾಕ್ಷಿಯಾಗಿದೆ.

ಬೆಂಗಳೂರು (ಜೂನ್ 30): ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಬೆಂಗಳೂರು ಕ್ಯಾಂಪಸ್‌ನ ಭಾಗವಾದ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ), ರಾಷ್ಟ್ರೀಯ ಸಂಸ್ತೆಗಳ ಶ್ರೇಣಿಯಲ್ಲಿ (NIRF 2024) ದೇಶದ ನಾಲ್ಕನೇ ಸ್ಥಾನದಲ್ಲಿ ಇದ್ದು, ಈ ವರ್ಷ ತನ್ನ ಮೊದಲ ಬ್ಯಾಚ್‌ನ ಪ್ಲೇಸ್‌ಮೆಂಟ್‌ನಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದಾರೆ.

ಎಂಐಟಿ ಬೆಂಗಳೂರು ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಬಿ.ಟೆಕ್ ವಿದ್ಯಾರ್ಥಿ ವಿಜ್ವಲ್ ನಾರಾಯಣ, ವರ್ಷಕ್ಕೆ ₹52 ಲಕ್ಷ ಪ್ಯಾಕೇಜ್ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಸಂಸ್ಥೆಯ ಪ್ಲೇಸ್‌ಮೆಂಟ್ ಸಾಧನೆಯಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಇದು ಎಂಐಟಿ ಬೆಂಗಳೂರಿನ ಮೊದಲ ಪದವಿ ಬ್ಯಾಚ್‌ಗೆ ಮಹತ್ವದ ಹೆಜ್ಜೆಯಾಗಿದೆ.

ಇದರೊಂದಿಗೆ ಇನ್ನೂ ಹಲವಾರು ವಿಭಾಗದ ವಿದ್ಯಾರ್ಥಿಗಳು ಉನ್ನತ ವೇತನದ ಅವಕಾಶಗಳನ್ನು ಪಡೆದುಕೊಂಡಿದ್ದಾರೆ. ಪ್ರಮುಖ ಹೀರಿಂಗ್‌ಗಳು:

  • ಪ್ರದ್ಯೋತ ಕೀರ್ತಿಕರ್ (ಕಂಪ್ಯೂಟರ್ ಸೈನ್ಸ್): ₹22 ಲಕ್ಷ ವಾರ್ಷಿಕ ಪ್ಯಾಕೇಜ್
  • ಹಿಮವರ್ಷಿಣಿ ಬೀಡಾಲ, ಶ್ರೀಯಾ ಖೇರಾ (CSE – AI & ಸೈಬರ್ ಸೆಕ್ಯುರಿಟಿ): ತಲಾ ₹18.6 ಲಕ್ಷ ಪ್ಯಾಕೇಜ್
  • ಪಿ. ಯಾಸ್ಮೀನ್ ಬೇಗಂ (ಐಟಿ): ₹15 ಲಕ್ಷ ಪ್ಯಾಕೇಜ್

“ಸಾಂಪ್ರದಾಯಿಕ ಶಿಕ್ಷಣವನ್ನು ಮೀರಿ ವೃತ್ತಿಪರರನ್ನು ಸಿದ್ಧಪಡಿಸುವ ಬಗ್ಗೆಯೇ ನಾವು ಹೆಚ್ಚು ಗಮನ ಹರಿಸುತ್ತೇವೆ. ಆಧುನಿಕ ಮಾರುಕಟ್ಟೆ ಬೇಡಿಕೆಗೆ ಸರಿಹೊಂದುವ ಪಠ್ಯಕ್ರಮವನ್ನು ರೂಪಿಸುವ ಹಾಗು ಪ್ರಾಯೋಗಿಕ ಕೌಶಲ್ಯವನ್ನು ವಿದ್ಯಾರ್ಥಿಗಳಲ್ಲಿ ಅಭಿವೃದ್ಧಿ ಪಡಿಸುವ ಮೂಲಕ, ನಮ್ಮ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮವಾಗಿ ಸ್ಪರ್ಧಿಸಲು ತಯಾರಾಗಿದ್ದಾರೆಯೇ ಎನ್ನುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ. ಅದಕ್ಕೆ ನಮ್ಮಲ್ಲಿ ಆಗುವ ಕ್ಯಾಂಪಸ್ ಆಯ್ಕೆ ಮತ್ತು ನಮ್ಮ ವಿದ್ಯಾರ್ಥಿಗಳಿಗೆ ಸಿಕ್ಕ ಪ್ಯಾಕೇಜ್‌ಗಳು ಸಾಕ್ಷಿಯಾಗಿದೆ ಎಂದು ಮಾಹೆ ಬೆಂಗಳೂರು ಕ್ಯಾಂಪಸ್‌ನ ಪ್ರೊ-ವೈಸ್ ಚಾನ್ಸೆಲರ್ ಡಾ. ಮಧು ವೀರರಾಘವನ್ ಹೇಳಿದರು.

ಎಂಐಟಿ ಬೆಂಗಳೂರು ನಿರ್ದೇಶಕ ಡಾ. ಐವೆನ್ ಜೋಸ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿಎಂಐಟಿ ಬೆಂಗಳೂರಿನಲ್ಲಿ, ಸಮಯಕ್ಕೆ ತಕ್ಕಂತೆ ನವೀಕರಣಗೊಳ್ಳುವುದರ ಜೊತೆಗೆ ಈಗಿನ ಉದ್ಯಮ ಕ್ಷೇತ್ರಕ್ಕೆ ಅಗತ್ಯವಿರುವ ಕಲಿಕಾ ವ್ಯವಸ್ಥೆ ನಮ್ಮಲ್ಲಿ ಇದೆ. ಪ್ರತಿಷ್ಠಿತ ಕಂಪನಿಗಳು, ಸಂಶೋಧನಾ ಸಂಸ್ಥೆಗಳು ಮತ್ತು ಸ್ಟಾರ್ಟ್-ಅಪ್ ಎಲ್ಲವೂ ನಮ್ಮ ಸಂಸ್ಥೆ ಜೊತೆಗೆ ಉತ್ತಮ ಸಂಬಂಧ ಇರುವುದರಿಂದ ನಮ್ಮ ವಿದ್ಯಾರ್ಥಿಗಳಿಗೆ ವಿಷಯದ ಕುರಿತು ಸಮಗ್ರ ಜ್ಞಾನ ದೊರೆಯುತ್ತದೆ. ಸುಧಾರಿತ ಮೂಲಸೌಕರ್ಯ, ಅಂತರಶಿಸ್ತೀಯ ಕೆಲಸಗಳು ಮತ್ತು ಉತ್ತಮ ಅಧ್ಯಾಪಕರ ವರ್ಗ ಇರುವುದರಿಂದ ನಮ್ಮಲ್ಲಿ ಕಲಿಯುವ ವಿದ್ಯಾರ್ಥಿಗಳು ನೈಜ-ಪ್ರಪಂಚದ ಸವಾಲುಗಳ ಬಗ್ಗೆ ಕೆಲಸ ಮಾಡಿ ಅದರ ಅನುಭವನ್ನು ಪಡೆಯುವುದರಿಂದಲೇ ಒಳ್ಳೆಯ ಉದ್ಯೋಗವನ್ನು ಪಡೆಯುತ್ತಿದ್ದಾರೆ ಎಂದರು.

ಇನ್ನು ಇಂಟರ್ನ್‌ಶಿಪ್ ಡ್ರೈವ್‌ನಲ್ಲಿ ಎಂಐಟಿ ಬೆಂಗಳೂರು ವಿದ್ಯಾರ್ಥಿಗಳು ಉತ್ತಮ ಸ್ಟೈಫಂಡ್ ಪಡೆಯುವಲ್ಲಿ ಯಶಸ್ವಿಯಾದರು:

  • ಅತ್ಯಧಿಕ ಸ್ಟೈಫಂಡ್: ₹1.1 ಲಕ್ಷ ತಿಂಗಳಿಗೆ
  • ಸರಾಸರಿ ಸ್ಟೈಫಂಡ್: ₹38,000 ತಿಂಗಳಿಗೆ
  • ಇನ್ನೊಂದು ಸರಾಸರಿ ಸ್ಟೈಫಂಡ್: ₹30,000 ತಿಂಗಳಿಗೆ

ಈ ವರ್ಷ ತಂತ್ರಜ್ಞಾನ, ಸಲಹಾ, ಆರೋಗ್ಯ, ಇಂಧನ ಮತ್ತು ಹಣಕಾಸು ಕ್ಷೇತ್ರಗಳ 250ಕ್ಕೂ ಹೆಚ್ಚು ಕಂಪನಿಗಳು ಪ್ಲೇಸ್‌ಮೆಂಟ್‌ನಲ್ಲಿ ಭಾಗವಹಿಸಿದ್ದವು. ಭಾಗಿಯಾದ ಪ್ರಮುಖ ಕಂಪನಿಗಳಲ್ಲಿ: ಮೈಕ್ರೋಸಾಫ್ಟ್, ಅಮೆಜಾನ್, ಮೆಕಿನ್ಸೆ & ಕಂಪನಿ, ಕೊಂಪ್ರೈಸ್, ಆಪ್ಟಮ್, ಸವಿಯಂಟ್, ಶೆಲ್, ಹೆಚ್‌ಪಿಇ, ಇನ್ಫೋಸಿಸ್, ಟಿಸಿಎಸ್, ಇಂಟೆಲ್, ಗೋಲ್ಡ್‌ಮನ್ ಸ್ಯಾಚ್ಸ್, ಫಿಲಿಪ್ಸ್, ಯೂನಿಲಿವರ್, ಡೆಲ್, ಕ್ಯಾಪ್‌ಜೆಮಿನಿ, ಸ್ವಿಗ್ಗಿ, ಲುಮಿಕ್, ಬ್ಲ್ಯಾಕ್‌ರಾಕ್, ಕಾಗ್ನಿಜೆಂಟ್, ಸೀಮೆನ್ಸ್ ಹೆಲ್ತ್‌ನಿಯರ್ಸ್ ಮೊದಲಾದವು ಸೇರಿವೆ.

ಮಾಹೆ ಬೆಂಗಳೂರು ಕುರಿತು

1953ರಲ್ಲಿ ಸ್ಥಾಪನೆಯಾದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ಭಾರತದ ಅತ್ಯುತ್ತಮ ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದ್ದು, ವಿಶಿಷ್ಟ ಶೈಕ್ಷಣಿಕ ಸಾಧನೆ, ಆಧುನಿಕ ಮೂಲಸೌಕರ್ಯ ಮತ್ತು ಸಂಶೋಧನಾ ಕೊಡುಗೆಗಳ ಮೂಲಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ.

2020ರಲ್ಲಿ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯ ಮಾಹೆಗೆ ಇನ್ಸ್ಟಿಟ್ಯೂಷನ್ ಆಫ್ ಎಮಿನೆನ್ಸ್ ಹುದ್ದೆಯನ್ನು ನೀಡಿದ್ದು, ಈ ಸಂಸ್ಥೆ ಪರಿವರ್ತನಾತ್ಮಕ ಕಲಿಕೆಯನ್ನು ಬಯಸುವ ವಿದ್ಯಾರ್ಥಿಗಳ ಪ್ರಥಮ ಆಯ್ಕೆಯಾಗಿದೆ.

ಪ್ರಸ್ತುತ NIRF ಶ್ರೇಣಿಯಲ್ಲಿ ಮಾಹೆ 6ನೇ ಸ್ಥಾನದಲ್ಲಿದ್ದು, ಮಾಹೆ ಬೆಂಗಳೂರು ಕ್ಯಾಂಪಸ್ ಹೆಚ್ಚಿನ ಅರ್ಹ ಅಧ್ಯಾಪಕರು ಮತ್ತು ಮಾರ್ಗದರ್ಶಕರಿಂದ ಬೆಂಬಲಿತವಾಗಿ ಸಮಗ್ರ ಶಿಕ್ಷಣವನ್ನು ನೀಡುತ್ತಿದೆ. ಇಲ್ಲಿ ವಿದ್ಯಾರ್ಥಿಗಳು ನವೋದ್ಯಮ, ತಂತ್ರಜ್ಞಾನ ಮತ್ತು ವೈವಿಧ್ಯಮಯ ಅವಕಾಶಗಳಲ್ಲಿ ತೊಡಗಿಸಿಕೊಳ್ಳುತ್ತಾರೆ, ತಮ್ಮ ವೃತ್ತಿಪರ ಭವಿಷ್ಯವನ್ನು ರೂಪಿಸಿಕೊಳ್ಳುತ್ತಾರೆ.

ಮಾಹೆ ಬೆಂಗಳೂರು ಕ್ಯಾಂಪಸ್, ಮುಂದಿನ ಪೀಳಿಗೆಗಾಗಿ ತಂತ್ರಜ್ಞಾನಾಧಾರಿತ ಕಲಿಕಾ ವಾತಾವರಣವನ್ನು ನಿರ್ಮಿಸುತ್ತಿದೆ. ಇಲ್ಲಿನ ವಿದ್ಯಾರ್ಥಿಗಳಿಗೆ ಅಪಾರ ಅವಕಾಶಗಳು ಮತ್ತು ಅಸಾಧಾರಣ ಬೆಳವಣಿಗೆಗೆ ಅವಕಾಶ ದೊರೆಯುತ್ತಿದೆ.

PREV
Read more Articles on
click me!

Recommended Stories

Karnataka 2nd PUC result 2026: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಕ್ಕೆ ದಿನಾಂಕ ಫಿಕ್ಸ್, ರಿಸಲ್ಟ್ ನೋಡೋದು ಸುಲಭ, ಇಲ್ಲಿದೆ ಲಿಂಕ್
ದ್ವಿತೀಯ ಪಿಯುಸಿ ರಿಸಲ್ಟ್ ಇಂದು ಪ್ರಕಟಣೆ ಆಗಲ್ಲ, ಉಪಚುನಾವಣೆ ಕಾರಣವೇ? ಫಲಿತಾಂಶದ ಹೊಸ ದಿನಾಂಕ ಯಾವಾಗ? ಇಲ್ಲಿದೆ ಮಾಹಿತಿ