ಎಸ್ಸೆಸ್ಸೆಲ್ಸಿ ಫಲಿತಾಂಶ: ಕರಾವಳಿ ಜಿಲ್ಲೆಗಳ ಕಮಾಲ್, ಕಲಬುರಗಿ ಕೊನೆ ಸ್ಥಾನ, ನಿಮ್ಮ ಜಿಲ್ಲೆಗೆ ಎಷ್ಟನೇ ಸ್ಥಾನ?

Published : Apr 23, 2026, 01:06 PM IST
SSLC Results

ಸಾರಾಂಶ

2026ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಶೇಕಡಾ 94.1ರಷ್ಟು ಉತ್ತೀರ್ಣ ಪ್ರಮಾಣ ದಾಖಲಾಗಿದೆ. ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದರೆ, ಕಲಬುರಗಿ ಜಿಲ್ಲೆಯು ಸತತವಾಗಿ ಕಳಪೆ ಪ್ರದರ್ಶನ ನೀಡಿ ಕೊನೆಯ ಸ್ಥಾನದಲ್ಲೇ ಮುಂದುವರೆದಿದೆ.

ಬೆಂಗಳೂರು: 2026ನೇ ಸಾಲಿನ ಎಸ್ಸೆಸ್ಸೆಲ್ಸಿ (SSLC) ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ರಾಜ್ಯದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಒಟ್ಟಾರೆ ಉತ್ತೀರ್ಣ ಪ್ರಮಾಣವು ಶೇಕಡಾ 94.1 ಆಗಿದ್ದು, ಕಳೆದ ವರ್ಷಗಳಿಗಿಂತ ಉತ್ತಮ ಸಾಧನೆ ದಾಖಲಾಗಿದೆ. ವಿದ್ಯಾರ್ಥಿಗಳ ಸಾಧನೆ, ಜಿಲ್ಲಾವಾರು ಫಲಿತಾಂಶ ಮತ್ತು ಗ್ರಾಮೀಣ ಪ್ರದೇಶಗಳ ಮೇಲುಗೈ—allವು ಈ ಬಾರಿ ವಿಶೇಷ ಚರ್ಚೆಗೆ ಕಾರಣವಾಗಿವೆ.

ಯಾರು ಲಾಸ್ಟ್? ಯಾರು ಫಸ್ಟ್?

ಜಿಲ್ಲಾವಾರು ಫಲಿತಾಂಶದಲ್ಲಿ ಕರಾವಳಿ ಜಿಲ್ಲೆಗಳು ಮತ್ತೆ ಮೇಲುಗೈ ಸಾಧಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆ ಶೇಕಡಾ 98.40 ಉತ್ತೀರ್ಣತೆಯೊಂದಿಗೆ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಕಲಬುರಗಿ ಕೊನೆಯ ಸ್ಥಾನ ಪಡೆದಿದೆ. ಕಳೆದ ಬಾರಿಯೂ ಕಲಬುರಗಿ ಕಲಬುರಗಿ ಕೊನೆಯ ಸ್ಥಾನ ಪಡೆದಿತ್ತು. 2025ರಲ್ಲಿ 56.89 ಬಂದಿತ್ತು.  ಈ ಬಾರಿ 28.17 ಶೇಕಡ ಏರಿಕೆಯನ್ನೂ ದಾಖಲಿಸಿದರೂ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಫಲಿತಾಂಶವನ್ನು ಉತ್ತಮಗೊಳಿಸುವ ಮಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಶಿಕ್ಷಣ ಇಲಾಖೆ ಮಹತ್ವದ ಕಾರ್ಯಗಳನ್ನು ಮಾಡಿತ್ತು.

ಇಳಿಕೆಯತ್ತಲೇ ಸಾಗಿದ ಕಲಬುರಗಿ, ಏರಿಕೆ ಯಾವಾಗ?

ಕಳೆದ ಬಾರಿಗಿಂತ ಈ ಬಾರಿ 28.17 ಶೇಕಡ ಏರಿಕೆಯನ್ನೂ ದಾಖಲಿಸಿದರೂ ಕೊನೆಯ ಸ್ಥಾನದಲ್ಲಿ ಇರುವ ಕಲಬುರಗಿ 2023 ನೇ ಸಾಲಿನಿಂದಲೇ  ಇಳಿಕೆಯತ್ತ ಫಲಿತಾಂಶವನ್ನು ದಾಖಲಿಸುತ್ತಲೇ ಬಂದಿದೆ.  2023ರಲ್ಲಿ 29ನೇ ಸ್ಥಾನದಲ್ಲಿತ್ತು, 2024ರಲ್ಲಿ 34ನೇ ಸ್ಥಾನ ಗಳಿಸಿತ್ತು. 2025ರಲ್ಲಿ 35ನೇ ಸ್ಥಾನ  ಪಡೆದು ಕೊನೆಯ ಸ್ಥಾನ ಪಡೆದಿತ್ತು. ಇದೀಗ ಈ ಸಾಲಿನಲ್ಲೂ ಕೊನೆಯ ಸ್ಥಾನದಲ್ಲೇ ಮುಂದುವರೆದಿದೆ.

ಜಿಲ್ಲಾವಾರು ಫಲಿತಾಂಶ ಹೀಗಿದೆ

ದಕ್ಷಿಣ ಕನ್ನಡ 98.40

ಉಡುಪಿ 98.18

ಉತ್ತರ ಕನ್ನಡ 98.09

ಹಾಸನ 97.51

ಮಂಡ್ಯ 97.45

ಸಿರ್ಸಿ 97.21

ಹಾವೇರಿ 96.87

ಕೊಡಗು 96.70

ಶಿವಮೊಗ್ಗ 96.56

ವಿಜಯನಗರ 96.39

ಬೆಂಗಳೂರು ಗ್ರಾಮಾಂತರ 95.84

ಧಾರವಾಡ 95.59

ಕೋಲಾರ 95.50

ಬಾಗಲಕೋಟೆ 95.42

ಬೆಂಗಳೂರು ಉತ್ತರ 95.34

ಗದಗ 95.24

ಚಿಕ್ಕಮಗಳೂರು 94.99

ಬೆಳಗಾವಿ 94.75

ದಾವಣಗೆರೆ 94.64

ಮೈಸೂರು 94.50

ರಾಯಚೂರು 94.41

ವಿಜಯಪುರ 94.17

ಚಿಕ್ಕೋಡಿ 94.09

ಬಳ್ಳಾರಿ 93.36

ಕೊಪ್ಪಳ 93.10

ರಾಮನಗರ 92.83

ಚಿತ್ರದುರ್ಗ 92.25

ಬೀದರ 92.18

ತುಮಕೂರು 92.04

ಚಾಮರಾಜನಗರ 91.89

ಯಾದಗಿರಿ 91.89

ಬೆಂಗಳೂರು ದಕ್ಷಿಣ 91.65

ಚಿಕ್ಕಬಳ್ಳಾಪುರ 90.88

ಮಧುಗಿರಿ 90.26

ಕಲಬುರಗಿ 85.06

PREV
Read more Articles on
click me!

Recommended Stories

ಹಿಜಾಬ್ ನಿಷೇಧ ಆದೇಶ ವಾಪಸ್ ಪಡೆದ ಸರ್ಕಾರ; ಇನ್ನುಮುಂದೆ ಜನಿವಾರ, ರುದ್ರಾಕ್ಷಿ, ಪೇಟ ಧರಿಸಲೂ ಅವಕಾಶ!
ನೀಟ್ ಪರೀಕ್ಷೆ ರದ್ದತಿಗೆ ವಿಪಕ್ಷಗಳ ಟೀಕೆ, ರಾಜ್ಯದಲ್ಲಿ ಎಷ್ಟೋ ಬಾರಿ ಪರೀಕ್ಷೆಗಳು ಮುಂದೂಡಿಕೆಯಾಗಿವೆ: HDK ತಿರುಗೇಟು!