Students Scholarship: ಪದವಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

Published : Nov 25, 2021, 11:06 PM ISTUpdated : Nov 25, 2021, 11:11 PM IST
Students Scholarship: ಪದವಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

ಸಾರಾಂಶ

* ಪದವಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ * ವಿದ್ಯಾರ್ಥಿಗಳಿಗೆ 2.5 ಲಕ್ಷ ಡಾಲರ್‌ ವಿದ್ಯಾರ್ಥಿ ವೇತನ ಘೊಷಿಸಿದ ನೆಸ್ಟ್‌ಲಿಂಗ್ ಸಂಸ್ಥೆ * ಬೆಂಗಳೂರಿನಲ್ಲಿ ನೆಸ್ಟ್‌ಲಿಂಗ್ ಸಂಸ್ಥೆಯ ಕೇಂದ್ರ ಪ್ರಾರಂಭ

ಬೆಂಗಳೂರು, (ನ.25): ಪದವಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಕುರಿತು ಉಚಿತವಾಗಿ ಮಾರ್ಗದರ್ಶನ ಹಾಗೂ ಉನ್ನತ ಮಟ್ಟದ ಕಾಲೇಜುಗಳಿಗೆ ದಾಖಲಾತಿಗೆ ಕೌನ್ಸಲಿಂಗ್ ನೀಡಲು ಅಮೆರಿಕಾ ಮೂಲದ ನೆಸ್ಟ್‌ಲಿಂಗ್ (Nestling) ಸಂಸ್ಥೆ ತನ್ನ ಮೊದಲ ಕೌನ್ಸಿಲಿಂಗ್ ಕೇಂದ್ರವನ್ನು ಬೆಂಗಳೂರಿನಲ್ಲಿ (Bengaluru) ಪ್ರಾರಂಭಿಸಿದೆ. 

ಇದಲ್ಲದೆ ಈ ಕೇಂದ್ರಲ್ಲಿ ಕೌನ್ಸಲಿಂಗ್ ಪಡೆದು ವಿದೇಶಕ್ಕೆ ಓದಲು ತೆರಳುವ ವಿದ್ಯಾರ್ಥಿಗಳಿಗೆ 2.5 ಲಕ್ಷ ಡಾಲರ್‌ ಸ್ಕಾಲರ್‌ಶಿಪ್‌(Students scholarship) ನೀಡುವುದಾಗಿಯೂ ಘೋಷಿಸಿದೆ.

Malnutrition In Children: ರಾಜ್ಯದ 7 ಜಿಲ್ಲೆ ಶಾಲಾ ಮಕ್ಕಳಿಗೆ ಗುಡ್‌ ನ್ಯೂಸ್ ನೀಡಿದ ಸರ್ಕಾರ

ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ್  (Dr Ashwath Narayan) ಈ ಕೇಂದ್ರವನ್ನು ಇಂದು (ನ.25) ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪದವಿ (Degree) ಮುಗಿಸಿದ ಬಳಿಕ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ(Higher Education) ಬಗ್ಗೆ ಸಾಕಷ್ಟು ಗೊಂದಲ ಹಾಗೂ ಮಾಹಿತಿ ಕೊರತೆ ಇರುತ್ತದೆ. ನೆಸ್ಟ್‌ಲಿಂಗ್  ಕೇಂದ್ರವು ಉನ್ನತ ಶಿಕ್ಷಣದಲ್ಲಿ  ಯಾವ ಕೋರ್ಸ್‌ಗಳಿಗೆ ದಾಖಲಾಗಬಹುದು, ಎಜುಕೇಷನ್ ಲೋನ್, ಇಂಟರ್ನ್ಶಿಪ್, ವಿದ್ಯಾರ್ಥಿವೇತನ ಇತ್ಯಾದಿ ಬಗ್ಗೆ ಸಂಪೂರ್ಣ ನೆರವು ಹಾಗೂ ಮಾರ್ಗದರ್ಶನ ನೀಡಲಿದೆ. ಅದರಲ್ಲೂ ವಿದೇಶದಲ್ಲಿ ವ್ಯಾಸಾಂಗ ಮಾಡುವ ವಿದ್ಯಾರ್ಥಿಗಳಿಗೆ ವೀಸಾ ನೆರವು ಸೇರಿದಂತೆ ಇತರೆ ಕೌನ್ಸಲಿಂಗ್‌ನನ್ನು ಈ ಕೇಂದ್ರ ನೀಡುತ್ತಿರುವುದು ಶ್ಲಾಘನೀಯ ಎಂದರು.‌

ವಿದ್ಯಾರ್ಥಿಗಳಿಗೆ ನೀಡುವ ಸಂಪೂರ್ಣ ಕೌನ್ಸಲಿಂಗ್ ಹಾಗೂ ಮಾಹಿತಿಯನ್ನು ಉಚಿತವಾಗಿ ನೀಡುತ್ತಿರುವುದು ಗಮನಾರ್ಹ. ಮೊದಲು ಅರ್ಜಿ ಸಲ್ಲಿಸುವ ಆಯ್ದ ವಿದ್ಯಾರ್ಥಿಗಳಿಗೆ ಒಟ್ಟು 250,000 ಡಾಲರ್ ವಿದ್ಯಾರ್ಥಿ ವೇತನ ನೀಡಲು ನಿರ್ಧರಿಸಿದೆ. ಜೊತೆಗೆ ಮೊದಲು ನೋಂದಾಯಿತ 100 ವಿದ್ಯಾರ್ಥಿಗಳಿಗೆ ಇಂಟರ್‌ನ್ಯಾಷನಲ್ ಇಂಗ್ಲಿಷ್ ಲಾಂಗ್‌ವೇಜ್ ಟೆಸ್ಟಿಂಗ್ ಸಿಸ್ಟಮ್ ಹಾಗೂ ಗ್ರಾಜುವೇಟ್‌ ರೆಕಾರ್ಡ್‌ ಎಗ್ಸಾಮಿನೇಷನ್ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ.

ಈ ಕುರಿತು ಮಾತನಾಡಿದ ನೆಸ್ಟ್‌ಲಿಂಗ್  ಸಂಸ್ಥೆ ಸಂಸ್ಥಾಪಕರಾದ ರಾಜಶೇಖರ್ ಬಸವರಾಜು, ಉನ್ನತ ಶಿಕ್ಷಣ ಹಾಗೂ ವೃತ್ತಿಪರ ಕೋರ್ಸ್‌ಗೆ ಸೇರಲು ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ಹೊಂದಿರುತ್ತಾರೆ, ಆದರೆ ಅವರಿಗೆ ಸೂಕ್ತ ಮಾರ್ಗದರ್ಶನದ ಕೊರತೆ ಇದೆ. ಈ ನಿಟ್ಟಿನಲ್ಲಿ ನಮ್ಮ ಕೇಂದ್ರ ಉಚಿತವಾಗಿ ಸೇವೆ ನೀಡಲು ಬದ್ಧವಾಗಿದೆ, ಈಗಾಗಲೇ ಅಮೆರಿಕಾದಲ್ಲಿ ಈ ರೀತಿಯ ಕೇಂದ್ರ ತೆರೆದಿದ್ದು, 50 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೌನ್ಸಲಿಂಗ್ ನೀಡಿ 300ಕ್ಕೂ ಹೆಚ್ಚು ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ದಾಖಲಾತಿ ನೀಡಲಾಗಿದೆ. ಜೊತೆಗೆ ಅಲ್ಲಿಯೂ ವಿದ್ಯಾರ್ಥಿಗೆಳಿಗೆ ಸ್ಕಾಲರ್‌ಶಿಪ್‌ ನೀಡಲಾಗಿದೆ. ಆಗ್ನೇಯ ಏಷ್ಯಾದ ಅತಿದೊಡ್ಡ ವಿದ್ಯಾರ್ಥಿ ಲೋನ್ ಕೊಡಿಸುವ ಜವಾಬ್ದಾರಿಯನ್ನು ನಾವು ಹೊಂದಿದ್ದೇವೆ ಹೇಳಿದರು.

ವಿಟಿಯು ಉಪಕುಲಪತಿ ಡಾ. ಕರಿಸಿದ್ದಪ್ಪ ಮಾತನಾಡಿ, ನೆಸ್ಟ್‌ಲಿಂಗ್  ಕೇಂದ್ರದ ಉದ್ದೇಶ ಹೆಚ್ಚು ಪ್ರಶಂಸನೀಯ. ಉನ್ನತ ಶಿಕ್ಷಣದ ಬಗ್ಗೆ ಕನಸು ಕಂಡಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಕೌನ್ಸಲಿಂಗ್ ನೀಡಿ, ವಿಶ್ವವಿದ್ಯಾಲಯಗಳಲ್ಲಿ ದಾಖಲಾತಿ ಕೊಡಿಸುತ್ತಿರುವ ಇವರ ಸೇವೆ ಉತ್ತಮವಾಗಿದೆ ಎಂದು ಶ್ಲಾಘಿಸಿದರು. 

ಕಾರ್ಯಕ್ರದಲ್ಲಿ ನೆಸ್ಟ್‌ಲಿಂಗ್ ಸಿಇಒ ಸೌಮ್ಯ ಮತ್ತಿತರರು ಉಪಸ್ಥಿತರಿದ್ದರು.

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ