ಬೆಂಗಳೂರು (ಆ.05): ಈ ಬಾರಿ ಭಾರೀ ಚರ್ಚೆಗೀಡಾಗಿದ್ದ 2020-21ನೇ ಸಾಲಿನ SSLC ಪರೀಕ್ಷೆಯ ಫಲಿತಾಂಶಗಳು ನಾಳೆ (ಆ. 06) ಪ್ರಕಟವಾಗುವ ಸಾಧ್ಯತೆಗಳಿವೆ.
ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಶಿಕ್ಷಣ ಇಲಾಖೆ ಮೂಲಗಳಿಂದ ಲಭಿಸಿರುವ ಮಾಹಿತಿ ಪ್ರಕಾರ, ನಾಳೆಯೇ ಫಲಿತಾಂಶ ಪ್ರಕಟಿಸಲು ಪ್ರೌಢಶಿಕ್ಷಣ ಪರೀಕ್ಷಾ ಶಿಕ್ಷಣ ಮಂಡಳಿ ಸಿದ್ಧತೆ ನಡೆಸಿದೆ.
ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆದೇಶಕ್ಕೆ ಮಂಡಳಿಯು ಕಾಯುತ್ತಿದ್ದು, ಫಲಿತಾಂಶ ಪ್ರಕಟಿಸಲು ಆದೇಶ ನೀಡಿದ್ರೆ ನಾಳೆಯೇ ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ | ಓರ್ವ ವಿದ್ಯಾರ್ಥಿನಿಯಿಂದ SSLC ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳಿ ಸಿಕ್ತು 1 ಕೃಪಾಂಕ
ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಈಗಾಗಲೇ ಮೌಲ್ಯಮಾಪನ ಕಾರ್ಯ ಪೂರ್ಣಗೊಳಿಸಿದ್ದು, ಫಲಿತಾಂಶ ಪ್ರಕಟಿಸಲು ಆದೇಶಕ್ಕಾಗಿ ಕಾಯುತ್ತಿದೆ.
ಕೊರೋನಾ ಭೀತಿಯ ನಡುವೆ, ಬಹಳಷ್ಟು ಚರ್ಚೆಗಳ ಬಳಿಕ ಕಳೆದ ಜು. 19 ಮತ್ತು 22ರಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ನಡೆಸಲಾಗಿತ್ತು. ಈ ಬಾರಿ ಕೇವಲ 2 ದಿನದಲ್ಲಿ ಪರೀಕ್ಷೆ ನಡೆದಿದ್ದು, ಎಲ್ಲಾ ವಿಷಯಗಳನ್ನು ಒಳಗೊಂಡಿತ್ತು.
ಒಂದೊಂದು ದಿನ ಮೂರು ವಿಷಯಗಳಿಗೆ ಪರೀಕ್ಷೆ ನಡೆಸಲಾಗಿತ್ತು. ಪ್ರತಿ ವಿಷಯಕ್ಕೂ ಬಹು ಆಯ್ಕೆ ಪ್ರಶ್ನೆಗಳ ಮಾದರಿಯ 40 ಅಂಕಗಳ ಪ್ರಶ್ನೆಗಳಂತೆ ಒಟ್ಟು 120 ಪ್ರಶ್ನೆಗಳನ್ನು ಕೇಳಲಾಗಿತ್ತು. ಉತ್ತರ ಗುರುತಿಸಲು ಪ್ರತಿ ವಿಷಯಕ್ಕೂ ಪ್ರತ್ಯೇಕ ಬಣ್ಣದ ಒಎಂಆರ್ ಪ್ರಶ್ನೆಗಳನ್ನು ನೀಡಲಾಗಿತ್ತು.