ಮೆರಿಟ್‌, ರೋಸ್ಟರ್‌ ಆಧರಿಸಿ ಡಿಗ್ರಿ ಕಾಲೇಜಿಗೆ ಪ್ರವೇಶ

By Kannadaprabha NewsFirst Published Sep 10, 2020, 11:39 AM IST
Highlights

ಲಾಕ್‌ಡೌನ್ ಹಿನ್ನೆಲೆಯಲ್ಲಿ ಶಿಕ್ಷಣ ವ್ಯವಸ್ಥೆ ಅಲ್ಲೋಲ ಕಲ್ಲೋಲವಾಗಿದ್ದು, ಇದೀಗ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದೆ. ಇದಕ್ಕೆ ಮೆರಿಟ್ ಆಧರಿಸಿ ದಾಖಲಾತಿ ನಡೆಸಲು ಕಾಲೇಜು ಶಿಕ್ಷಣ ಇಲಾಖೆ ಹೇಳಿದೆ. 

ಬೆಂಗಳೂರು (ಸೆ.10):  ರಾಜ್ಯದ ಎಲ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ನಡೆಯುವ 2020-21ನೇ ಸಾಲಿನ ಆನ್‌ಲೈನ್‌ ಪ್ರವೇಶ ಪ್ರಕ್ರಿಯೆಯನ್ನು ವಿದ್ಯಾರ್ಥಿಗಳ ಮೆರಿಟ್‌ ಹಾಗೂ ರೋಸ್ಟರ್‌ ಪಟ್ಟಿಯನ್ನು ಆಧರಿಸಿ ಅಂತಿಮಗೊಳಿಸಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆ ಸೂಚಿಸಿದೆ.

ಈಗಾಗಲೇ ಪ್ರವೇಶಾತಿ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ. ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಆದ್ಯತೆ ಮೇರೆಗೆ ಕಾಲೇಜುವಾರು ಮೆರಿಟ್‌, ರೋಸ್ಟರ್‌ ಅನ್ವಯ ಪಟ್ಟಿಯನ್ನು ಸಿದ್ಧಪಡಿಸಿ ಎರಡು ಹಂತಗಳಲ್ಲಿ ಈಗಾಗಲೇ ಕಾಲೇಜುಗಳಿಗೆ ರವಾನಿಸಲಾಗಿದೆ.

ಶೇ.100 ಶಿಕ್ಷಣ ಸಿಬ್ಬಂದಿ ಭರ್ತಿ ಮಾಡಿ: ವಾಲಾ ...

ಇದರ ಅನ್ವಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಬೇಕು. ಸಲ್ಲಿಕೆಯಾದ ಅರ್ಜಿಗಳು ಕಾಲೇಜಿನ ಪೋರ್ಟಲ್‌ಗಳಲ್ಲಿ ನೇರವಾಗಿ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಇಲಾಖೆಯು ಆಯಾ ಕಾಲೇಜು ಪ್ರಾಂಶುಪಾಲರಿಗೆ ಸೂಚನೆ ನೀಡಿದೆ.

click me!