ಹಾಡುತ್ತಾ, ಆಡುತ್ತಾ ಇಂಗ್ಲಿಷ್ ಕಲಿಕೆ: ಮುದ್ದಾಬಳ್ಳಿ ಮಕ್ಕಳ ನೆಚ್ಚಿನ ಶಿಕ್ಷಕ ಮಹ್ಮದ್ ಇಸ್ಮಾಯಿಲ್

Published : Sep 05, 2026, 03:47 PM IST
Mahmad Ismail

ಸಾರಾಂಶ

ಕೊಪ್ಪಳದ ಮುದ್ದಾಬಳ್ಳಿಯ ಶಿಕ್ಷಕ ಮಹ್ಮದ್ ಇಸ್ಮಾಯಿಲ್ ಅವರು YouTube, ಸ್ಮಾರ್ಟ್ ಕ್ಲಾಸ್ ಮತ್ತು ಭಾಷಾ ಆಟಗಳ ಮೂಲಕ ಗ್ರಾಮೀಣ ಮಕ್ಕಳಿಗೆ ಸರಳ ಹಾಗೂ ಪರಿಣಾಮಕಾರಿಯಾಗಿ ಇಂಗ್ಲಿಷ್ ಕಲಿಸುತ್ತಿದ್ದಾರೆ.

ಕೊಪ್ಪಳ (ಸೆ.05): ಕೊಪ್ಪಳ ತಾಲೂಕಿನ ಮುದ್ದಾಬಳ್ಳಿಯ ಶಿಕ್ಷಕ ಮಹ್ಮದ್ ಇಸ್ಮಾಯಿಲ್ ಅವರು ಯೂಟ್ಯೂಬ್, ಸ್ಮಾರ್ಟ್ ಕ್ಲಾಸ್ ಮತ್ತು ಭಾಷಾ ಆಟಗಳ ಮೂಲಕ ಮಕ್ಕಳಿಗೆ ಸರಳವಾಗಿ ಇಂಗ್ಲಿಷ್ ಕಲಿಸುತ್ತಿದ್ದಾರೆ. ಕಳೆದ 10 ವರ್ಷಗಳಿಂದ ಇದೇ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇಸ್ಮಾಯಿಲ್, ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದಾರೆ.

ಹಾಡು, ಆಟ ಹಾಗೂ ಪರಸ್ಪರ ಸಂವಹನದ ಮೂಲಕ ವಿದ್ಯಾರ್ಥಿಗಳು ಇಂಗ್ಲಿಷ್ ಮಾತನಾಡಲು ಕಲಿಯುತ್ತಿದ್ದಾರೆ. ಯಾವುದೇ ಭಾಷಾ ಕಲಿಕೆಯು ಆಲಿಸುವಿಕೆ, ಬಳಕೆ, ನಿರಂತರ ಸಂವಹನ, ಬರವಣಿಗೆ, ಓದು ಮತ್ತು ಮನನದ ಮೂಲಕ ಮಾತ್ರ ಸಾಧ್ಯ ಎಂಬುದನ್ನು ಅರಿತುಕೊಂಡಿರುವ ಅವರು, ಇದೇ ತಂತ್ರವನ್ನು ಬೋಧನೆಯಲ್ಲಿ ಅಳವಡಿಸಿಕೊಂಡಿದ್ದಾರೆ.

ಸ್ವಂತ ಯೂಟ್ಯೂಬ್ ಚಾನೆಲ್ ಆರಂಭಿಸಿರುವ ಇಸ್ಮಾಯಿಲ್, ತರಗತಿಯಲ್ಲಿ ವೈವಿಧ್ಯಮಯ ಚಟುವಟಿಕೆ ಮಾಡಿಸುವ ಜತೆಗೆ, ಮನೆಯಲ್ಲಬ ಮಕ್ಕಳು ಚಟುವಟಿಕೆ ಮಾಡುವಂತೆ ಪ್ರೇರೇಪಿಸುತ್ತಿದ್ದಾರೆ. ವಿದ್ಯಾರ್ಥಿಗಳು ಸ್ವತಃ ಚಾರ್ಟ್‌ಗಳನ್ನು ತಯಾರಿಸಿ, ವಿಷಯವನ್ನು ವಿಶ್ಲೇಷಿಸಿ, ಇಂಗ್ಲಿಷ್‌ನಲ್ಲಿಯೇ ತರಗತಿಯ ಮುಂದೆ ಪ್ರಸ್ತುತಪಡಿಸುತ್ತಾರೆ.

ಇತರ ಶಿಕ್ಷಕರಿಗೂ ಮಾದರಿ

ಇಸ್ಮಾಯಿಲ್ ಅವರ ಪ್ರಯತ್ನ ಗ್ರಾಮೀಣ ಮಕ್ಕಳಿಗೆ ಭಾಷೆ ಕಲಿಯುವಿಕೆಯನ್ನು ಸರಳ, ಆಸಕ್ತಿದಾಯಕ ಮತ್ತು ಪರಿಣಾಮಕಾರಿಯನ್ನಾಗಿಸಿದೆ. ಅವರ ವಿಭಿನ್ನ ಬೋಧನಾ ಕ್ರಮ ಇತರ ಶಿಕ್ಷಕರಿಗೂ ಮಾದರಿಯಾಗಿದೆ. ಪ್ರಶ್ನೋತ್ತರ, ಗುಂಪು ಚರ್ಚೆ, ಪದ ಆಟ, ಅಭಿನಯ ಮತ್ತು ಸರಳ ಸಂಭಾಷಣೆಗಳ ಮೂಲಕ ಮಕ್ಕಳನ್ನು ಮಾತನಾಡಲು ಉತ್ತೇಜಿಸುತ್ತಾರೆ.

ತಪ್ಪುಗಳಾದರೂ ಹಿಂಜರಿಯದೆ ಪ್ರಯತ್ನಿಸುವ ವಾತಾವರಣ ನಿರ್ಮಿಸಿರುವುದರಿಂದ ವಿದ್ಯಾರ್ಥಿಗಳಲ್ಲಿ ಕಲಿಕೆಯ ಉತ್ಸಾಹ ಹೆಚ್ಚಾಗಿದೆ. ಪೋಷಕರಿಗೂ ಮಕ್ಕಳ ಚಟುವಟಿಕೆಗಳನ್ನು ಗಮನಿಸಿ ಪ್ರೋತ್ಸಾಹಿಸುವಂತೆ ತಿಳಿಸುತ್ತಿದ್ದಾರೆ. ಇದರಿಂದ ಶಾಲೆ ಮತ್ತು ಮನೆಯ ಕಲಿಕೆಯ ನಡುವಿನ ಸಂಪರ್ಕವೂ ಬಲಗೊಂಡಿದೆ. ಇಂತಹ ಪ್ರಯತ್ನಗಳು ಮಕ್ಕಳ ಭವಿಷ್ಯ ರೂಪಿಸುತ್ತಿವೆ.

PREV
Read more Articles on
click me!

Recommended Stories

ಪಾಠ ಹೇಳುವುದಷ್ಟೇ ಅಲ್ಲ, ಶಾಲೆಯನ್ನೇ ಬದಲಿಸಿದ ಶಿಕ್ಷಕ: ಮಕ್ಕಳ ಕಲಿಕೆಗೆ ಹೊಸ ಸ್ಪರ್ಶ!
ಮೊಟ್ಟೆಯಿಂದ ಚಿಟ್ಟೆಯವರೆಗೆ: ಶಿಕ್ಷಣದಲ್ಲಿ ವಿನೂತನ ಪ್ರಯೋಗಕ್ಕೆ ಹೆಸರಾದ ಶಿಕ್ಷಕಿ!