ನಾಳೆ SSLC ಫಲಿತಾಂಶ: ರಿಸಲ್ಟ್ ನೋಡಲು ಇದೇ 4 ಸುಲಭ ಮಾರ್ಗ; ಇಲ್ಲಿವೆ ಡೈರೆಕ್ಟ್ ಲಿಂಕ್ಸ್‌

Published : Apr 22, 2026, 08:21 PM IST
Karnataka SSLC Exam

ಸಾರಾಂಶ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು 2026ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶವನ್ನು ಏಪ್ರಿಲ್ 23ರಂದು ಪ್ರಕಟಿಸಲಿದೆ. ವಿದ್ಯಾರ್ಥಿಗಳು ವೆಬ್‌ಸೈಟ್, ಮೊಬೈಲ್ ಆಪ್, SMS/WhatsApp ಮೂಲಕ ಫಲಿತಾಂಶ ವೀಕ್ಷಿಸಬಹುದು.

ಬೆಂಗಳೂರು ಏ.22): ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು 2026ರ ಎಸ್‌ಎಸ್‌ಎಲ್‌ಸಿ (ಪರೀಕ್ಷೆ-1) ಫಲಿತಾಂಶವನ್ನು ನಾಳೆ, ಏಪ್ರಿಲ್ 23ರಂದು ಮಧ್ಯಾಹ್ನ 12:00 ಗಂಟೆಗೆ ಅಧಿಕೃತವಾಗಿ ಪ್ರಕಟಿಸಲಿದೆ. ಈ ಬಾರಿ ಫಲಿತಾಂಶ ವೀಕ್ಷಣೆಗೆ ಮತ್ತು ಅಂಕಪಟ್ಟಿ ಡೌನ್‌ಲೋಡ್ ಮಾಡಲು ಮಂಡಲಿಯು ಅತ್ಯಾಧುನಿಕ ಹಾಗೂ ಸರಳ ವಿಧಾನಗಳನ್ನು ಪರಿಚಯಿಸಿದೆ.

ಫಲಿತಾಂಶ ಪಡೆಯುವುದು ಹೇಗೆ? (How to check results)

ವಿದ್ಯಾರ್ಥಿಗಳು ಈ ಕೆಳಗಿನ ವಿವಿಧ ಮಾಧ್ಯಮಗಳ ಮೂಲಕ ತಮ್ಮ ಫಲಿತಾಂಶವನ್ನು ಕ್ಷಣಾರ್ಧದಲ್ಲಿ ತಿಳಿಯಬಹುದು:

ಅಧಿಕೃತ ವೆಬ್‌ಸೈಟ್: ಮಂಡಲಿಯ ಅಧಿಕೃತ ಪೋರ್ಟಲ್ https://karresults.nic.in ಮೂಲಕ ಫಲಿತಾಂಶ ವೀಕ್ಷಿಸಬಹುದು.

ಮೊಬೈಲ್ ಆಪ್: 'KarnatakaOne' ಮೊಬೈಲ್ ಆಪ್ ಮೂಲಕವೂ ಫಲಿತಾಂಶ ಲಭ್ಯವಿರಲಿದೆ.

ನೇರ ಸಂದೇಶ (SMS/WhatsApp): ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಮೊಬೈಲ್ ಸಂಖ್ಯೆಗಳಿಗೆ ಮಂಡಲಿಯ ವತಿಯಿಂದಲೇ ನೇರವಾಗಿ ಫಲಿತಾಂಶದ ವಿವರಗಳನ್ನು ಎಸ್‌ಎಂಎಸ್ ಅಥವಾ ವಾಟ್ಸಾಪ್ ಮೂಲಕ ರವಾನಿಸಲಾಗುವುದು.

ಶಾಲೆಗಳಲ್ಲಿ ಲಭ್ಯ: ನಾಳೆ ಮಧ್ಯಾಹ್ನ 12 ಗಂಟೆಯ ನಂತರ ಆಯಾ ಶಾಲೆಗಳಿಗೂ ಫಲಿತಾಂಶದ ಪಟ್ಟಿಯನ್ನು ರವಾನಿಸಲಾಗುವುದು.

ಈ ಬಾರಿಯ ವಿಶೇಷ: ಡಿಜಿಲಾಕರ್ (DigiLocker) ಮೂಲಕ ಅಂಕಪಟ್ಟಿ!

ಇತಿಹಾಸದಲ್ಲೇ ಮೊದಲ ಬಾರಿಗೆ, ವಿದ್ಯಾರ್ಥಿಗಳು ತಮ್ಮ ಅಧಿಕೃತ ಅಂಕಪಟ್ಟಿಯನ್ನು (Marks Card) ರಿಸಲ್ಟ್ ಬಂದ ತಕ್ಷಣವೇ ಡಿಜಿಲಾಕರ್ ಮೂಲಕ ಪಡೆಯುವ ವಿಶೇಷ ಅವಕಾಶವನ್ನು ಕಲ್ಪಿಸಲಾಗಿದೆ.

ವೆಬ್‌ಸೈಟ್: https://www.digilocker.gov.in ಗೆ ಭೇಟಿ ನೀಡಿ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಸಮಯ: ನಾಳೆ ಮಧ್ಯಾಹ್ನ 12 ಗಂಟೆಯಿಂದಲೇ ಡಿಜಿಲಾಕರ್‌ನಲ್ಲಿ ಅಂಕಪಟ್ಟಿ ಲಭ್ಯವಿರುತ್ತದೆ.

ವಿಡಿಯೋ ಮಾರ್ಗದರ್ಶಿ: ಡಿಜಿಲಾಕರ್‌ನಿಂದ ಅಂಕಪಟ್ಟಿ ಡೌನ್‌ಲೋಡ್ ಮಾಡುವ ವಿಧಾನವನ್ನು ತಿಳಿಯಲು ಮಂಡಲಿಯು ಈ ವಿಡಿಯೋ ಲಿಂಕ್ https://tinyurl.com/mw84wmh9 ಅನ್ನು ಬಿಡುಗಡೆ ಮಾಡಿದೆ.

ಹೈಕೋರ್ಟ್ ಆದೇಶದಂತೆ ಈ ಬಾರಿ ತೃತೀಯ ಭಾಷೆ (ಹಿಂದಿ) ವಿಷಯಕ್ಕೂ ಅಂಕಗಳನ್ನೇ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಂಡಲಿಯು ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.

 

PREV
Read more Articles on
click me!

Recommended Stories

ನೀಟ್ ಪರೀಕ್ಷೆ ರದ್ದತಿಗೆ ವಿಪಕ್ಷಗಳ ಟೀಕೆ, ರಾಜ್ಯದಲ್ಲಿ ಎಷ್ಟೋ ಬಾರಿ ಪರೀಕ್ಷೆಗಳು ಮುಂದೂಡಿಕೆಯಾಗಿವೆ: HDK ತಿರುಗೇಟು!
Breaking: ಪ್ರಶ್ನೆ ಪತ್ರಿಕೆ ಸೋರಿಕೆ ಮೇ 3 ರಂದು ನಡೆದಿದ್ದ ನೀಟ್ ಪರೀಕ್ಷೆ ರದ್ದು, ಸಿಬಿಐ ತನಿಖೆಗೆ ಆದೇಶ