KSOU Admission Extended: ಕರಾಮುವಿ ಪದವಿ ಕೋರ್ಸ್‌ಗಳ ಪ್ರವೇಶಾತಿ ಮತ್ತೆ ವಿಸ್ತರಣೆ, ಡಿ.27 ಕೊನೆ ದಿನ

By Suvarna NewsFirst Published Dec 25, 2021, 3:58 PM IST
Highlights
  • KSOU  ಜುಲೈ  ಆವೃತ್ತಿ ಪ್ರವೇಶಾತಿ ಮೂರನೇ ಬಾರಿಗೆ ವಿಸ್ತರಣೆ
  • ಸ್ನಾತಕೋತ್ತರ ಪದವಿ, ಡಿಪ್ಲೋಮಾ ಮತ್ತು ಪಿಜಿ ಡಿಪ್ಲೋಮಾ ಕೋರ್ಸ್ ಗಳ ಪ್ರವೇಶಾತಿ
  • ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಡಿ.27ರವರೆಗೆ  ಅವಕಾಶ

ಬೆಂಗಳೂರು(ಡಿ.25): ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (Karnataka State Open University - KSOU) 2021-22ನೇ ಶೈಕ್ಷಣಿಕ ಸಾಲಿನ ಜುಲೈ  ಆವೃತ್ತಿ ಪ್ರವೇಶಾತಿಯನ್ನು ಮತ್ತೊಮ್ಮೆ ಮುಂದೂಡಿ ಪ್ರಕಟಣೆ ಹೊರಡಿಸಿದೆ. ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್ ಗಳ ಹಾಗೂ ಡಿಪ್ಲೋಮಾ ಮತ್ತು ಪಿಜಿ ಡಿಪ್ಲೋಮಾ ಕೋರ್ಸ್ ಗಳ ಪ್ರವೇಶಾತಿಗೆ ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಅರ್ಜಿ ಸಲ್ಲಿಕೆಯ ಅವಧಿಯನ್ನು ಡಿ.27ರವರೆಗೆ ಮುಂದೂಡಿದ್ದು ಆಸಕ್ತರು  ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್‌ http://ksouportal.com/Views/index.aspx ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.

ಈ ಹಿಂದೆ ದಂಡ ಶುಲ್ಕವಿಲ್ಲದೇ ಡಿಸೆಂಬರ್ 15, 2021ರ ವರೆಗೆ ಅವಧಿಯನ್ನು ವಿಸ್ತರಿಸಲಾಗಿತ್ತು. ಬಳಿಕ  ಕರಾಮುವಿ (KSOU) ಅರ್ಜಿ ಸಲ್ಲಿಕೆಯ ಅವಧಿಯನ್ನು ಡಿಸೆಂಬರ್ 24ರ ವರೆಗೆ ವಿಸ್ತರಿಸಿತ್ತು, ಇದೀಗ ಮೂರನೇ ಬಾರಿಗೆ ಅರ್ಹ ಮತ್ತು ಆಸಕ್ತರಿಗೆ ಅವಕಾಶ ಕಲ್ಪಿಸಲಾಗಿದ್ದು ಡಿಸೆಂಬರ್ 27ರವರೆಗೆ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಮೂಲಕ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್ ಗಳನ್ನು ಅಧ್ಯಯನ ಮಾಡಲು ಇಚ್ಚಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗೆ ಅಧಿಕೃತ  ವೆಬ್ ತಾಣಕ್ಕೆ ಭೇಟಿ ನೀಡಬಹುದು.

ಮಾಹಿತಿಗಾಗಿ: ಡಾ. ಲೋಕೇಶ ಆರ್ , ಪ್ರಾದೇಶಿಕ ನಿರ್ದೇಶಕರು, ಕರಾಮುವಿ ಮಹಿಳಾ ಪ್ರಾದೇಶಿಕ ಕೇಂದ್ರ, 13ನೇ ಅಡ್ಡ ರಸ್ತೆ, 4ನೇ ಮುಖ್ಯ ರಸ್ತೆ, ಮಲ್ಲೇಶ್ವರಂ, ಬೆಂಗಳೂರು. 080-23448811/9844506629 ಇವರನ್ನು ಸಂಪರ್ಕಿಸಬಹುದು.

MYSURU UNIVERSITY : ಕನ್ನಡದಲ್ಲೂ ಕಾನೂನು ಪರೀಕ್ಷೆಗೆ ಅವಕಾಶ

ವಿಶ್ವವಿದ್ಯಾನಿಲಯವು ವಿವಿಧ ವಿಭಾಗಗಳಲ್ಲಿ 100ಕ್ಕೂ ಹೆಚ್ಚು ಕೋರ್ಸ್ ಗಳನ್ನು ನೀಡುತ್ತಿದೆ. ಈ ಕೋರ್ಸ್ ಗಳಲ್ಲಿ ಪದವಿಗಳು, ಸ್ನಾತಕೋತ್ತರ ಪದವಿಗಳು, ಪಿಜಿ ಡಿಪ್ಲೊಮಾ ಮತ್ತು ಡಿಪ್ಲೊಮಾ, ಪಿಜಿ ಪ್ರಮಾಣಪತ್ರ ಮತ್ತು ಪ್ರಮಾಣಪತ್ರ ಕೋರ್ಸ್‌ಗಳು ಸೇರಿವೆ.

ವಿವಿಧ ಶೈಕ್ಷಣಿಕ ಕೋರ್ಸ್‌ಗಳ ವಿವರ:
ಸ್ನಾತಕ ಪದವಿ: ಬಿ.ಎ, ಬಿ.ಕಾಂ, ಬಿ.ಲಿಬ್.ಐ ಎಸ್ಸಿ.
ಸ್ನಾತಕೋತ್ತರ ಪದವಿ: ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಸಂಸ್ಕೃತ, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಾರ್ವಜನಿಕ ಆಡಳಿತ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ, ಸಮಾಜಶಾಸ್ತ್ರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಎಂ.ಕಾಂ ಮತ್ತು ಎಂ.ಬಿ.ಎ.
M.Sc ಕೋರ್ಸ್‌ಗಳು: ಜೀವರಸಾಯನಶಾಸ್ತ್ರ, ಜೈವಿಕ ತಂತ್ರಜ್ಞಾನ, ರಸಾಯನಶಾಸ್ತ್ರ, ಕ್ಲಿನಿಕಲ್ ನ್ಯೂಟ್ರಿಷನ್ ಅಂಡ್ ಡಯಟೆಟಿಕ್ಸ್, ಪರಿಸರ ವಿಜ್ಞಾನ, ಕಂಪ್ಯೂಟರ್ ವಿಜ್ಞಾನ, ಭೂಗೋಳ ಶಾಸ್ತ್ರ, ಮಾಹಿತಿ ವಿಜ್ಞಾನ, ಗಣಿತಶಾಸ್ತ್ರ, ಸೂಕ್ಷ್ಮ ಜೀವಶಾಸ್ತ್ರ, ಭೌತಶಾಸ್ತ್ರ, ಮನೋವಿಜ್ಞಾನ ಮತ್ತು ಎಂ.ಲಿಬ್‌.ಐ ಎಸ್ಸಿ.

Caution Against Ed-tech Companies: ಆನ್‌ಲೈನ್ ಶಿಕ್ಷಣ ಆ್ಯಪ್‌ ಬಳಕೆದಾರರಿಗೆ ಎಚ್ಚರಿಕೆ ನೀಡಿದ ಕೇಂದ್ರ ಸರಕಾರ

ಪಿ.ಜಿ ಡಿಪ್ಲೊಮ: ಕಮ್ಯೂನಿಕೇಟಿವ್ ಇಂಗ್ಲಿಷ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಇಂಗ್ಲಿಷ್, ಕುವೆಂಪು ಸಾಹಿತ್ಯ ವ್ಯವಹಾರಿಕ ಕಾನೂನು, ವ್ಯವಹಾರಿಕ ನಿರ್ವಹಣೆ, ಮಾನವ ಸಂಪನ್ಮೂಲ ನಿರ್ವಹಣೆ, ಹಣಕಾಸು ನಿರ್ವಹಣೆ, ಅಂಬೇಡ್ಕರ್ ಅಧ್ಯಯನ, ಮಾರುಕಟ್ಟೆ ನಿರ್ವಹಣೆ, ಅಂಬೇಡ್ಕರ್ ಅಧ್ಯಯನ, ಮಾರುಕಟ್ಟೆ ನಿರ್ವಹಣಾಶಾಸ್ತ್ರ, ನ್ಯೂಟ್ರಿಷನ್ ಅಂಡ್ ಡಯಟೆಟಿಕ್ಸ್‌ , ಇನ್ಫಾರ್ಮೇಷನ್ ಸೈನ್ಸ್‌, ಕಂಪ್ಯೂಟರ್ ಅಪ್ಲಿಕೇಶನ್.

ಡಿಪ್ಲೊಮ ಮತ್ತು ಸರ್ಟಿಫಿಕೇಟ್:  ಡಿಪ್ಲೊಮ - ಕನ್ನಡ, ಪತ್ರಿಕೋದ್ಯಮ, ನ್ಯೂಟ್ರಿಷನ್ ಅಂಡ್ ಹೆಲ್ತ್ ಎಜುಕೇಷನ್, ಇನ್ಫಾರ್ಮೇಷನ್, ಸೈನ್ಸ್‌, ಕಂಪ್ಯೂಟರ್ ಅಪ್ಲಿಕೇಷನ್. ಮತ್ತು ಸರ್ಟಿಫಿಕೇಟ್ - ಕನ್ನಡ, ಪಂಚಾಯತ್ ರಾಜ್, ಪೌಷ್ಟಿಕತೆ ಮತ್ತು ಆಹಾರ.

click me!