ಕೂಳೂರಿನಲ್ಲಿ ಯೆನೆಪೋಯ ಕಾಲೇಜಿನ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಸಚಿವ ಡಾ.ಅಶ್ವತ್ಥ ನಾರಾಯಣ ಅವರು ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದಲ್ಲಿ ರಾಜ್ಯ ಮುಂಚೂಣಿಯಲ್ಲಿದೆ ಎಂದಿದ್ದಾರೆ.
ಮಂಗಳೂರು (ನ.15): ರಾಷ್ಟ್ರೀಯ ಶಿಕ್ಷಣ ನೀತಿಯು ದೇಶದ ಉಜ್ವಲ ಭವಿಷ್ಯಕ್ಕೆ ಪೂರಕವಾಗಿದ್ದು, ಇದರ ಅನುಷ್ಠಾನದಲ್ಲಿ ರಾಜ್ಯ ಮುಂಚೂಣಿಯಲ್ಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ. ನಗರದ ಹೊರವಲಯದ ಕೂಳೂರು ಬಳಿ ಯೆನೆಪೋಯ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾನಿಲಯದ ಘಟಕವಾದ ಯೆನೆಪೋಯ ಇನ್ಸಿಟಿಟ್ಯೂಟ್ ಆಫ್ ಆರ್ಟ್, ಸೈನ್ಸ್, ಕಾಮರ್ಸ್ ಮತ್ತು ಮ್ಯಾನೆಜ್‌ಮೆಂಟ್‌ನ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯಾನಂತರ ರೂಪಿಸಲಾದ ಅತ್ಯುತ್ತಮ ಶಿಕ್ಷಣ ನೀತಿ ಇದಾಗಿದೆ. ಕೇವಲ ಶಿಕ್ಷಣ ಕ್ಷೇತ್ರದ ಉನ್ನತಿ ಮಾತ್ರವಲ್ಲ, ಜನರ ಜೀವನ ಸುಧಾರಣೆ, ದೇಶದ ಭವಿಷ್ಯದ ರೂಪಾಂತರವೂ ಇದರಲ್ಲಿ ಅಡಕವಾಗಿದೆ. ಈಗಾಗಲೇ ವಿಶ್ವಾದ್ಯಂತ ಭಾರತೀಯರು ತಮ್ಮ ಛಾಪು ಮೂಡಿಸಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದಿಂದ ನಮ್ಮ ದೇಶವು ವಿಶ್ವವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಲಿದೆ ಎಂದರು. 21ನೇ ಶತಮಾನ ಎಂದರೆ ಜ್ಞಾನಾಧಾರಿತ ಆರ್ಥಿಕತೆ. ಪ್ರಸ್ತುತ ಸಮಾಜದ ಅನೇಕ ಸಮಸ್ಯೆಗಳಿಗೆ ಜ್ಞಾನವೇ ಮೂಲ ಪರಿಹಾರ. ಹಾಗಾಗಿ ಗುಣಮಟ್ಟದ ಜ್ಞಾನಾರ್ಜನೆ ಪಡೆಯಬೇಕಾದ ಅಗತ್ಯವಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಗುಣಮಟ್ಟದ ಶಿಕ್ಷಣ ಪಡೆಯುವುದು, ಗುಣಮಟ್ಟದ ಶಿಕ್ಷಣ ಸಂಸ್ಥೆಗಳ ಆಯ್ಕೆ ಸವಾಲಿನ ವಿಷಯ. ಇಂತಹ ಸಂದರ್ಭದಲ್ಲಿ ಯೆನೆಪೋಯ ಶಿಕ್ಷಣ ಸಂಸ್ಥೆ ಗುಣಮಟ್ಟದ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳನ್ನು ತೆರೆದಿಟ್ಟಿದೆ ಎಂದು ಡಾ.ಅಶ್ವತ್ಥ ನಾರಾಯಣ ಶ್ಲಾಘಿಸಿದರು.
ಶಾಸಕ ಯು.ಟಿ. ಖಾದರ್ ಮಾತನಾಡಿ, ಯುವ ಸಮೂಹಕ್ಕೆ ಉತ್ತಮ ಶಿಕ್ಷಣ ನೀಡಿ ಅವರನ್ನು ಬಲಿಷ್ಠರನ್ನಾಗಿ ಮಾಡುವುದೇ ನಿಜವಾದ ದೇಶಪ್ರೇಮ. ಮಾನವೀಯತೆ, ಪ್ರೀತಿ, ಕರುಣೆ, ಸಹಾಯ ಮಾಡುವ ಮನೋಭಾವವನ್ನು ಶಿಕ್ಷಣ ನೀಡಬೇಕಿದೆ. ಯೆನೆಪೋಯ ಸಂಸ್ಥೆ ಇದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಯುವ ಜನಾಂಗದಲ್ಲಿ ಮಾದಕ ದ್ರವ್ಯ ಸೇವನೆ ವ್ಯಸನ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಶಿಕ್ಷಣ ಇಲಾಖೆ, ಪೊಲೀಸ್, ವಿದ್ಯಾರ್ಥಿ ಸಂಘಟನೆಗಳು ಜತೆಗೂಡಿ ಇದರ ವಿರುದ್ಧ ಕಾರ್ಯ ನಿರ್ವಹಣೆ ಮಾಡುವ ಅಗತ್ಯವಿದೆ ಎಂದು ಖಾದರ್ ಸಲಹೆ ನೀಡಿದರು.
ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆಯಲು ಭಾರತೀಯ ವಿದ್ಯಾರ್ಥಿಗಳು ಮುಂಚೂಣಿ:
ಶಾಸಕ ಭರತ್ ಶೆಟ್ಟಿಮಾತನಾಡಿದರು. ಯೆನೆಪೋಯ ವಿವಿ ಕುಲಪತಿ ಡಾ.ಯೆನೆಪೋಯ ಅಬ್ದುಲ್ಲ ಕುಂಞಿ ಅಧ್ಯಕ್ಷತೆ ವಹಿಸಿದ್ದರು. ಯೆನೆಪೋಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಮುಹಮ್ಮದ್ ಕುಂಞಿ ಗೌರವ ಅತಿಥಿಯಾಗಿ ಭಾಗವಹಿಸಿದ್ದರು. ಮೇಯರ್ ಜಯಾನಂದ ಅಂಚನ್, ಕಾರ್ಪೊರೇಟರ್ ಕಿರಣ್ ಕುಮಾರ್, ರಿಜಿಸ್ಟ್ರಾರ್ ಡಾ.ಕೆ.ಎಸ್. ಗಂಗಾಧರ ಸೋಮಯಾಜಿ, ಉಪಕುಲಪತಿ ಡಾ.ಎಂ. ವಿಜಯ ಕುಮಾರ್, ಪೊ› ವೈಸ್ ಚಾನ್ಸಲರ್ ಡಾ.ಬಿ.ಎಚ್. ಶ್ರೀಪತಿ ರಾವ್, ಕಾಲೇಜಿನ ಪ್ರಾಂಶುಪಾಲ ಡಾ.ಅರುಣ್ ಭಾಗವತ್ ಇದ್ದರು. ಉಪ ಪ್ರಾಂಶಪಾಲೆ ಶರೀನಾ ಎ. ಕಾರ್ಯಕ್ರಮ ನಿರೂಪಿಸಿದರು.
KARNATAKA SCHOOL ADMISSION AGE: 1ನೇ ತರಗತಿಗೆ ಸೇರ್ಪಡೆಗೆ ಮಗುವಿಗೆ 6 ವರ್ಷ ವಯೋಮಿತಿ ಕಡ್ಡಾಯ, ಸರಕಾರ ಆದೇಶ
ಡಾ. ಯೆನೆಪೋಯ ಅಬ್ದುಲ್ಲ ಕುಂಞಿ ಅವರ 75ನೇ ಜನ್ಮ ದಿನಾಚರಣೆ ಅಂಗವಾಗಿ ಏಕಕಾಲದಲ್ಲಿ 2500ಕ್ಕೂ ಅಧಿಕ ಮಂದಿ ರಕ್ತದಾನ ನಡೆಸಿದರು. ಯೆನೆಪೋಯ ವಿಶ್ವವಿದ್ಯಾನಿಲಯದ ಅಧೀನದಲ್ಲಿರುವ ಕೂಳೂರು, ಮುಡಿಪು ಕಿನ್ಯಗಳಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ರಕ್ತದಾನ ಆಯೋಜಿಸಲಾಗಿತ್ತು.