9 ರಿಂದ 12 ನೇ ತರಗತಿಗೆ ಶಿಕ್ಷಕರ ಮಾರ್ಗದರ್ಶನಕ್ಕೆ ಅವಕಾಶ: ಸಚಿವ ಸುರೇಶ್‌ ಕುಮಾರ್‌

By Suvarna News  |  First Published Sep 10, 2020, 1:12 PM IST

ಡ್ರಗ್ಸ್‌ ಯುವ ಜನಾಂಗವನ್ನು ಹಾಳುಗೆಡುವುತ್ತದೆ. ಯುವಕರು ಅಡಿಕ್ಟ್ ಆದರೆ ಶತ್ರು ರಾಷ್ಟ್ರಗಳಿಗೆ ಅನುಕೂಲ ಆಗುತ್ತದೆ. ಡ್ರಗ್ಸ್‌ ವಿರುದ್ಧ ಡಿಕೆಶಿ ಮತ್ತು ಯಾರೇ ಇರಲಿ ಒಟ್ಟಾಗಿ ಹೋರಾಡಬೇಕಿದೆ ಎಂದು ಹೇಳಿದ ಸಚಿವ ಸುರೇಶ್‌ ಕುಮಾರ್‌


ಧಾರವಾಡ(ಸೆ.10): ಸೆ. 21 ರಿಂದ 9 ರಿಂದ 12 ನೇ ತರಗತಿಗೆ ಶಿಕ್ಷಕರ ಮಾರ್ಗದರ್ಶನಕ್ಕೆ ಅವಕಾಶ ಮಾಡಿ ಕೊಡಲಾಗಿದೆ. ಈ ನಾಲ್ಕೂ ತರಗತಿಯ ವಿದ್ಯಾರ್ಥಿಗಳು ಶಾಲೆಗೆ ಬಂದು ಮಾರ್ಗದರ್ಶನ ಪಡೆಯಬಹುದಾಗಿದೆ. ಈಗಾಗಲೇ ಕೇಂದ್ರದಿಂದ SOP ಬಂದಿದೆ.  ನಮ್ಮ ರಾಜ್ಯದ SOP ತಯಾರು ಮಾಡುತ್ತಿದ್ದೇವೆ. ಏನೇನೂ ಮಾಡಬೇಕೆನ್ನುವ ತಯಾರಿ ಮಾಡುತ್ತಿದ್ದೇವೆ. ಸೆ. 12 ಅಥವಾ 13 ಕ್ಕೆ ಅದನ್ನು ಪ್ರಕಟಿಸುತ್ತೇವೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರು ಸ್ಪಷ್ಟಪಡಿಸಿದ್ದಾರೆ. 

ಡ್ರಗ್ ಕೇಸ್‌ನಲ್ಲಿ ಬಿಜೆಪಿ ನಾಯಕರ ನಂಟಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆರೋಪ ವಿಚಾರದ ಬಗ್ಗೆ ಇಂದು(ಗುರುವಾರ) ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಯಾರ ಜೊತೆ ನಂಟಿದೆಯೋ ಇಲ್ಲವೋ ಗೊತ್ತಿಲ್ಲ, ಡ್ರಗ್ಸ್‌ ವಿಚಾರ ಎನ್ನುವುದು ಯಾವುದೇ ಪಕ್ಷಕ್ಕೆ ಸೇರಿದ್ದಲ್ಲ. ನಾವು ಕೂಡ ಫೋಟೊಗಳನ್ನು ನೋಡುತ್ತಿದ್ದೇವೆ. ಯಾವ ಯಾವ ನಾಯಕರ ಜೊತೆ ಅವರೆಲ್ಲ ಇದ್ದರೆಂಬುದನ್ನು ನೋಡುತ್ತಿದ್ದೇವೆ. ಇದನ್ನು ಪಕ್ಷಾತೀತವಾಗಿ ವಿರೋಧಿಸಬೇಕು, ಪಕ್ಷಾತೀತವಾಗಿ ಹೋರಾಟ ಮಾಡಬೇಕಿದೆ ಎಂದು ತಿಳಿಸಿದ್ದಾರೆ.

Tap to resize

Latest Videos

undefined

ಕೊನೆಗೂ ಶಾಲೆ ಪ್ರಾರಂಭಕ್ಕೆ ಮುಹೂರ್ತ ಫಿಕ್ಸ್: ಮಾರ್ಗಸೂಚಿ ಪ್ರಕಟ

ಡ್ರಗ್ಸ್‌ ಯುವ ಜನಾಂಗವನ್ನು ಹಾಳುಗೆಡುವುತ್ತದೆ. ಯುವಕರು ಅಡಿಕ್ಟ್ ಆದರೆ ಶತ್ರು ರಾಷ್ಟ್ರಗಳಿಗೆ ಅನುಕೂಲ ಆಗುತ್ತದೆ. ಡ್ರಗ್ಸ್‌ ವಿರುದ್ಧ ಡಿಕೆಶಿ ಮತ್ತು ಯಾರೇ ಇರಲಿ ಒಟ್ಟಾಗಿ ಹೋರಾಡಬೇಕಿದೆ ಎಂದು ಹೇಳಿದ್ದಾರೆ.

ನಗರದ ಡಯಟ್ ಹಿರಿಯ ಉಪನ್ಯಾಸಕ ಮಹದೇವ ಬ.ಮಾಳಗಿ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಇನ್ನು ಇದೇ ವೇಳೆ ಅನಾರೋಗ್ಯ ಪೀಡಿತ ಮಾಳಗಿ ಅವರಿಗೆ ನಿವೃತ್ತಿ ಆದೇಶ ನೀಡಿದ್ದಾರೆ. ಮೆಡಿಕಲ್ ಅರೋವೆನ್ಸ್ ಹಾಗೂ ಅನುಕಂಪದ ಆಧಾರದ ಮೇಲೆ ನೌಕರಿ ಕೊಡುವ ಕುರಿತು ಸರಕಾರ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
 

click me!