* ಕುಂದೂರು ಕನಸ್ಟ್ರಕ್ಷನ್ ನಿರ್ಮಿಸಿದ ನೂತನ ಶಾಲಾ ಕಟ್ಟಡ ಹಸ್ತಾಂತರ
* ಶಿಕ್ಷಣ ಸಚಿವರ ಜೊತೆ ಸ್ಕೂಲ್ ಕಟ್ಟಡ ಉದ್ಘಾಟಿಸಿದ ಸಂಸದ ತೇಜಸ್ವಿ ಸೂರ್ಯ
* ನಾಲ್ಕು ವರ್ಷ ಆಗದ ಗೊಂದಲ ಈಗ ಎಕೆ ?
ವರದಿ: ವರದರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ದಾವಣಗೆರೆ
ದಾವಣಗೆರೆ(ಜೂ.14): ರಾಜ್ಯಾದ್ಯಂತ ಅವಶ್ಯಕತೆ ಇರುವ ಸರ್ಕಾರಿ ಶಾಲೆಗಳಿಗೆ ಸುಸಜ್ಜಿತ ಕಟ್ಟಡದೊಂದಿಗೆ ಮೂಲಭೂತ ಸೌಲಭ್ಯಗಳನ್ನು ನೀಡಿ, ಗುಣಮಟ್ಟದ ಶಿಕ್ಷಣ ನೀಡುವ ಧ್ಯೇಯವನ್ನು ಸರ್ಕಾರ ಹೊಂದಿದೆ ಎಂದು ಪ್ರಾಥಮಿಕ, ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ ನಾಗೇಶ್ ಹೇಳಿದರು.
undefined
ಇಂದು(ಮಂಗಳವಾರ) ದಾವಣಗೆರೆ ತಾಲ್ಲೂಕಿನ ಹಳೆ ಬಿಸಲೇರಿ ಗ್ರಾಮದಲ್ಲಿ ದಾನಿಗಳಾದ ಶ್ರೀಮತಿ ಗೌರಮ್ಮ ಕುಂದೂರು ವೀರಭದ್ರಪ್ಪ ಟ್ರಸ್ಟ್ ಹಾಗೂ ಕುಂದೂರು ಕನ್‍ಸ್ಟ್ರಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇವರುಗಳು ನಿರ್ಮಿಸಿರುವ ನೂತನ ಶಾಲಾ ಕಟ್ಟಡದ ಹಸ್ತಾಂತರ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪಠ್ಯ ಪುಸ್ತಕ ವಾರ್: ಬರಗೂರು ಸಮಿತಿ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಮಾಡಿತ್ತಾ?
ಈ ಹಿಂದೆ ಗ್ರಾಮದ ಶಾಲೆಗಳಲ್ಲಿ ಗ್ರಾಮದ ಶಾಲೆಗೆ ಬೇಕಾದ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಗ್ರಾಮಸ್ಥರು ಒದಗಿಸುತ್ತಿದ್ದರು. ಅದರಂತೆಯೇ ಗುರುಕುಲ ಪದ್ದತಿಯಲ್ಲಿ ಋಷಿಮುನಿಗಳಿಗೆ ರಾಜರು ಕಲಿಕೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುತಿದ್ದರು, ಅದರ ಮುಂದುವರಿದ ಭಾಗದಂತೆ ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಗೊಳಿಸಿ ಸುಸಜ್ಜಿತ ಶಾಲೆಯ ಕಟ್ಟಡಗಳನ್ನು ನಿರ್ಮಿಸಿ ತಾನು ಹುಟ್ಟಿದ ನೆಲಕ್ಕೆ ಕೊಡುಗೆ ನೀಡಿದ ಕೆ.ವಿ ಬಸವನಗೌಡ ಹಾಗೂ ಅವರ ಕುಟುಂಬದವರ ಸಾಮಾಜಿಕ ಸೇವಾ ಕಾರ್ಯವನ್ನು ಎಲ್ಲರೂ ಸ್ಮರಿಸಲೇಬೇಕು ಎಂದರು.
ಕೇಂದ್ರ ಸರ್ಕಾರ ರೂಪಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ತಿಳಿಸಿರುವಂತೆ ಸ್ಕೂಲ್ ಕಾಂಪ್ಲೆಕ್ಸ್ ಎನ್ನುವ ಅಂಗನವಾಡಿ ಒಳಗೊಂಡ ಶಾಲಾ ಪರಿಕಲ್ಪನೆಯನ್ನು ಮೊದಲ ಬಾರಿಗೆ ಹಳೆ ಬಿಸಲೇರಿಯ ನೂತನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಳವಡಿಸಿಕೊಂಡು ಕಟ್ಟಡ ನಿರ್ಮಾಣ ಮಾಡಿರುವುದು ಉತ್ತಮ ಆಲೋಚನೆಯಾಗಿದೆ. ಸರ್ವ ಶಿಕ್ಷಣ ಅಭಿಯಾನದ ಮೂಲಕ ಉತ್ತಮ ಶಾಲೆಯ ಕೊಠಡಿಗಳನ್ನು ಒಳಗೊಂಡ ಪರಿಕಲ್ಪನೆಯನ್ನು ಹಿಂದೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕೂಡ ಆಲೋಚಿಸಿದ್ದರು ಎಂದರು.
ಜೆಎನ್‌ಯು ಪತ್ರಕ್ಕೆ ತಿರುಗೇಟು ನೀಡಿದ ಶಿಕ್ಷಣ ಸಚಿವ
ರಾಜ್ಯದ ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ಜೆಎನ್ ಯು ಇತಿಹಾಸ ತಜ್ಞರ ಪತ್ರ ಬಂದಿದೆ ಎಂಬುದಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿಕ್ಷಣ ಸಚಿವರು ಜೆಎನ್‌ಯು ಭಾರತವನ್ನ ತುಕಡಾ ತುಕಡಾ ಮಾಡಿ ಹಾಗೂ ಪಾಕಿಸ್ತಾನ ಧ್ವಜ ಹಾರಿಸಿದ್ದರು. ಇದೇ ಕಾರಣಕ್ಕೆ ರಾಜ್ಯದ ಪಠ್ಯದ ಬಗ್ಗೆ ಅವರು ಪ್ರತಿಕ್ರಿಯೆ ನೀಡುತ್ತಿದ್ದಾರೆ
ತುಕಡೆ ಗ್ಯಾಂಗ್ ಮಾಡಿದ ಕೆಲ್ಸವನ್ನೆ ನಮ್ಮ ರಾಜ್ಯದಲ್ಲಿ ಬರಗೂರು ಸಮಿತಿ ಮಾಡಿದೆ. ಪಠ್ಯಪುಸ್ತಕ ಸಮಿತಿಯಲ್ಲಿ ಜೆಎನ್ ಯು ಪ್ರಾಧ್ಯಾಪಕ ಇದ್ದರು.ಭಾರತವನ್ನ ಒಡೆಯುವ ಹಾಗೂ ಹಿಂದು ಸಮಾಜವನ್ನ ಒಡೆಯುವ ದೊಡ್ಡ ಗ್ಯಾಂಗ್ ಜೆಎಸ್ ಯು ನಲ್ಲಿದೆ ಇದೇ ಕಾರಣ ಭಾರತವನ್ನ ತುಕಡಾ ತುಕಡಾ ಮಾಡುವ ಕೆಲ್ಸಾ ಬರಗೂರ ಸಮಿತಿ ಮಾಡಿದೆ ಎಂದರು. ಬಸವಣ್ಣನವರ ಕುರಿತಾದ ಪಠ್ಯದಲ್ಲಿ ಬರಗೂರು ಸಮಿತಿಯಲ್ಲಿ ಅದ್ಹೇನಿತ್ತೋ ಅದನ್ನು ಮುಂದುವರಿಸಲಾಗಿದೆ.
ಬಸವಣ್ಣವರ ಬಗ್ಗೆ ಎನು ಅವಮಾನ ಆಗಿದೆ ಎಂದು ಪ್ರಶ್ನೆ ಮಾಡಿದ ಸಚಿವ ನಾಗೇಶ್ ಬರಗೂರ ಸಮಿತಿಯಲ್ಲಿ ಬಸವಣ್ಣ ಜಿನಿವಾರ ಕಿತ್ತಾಕಿದರು ಅಂತಾ ಇದೆ. ಈ ಸಮಿತಿಯಲ್ಲಿ ಉಪನಯನ ಮಾಡಿಕೊಂಡು ಹೋದ್ರು ಅಂತಾ ಇದೆ ನಾಲ್ಕು ವರ್ಷ ಆಗದ ಗೊಂದಲ ಈಗ ಎಕೆ ? ಎಂದರು.
ಸ್ವಾಮಿಜಿಯವರು ಜನಿವಾರ ಬಗ್ಗೆ ತಮ್ಮ ಪತ್ರದಲ್ಲಿ ಉಲ್ಲೇಖ ಮಾಡಿಲ್ಲ ಎಂದರು. ಪಠ್ಯಪುಸ್ತಕ ಶೇ 75 ರಷ್ಟು ವಿತರಣೆಯಾಗಿದೆ. ಯೂನಿಪಾರ್ಮ್ ಇನ್ನು 90 ದಿನ ಆಗಬಹುದು ಪಠ್ಯಪುಸ್ತಕದ ಪರಿಷ್ಕರಣೆ ವಿಚಾರವಾಗಿ ಎಲ್ಲಾ ಪ್ರತಿಭಟನೆಗಳು ಆಗಿಲ್ಲ. ಎನ್ ಎಸ್ ಯು ಐ ಮುಖಂಡರ ಬಂಧನದ ಬಗ್ಗೆ ಮನೆಯೊಳಗೆ ಬಂದು ಪ್ರತಿಭಟನೆ ಮಾಡುವುದಕ್ಕೆ ಅಧಿಕಾರ ಇಲ್ಲ. ನಾನು ಮಿನಿಸ್ಟರ್ ಆಗಿದ್ದರು ಮನೆಯೊಳಗೆ ನುಗ್ಗಿ ಬಂದು ಪ್ರತಿಭಟನೆ ಮಾಡುವಂತಿಲ್ಲ, ನುಗ್ಗಿ ಬೆಂಕಿ ಇಡೋಕೆ ಯಾರಿಗು ಅಧಿಕಾರ ಇಲ್ಲ ಅದಕ್ಕೆ ಕೋರ್ಟ್ ಡಿಸಿಸನ್ ತಗೊಂಡಿದೆ. ಕೊವಿಡ್ ಬಗ್ಗೆ ಶಾಲೆಗಳಲ್ಲಿ ಎಸ್ ಓ ಪಿ ಬಗ್ಗೆ ಕ್ರಮ ಕೈಗೊಂಡಿದ್ದೇವೆ. 6-15 ರ ವರ್ಷದ ಮಕ್ಕಳಿಗೆ ಲಸಿಕೆ ಮುಗಿದಿದೆ. ಮಕ್ಕಳಿಗೆ 6- 12 ರಿಂದ ಮಾಡಬೇಕು ಹೆಲ್ತ್ ಡಿಪಾರ್ಟ್ಮೆಂಟ್ ನಿಂದ ಸೂಚನೆ ಬಂದ ನಂತರ ಲಸಿಕೆ ಮಾಡಲಾಗುವುದು
ಶಿಕ್ಷಣ ಸಚಿವರ ಜೊತೆ ಸ್ಕೂಲ್ ಕಟ್ಟಡ ಉದ್ಘಾಟಿಸಿದ ಸಂಸದ ತೇಜಸ್ವಿ ಸೂರ್ಯ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಇದೊಂದು ಬಹಳ ಸಂತೋಷದಾಯಕ ಮತ್ತು ಪ್ರೇರಣೆ ನೀಡುವ ಕಾರ್ಯಕ್ರಮವಾಗಿದೆ ಏಕೆಂದರೆ ಕೆ.ವಿ ಬಸವನಗೌಡರವರು ಅತ್ಯಂತ ಆದರ್ಶಪ್ರಾಯ ಕೆಲಸವನ್ನು ಮಾಡಿದ್ದಾರೆ. ಕಟ್ಟಡ ನಿರ್ಮಾಣ ಕಾರ್ಯ ಒಂದು ರೀತಿಯ ಕೆಲಸವಾದರೆ, ಅದನ್ನು ನಿರ್ವಹಿಸಿಕೊಂಡು ಹೋಗುವುದು ಒಂದು ಜವಾಬ್ದಾರಿಯುತ ಕಾರ್ಯವಾಗಿದೆ. ನೂತನವಾಗಿ ನಿರ್ಮಾಣವಾಗಿರುವ ಶಾಲೆಯಿಂದ ಭವಿಷ್ಯದ ಭಾರತ ಕಟ್ಟುವ ಶಿಲ್ಪಿಗಳು ಸೃಷ್ಟಿಯಾಗಲಿ, ಅಂಬೇಡ್ಕರ್ ಅಬ್ಡುಲ್ ಕಲಾಂ ಅವರಂತಹ ಮಹಾನ್ ವ್ಯಕ್ತಿಗಳು ಈ ಶಾಲೆಯಿಂದ ಕಲಿತು ಬರಲಿ ಎಂದರು.
ಬರಗೂರು ರಾಮಚಂದ್ರಪ್ಪ ಸಮಿತಿಯಿಂದ ಎಡವಟ್ಟು: ಹುತಾತ್ಮ ವೀರ ಯೋಧ ಸಂದೀಪ್ ಉನ್ನಿಕೃಷ್ಣನ್ ಪಠ್ಯಕ್ಕೆ ಕೊಕ್
ರಾಹುಲ್ ಸೋನಿಯಾ ಇಡಿ ಕೇಸ್ ವಿಚಾರವಾಗಿ ಪ್ರತಿಕ್ರಿಯಿಸಿದ ಸಂಸದ ತೇಜಸ್ವಿ ಸೂರ್ಯ, ದೇಶದ ಸ್ವಾತಂತ್ರ್ಯ ಕ್ಕಾಗಿ ಹೋರಾಟ ಮಾಡಿದ ಕಾಂಗ್ರೆಸ್ ಈಗ ಭ್ರಷ್ಟಾಚಾರ ಪ್ರಕರಣದ ಪರ ಹೋರಾಟ ಮಾಡುತ್ತಿದೆ. ಇದು ದೇಶದ ದುರಂತ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರ ವಿರುದ್ಧ ಕೇಸ್ ದಾಖಲಿಸಿ ಹತ್ತು ಗಂಟೆಗಳ ವಿಚಾರಣೆ ಮಾಡಿದ್ದಾರೆ
ಇದನ್ನ ಸಹಿಸಿಕೊಂಡು ಸುಪ್ರೀಂ ಕೋರ್ಟ್‌ವರೆಗೆ ಹೋರಾಟ ಮಾಡಿದ್ದಾರೆ ಮೋದಿ- ಶಾ ಈಗ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ವಿರುದ್ಧ ಭ್ರಷ್ಟಾಚಾರ ಆರೋಪಕ್ಕೆ ಗ್ರೆಸ್ ಪಕ್ಷ ಇಂತಹ ಪ್ರಕರಣದ ವಿರುದ್ಧ ಬೀದಿಗಳಿದು ಹೋರಾಟ ಮಾಡುತ್ತಿದೆ. ಗಾಂಧಿ ಕುಟುಂಬ ಇನ್ನಾದ್ರು ಪ್ರಜಾಪ್ರಭುತ್ವ ದೇಶದಲ್ಲಿ ಇದ್ದೇವೆ ಎಂಬುದನ್ನ ನೆನಪಿನಲ್ಲಿ ಇಟ್ಟುಕೊಳ್ಳಲಿ ಎಂದ ತೇಜಸ್ವಿ ಸೂರ್ಯ.