ಎಸ್‌ಎಸ್‌ಎಲ್‌ಸಿ ಮರುಎಣಿಕೆ, 625ಕ್ಕೆ 625 ಅಂಕ ಪಡೆದು ಮತ್ತೊಬ್ಬಳು ವಿದ್ಯಾರ್ಥಿನಿ ಟಾಪರ್!

By Gowthami K  |  First Published Jun 5, 2024, 5:40 PM IST

SSLC ಮರು ಎಣಿಕೆಯಲ್ಲಿ 625 ಕ್ಕೆ 625 ಅಂಕ ಪಡೆದ ವಿದ್ಯಾರ್ಥಿನಿಯೊಬ್ಬಳು ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾಳೆ. ಈ ಮೂಲಕ ಇಬ್ಬರು ಟಾಪರ್ ಸ್ಥಾನವನ್ನು ಹಂಚಿಕೊಂಡಿದ್ದಾರೆ.


ಬೆಂಗಳೂರು (ಜೂ.5):  SSLC ಮರು ಎಣಿಕೆಯಲ್ಲಿ 625 ಕ್ಕೆ 625 ಅಂಕ ಪಡೆದ ವಿದ್ಯಾರ್ಥಿನಿಯೊಬ್ಬಳು ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾಳೆ. ನಗರದ ದಾಸರಹಳ್ಳಿ ಬಿಎನ್ ಅರ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿನಿ ಭಾವನ ಟಿ ಎಸ್ ಮರು ಎಣಿಕೆ ವೇಳೆ 625 ಕ್ಕೆ 625 ಅಂಕ  ಪಡೆದ ವಿದ್ಯಾರ್ಥಿನಿಯಾಗಿದ್ದಾಳೆ. ಇದಕ್ಕೂ ಮೊದಲು ಆಕೆ ಮೊದಲು 625 ಕ್ಕೆ  620 ಅಂಕ ಪಡೆದಿದ್ದಳು. ಆದರೆ ವಿದ್ಯಾರ್ಥಿನಿ ಮರುಎಣಿಕೆಗೆ ಹಾಕಿದ್ದಳು ಈ ವೇಳೆ ಮತ್ತೆ 5 ಅಂಕ ಸಿಕ್ಕಿದ್ದು, ಭರ್ತಿ  625 ಕ್ಕೆ 625 ಅಂಕ ಸಿಕ್ಕಿದೆ.

ಅತ್ಯುತ್ತಮ ಶೈಕ್ಷಣಿಕ ಅರ್ಹತೆ ಹೊಂದಿರುವ ನಟಿಮಣಿಯರಿವರು, ದೇಶಕ್ಕೆ ಟಾಪರ್ ಆಗಿದ್ದರು ಈ ನಟಿ!

Tap to resize

Latest Videos

undefined

ಇಂಗ್ಲಿಷ್ ಮತ್ತು ವಿಜ್ಞಾನದಲ್ಲಿ ಕ್ರಮವಾಗಿ 1 ಮತ್ತು 4 ಅಂಕಗಳನ್ನು ವಿದ್ಯಾರ್ಥಿನಿ ಭಾವನ ಗಳಿಸಿದ್ದಾಳೆ.  ದಾಸರಹಳ್ಳಿಯ ಮಲ್ಲಸಂದ್ರದಲ್ಲಿರುವ ಬಿ.ಎನ್ .ಅರ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಯಾಗಿದ್ದು, ಶಾಸಕ ಎಸ್ ಮುನಿರಾಜು  ಅವರಿಂದ ವಿದ್ಯಾರ್ಥಿನಿಗೆ ಸನ್ಮಾನ ಮಾಡಲಾಗಿದೆ.

ಸಿಇಟಿ ಪರೀಕ್ಷೆಯಲ್ಲಿ ಕೆಇಎ ಮತ್ತೊಂದು ಮಹಾ ಎಡವಟ್ಟು, 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಆತಂಕ

ಇನ್ನು ಈ ಮೂಲಕ 2023-24 ನೇ ಸಾಲಿನಲ್ಲಿ SSLC TOPPER ಪಟ್ಟವನ್ನು ಇಬ್ಬರು ವಿಧ್ಯಾರ್ಥಿನಿಯರು ಹಂಚಿಕೊಂಡಿದ್ದಾರೆ. ಈ ಹಿಂದೆ SSLC ಪರೀಕ್ಷೆಯಲ್ಲಿ ಬಾಗಲಕೋಟೆ ಜಿಲ್ಲೆಯ ಅಂಕಿತಾ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದರು. ಸಿಎಂ ಡಿಸಿಎಂ ಅಭಿನಂದನೆ ಸಲ್ಲಿಸಿದ್ರು. ಇದೀಗ ರೀ ವಾಲ್ಯೂವೇಷನ್ ನಲ್ಲಿ ಈಗ ರಾಜ್ಯದ ಮತ್ತೊಬ್ಬ ವಿಧ್ಯಾರ್ಥಿ‌ನಿಗೆ ಫಸ್ಟ್ ರ್ಯಾಂಕ್ ಬಂದಿರುವ ಹಿನ್ನೆಲೆ ವಿಧ್ಯಾರ್ಥಿನಿಗೆ ಸಿಗಬೇಕಾದ ಸೌಲಭ್ಯ ಹಾಗೂ ಮನ್ನಣೆಗೆ ಆಗ್ರಹಿಸಲಾಗಿದೆ.

click me!