ಕೆಸೆಟ್‌ ಪರೀಕ್ಷೆ ಕೀ ಉತ್ತರ, ಫೆ.7ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ

Published : Feb 03, 2024, 02:38 PM IST
ಕೆಸೆಟ್‌ ಪರೀಕ್ಷೆ ಕೀ  ಉತ್ತರ, ಫೆ.7ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ

ಸಾರಾಂಶ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇತ್ತೀಚೆಗೆ ನಡೆಸಿದ್ದ ಪಿಎಸ್‌ಐ ಮರು ಪರೀಕ್ಷೆ ಮತ್ತು ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ‘ಕೆ-ಸೆಟ್’ನ ತಾತ್ಕಾಲಿಕ ಕೀ ಉತ್ತರಗಳನ್ನು ಈಗಾಗಲೇ ಪ್ರಕಟಿಸಲಾಗಿದ್ದು ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ.

ಬೆಂಗಳೂರು (ಜ.3): ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇತ್ತೀಚೆಗೆ ನಡೆಸಿದ್ದ ಪಿಎಸ್‌ಐ ಮರು ಪರೀಕ್ಷೆ ಮತ್ತು ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ‘ಕೆ-ಸೆಟ್’ನ ತಾತ್ಕಾಲಿಕ ಕೀ ಉತ್ತರಗಳನ್ನು ಈಗಾಗಲೇ ಪ್ರಕಟಿಸಲಾಗಿದ್ದು ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ.

ಜ.13ರಂದು ಕೆ-ಸೆಟ್ ಮತ್ತು ಜ.23ರಂದು 545 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳ ನೇರ ನೇಮಕಾತಿಗೆ ಮರು ಪರೀಕ್ಷೆಗಳನ್ನು ನಡೆಸಲಾಗಿತ್ತು. ಈ ಎರಡೂ ಪರೀಕ್ಷೆಗಳಿಗೆ ಪ್ರಾಧಿಕಾರದ ವೆಬ್‌ಸೈಟ್‌ https:kea.kar.nic.in ನಲ್ಲಿ ತಾತ್ಕಾಲಿಕ ಕೀ ಉತ್ತರ ಪ್ರಕಟಿಸಲಾಗಿದೆ. ಈ ಪೈಕಿ ಕೆ ಸೆಟ್‌ ಪರೀಕ್ಷೆಯ ಕೀ ಉತ್ತರಗಳಿಗೆ ಆಕ್ಷೇಪಣೆಗಳಿದ್ದರೆ ಅಭ್ಯರ್ಥಿಗಳು ಪ್ರತಿ ಆಕ್ಷೇಪಣೆಗೆ 300 ರು.ನಂತೆ ಪಾವತಿಸಿ ಫೆ.7ರೊಳಗೆ ಆಕ್ಷೇಪಣೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ಸಿಬಿಎಸ್‌ಇ 9ನೇ ತರಗತಿಯ ಪಠ್ಯದಲ್ಲಿ ಡೇಟಿಂಗ್‌ & ರಿಲೇಷನ್‌ಷಿಪ್‌ ಬಗ್ಗೆ ಪಾಠ!

ಅದೇ ರೀತಿ ಪಿಎಸ್‌ಐ ಪರೀಕ್ಷೆಗೆ ಸಂಬಂಧಿಸಿದ ಆಕ್ಷೇಪಣೆಗಳನ್ನು ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ, ಹೆಸರು, ಜನ್ಮ ದಿನಾಂಕ ಹಾಗೂ ಪೂರಕ ದಾಖಲೆಗಳೊಂದಿಗೆ ಫೆ.5ರ ಸಂಜೆ 5 ಗಂಟೆಯೊಳಗೆ ವೆಬ್‌ಸೈಟ್‌ನಲ್ಲಿ ನೀಡಿರುವ ಲಿಂಕ್ ಮೂಲಕವೇ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ. ಪತ್ರ ಮತ್ತು ಇ- ಮೇಲ್‌ನಲ್ಲಿ ಸಲ್ಲಿಸುವ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ. 

- ಕಳೆದ ಜನವರಿ13ರಂದು ನಡೆದಿದ್ದ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ಕೆ ಸೆಟ್

- ಜ.23ರಂದು ನಡೆದಿದ್ದ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಮರು ಪರೀಕ್ಷೆ

- ಕೆಇಎ ವೆಬ್‌ಸೈಟ್‌ನಲ್ಲಿ ಪಿಎಸ್‌ಐ, ಕೆ- ಸೆಟ್‌ ಪರೀಕ್ಷೆಯ ಕೀ ಉತ್ತರ ಪ್ರಕಟ

- ಕೆ ಸೆಟ್‌ ಕೀ ಉತ್ತರಗಳಿಗೆ ಆಕ್ಷೇಪಣೆಗಳಿದ್ದರೆ ಫೆ.7ರೊಳಗೆ ಸಲ್ಲಿಸಬೇಕು

-ಪ್ರತಿ ಆಕ್ಷೇಪಣೆಗೆ 300 ರು.ನಂತೆ ಪಾವತಿಸಲು ಪ್ರಾಧಿಕಾರ ಸೂಚನೆ

- ಪಿಎಸ್‌ಐ ಪರೀಕ್ಷೆಗೆ ಸಂಬಂಧಿಸಿದ ಆಕ್ಷೇಪಣೆ ಫೆ.5ರ ಮೊದಲು ಸಲ್ಲಿಸಬೇಕು

PREV
Read more Articles on
click me!

Recommended Stories

ಸಿಂಹದಂತೆ ಘರ್ಜಿಸುವುದನ್ನು ಬಿಟ್ಟು ಜಿರಲೆಯಂತೆ ಬದಲಾಗಲು ಕಲಿಯಿರಿ! ಯಶಸ್ಸಿನ ಸೀಕ್ರೆಟ್ ಬಿಚ್ಚಿಟ್ಟ ಚೇತನ್ ಭಗತ್
ಸರ್ಕಾರಿ ಆಂಗ್ಲ ಶಾಲೇಲಿ ಕಲಿತ 30,000 ಮಕ್ಕಳು ಅತಂತ್ರ! ಬಿಇಒ, ಡಿಡಿಪಿಐ ಯಾರಿಂದಲೂ ಸ್ಪಷ್ಟ ಉತ್ತರವಿಲ್ಲ! ಯಾರನ್ನು ಕೇಳುವುದು?