ದಾವಣಗೆರೆ ವಿವಿಯಲ್ಲಿ ವಿವಿಧ ಬೋಧಕೇತರ ಹುದ್ದೆಗಳ ಅರ್ಹತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಿ ಆಂಗ್ಲ ಭಾಷೆಯಲ್ಲಿ ಪರೀಕ್ಷೆ ನಡೆಸಿರುವುದನ್ನು ಖಂಡಿಸಿ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ವಿವಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ವರದಿ : ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್
ದಾವಣಗೆರೆ (ಮಾ.21): ದಾವಣಗೆರೆ ವಿವಿಯಲ್ಲಿ ವಿವಿಧ ಬೋಧಕೇತರ ಹುದ್ದೆಗಳ ಅರ್ಹತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಿ ಆಂಗ್ಲ ಭಾಷೆಯಲ್ಲಿ ಪರೀಕ್ಷೆ ನಡೆಸಿರುವುದನ್ನು ಖಂಡಿಸಿ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ವಿವಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಕುಲಸಚಿವರಾದ ಪ್ರೊ.ಬಿ.ಡಿ ಕುಂಬಾರ್ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ವೇದಿಕೆಯ ರಾಜ್ಯಾಧ್ಯಕ್ಷರಾದ ಅವಿನಾಶ್ ಬಿ ಮಾತನಾಡಿ ಕಳೆದ ಮಾ. 19ರ ಭಾನುವಾರದಂದು ದಾವಣಗೆರೆ ವಿಶ್ವವಿದ್ಯಾನಿಲಯದ ವಿವಿಧ ಬೋಧಕೇತರ ಹುದ್ದೆಗಳ ಅರ್ಹತಾ ಪರೀಕ್ಷೆ ನಡೆಸಿದ್ದು ಈ ಪರೀಕ್ಷೆಯಲ್ಲಿ ಅಧೀಕ್ಷಕರು ಹಾಗೂ ಪ್ರಥಮ ದರ್ಜೆ ಸಹಾಯಕರ ಹುದ್ದೆಯ ನೇಮಕಾತಿ ಪರೀಕ್ಷೆಯು ಏಕಕಾಲದಲ್ಲಿ ನಡೆಸಿರುವುದಲ್ಲದೇ ಎರಡು ಹುದ್ದೆಗಳಿಗೆ ಒಂದೇ ಪ್ರಶ್ನೆಪತ್ರಿಕೆಯನ್ನು ನೀಡಿದ್ದು ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ಇರಬೇಕಾದ ಪ್ರಶ್ನೆ ಪತ್ರಿಕೆಯು ಕೇವಲ 5 ಪ್ರಶ್ನೆಗಳನ್ನು ಮಾತ್ರ ಕನ್ನಡ ಭಾಷೆಯಲ್ಲಿ ನೀಡಿದ್ದು ಇನ್ನುಳಿದ 45 ಪ್ರಶ್ನೆಗಳು ಆಂಗ್ಲ ಭಾಷೆಯಲ್ಲಿದ್ದು, ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಗೆ ಉದ್ದೇಶ ಪೂರ್ವಕವಾಗಿ ಪ್ರಶ್ನೆ ಪತ್ರಿಕೆಗಳನ್ನು ನೀಡಿದ್ದು, ಗೊಂದಲಕ್ಕೆ ಎಡೆ ಮಾಡಿರುತ್ತಾರೆ.
ಬೆಂಗಳೂರು ಉತ್ತರ ವಿವಿ ಕ್ಯಾಂಪಸ್ ನಿರ್ಮಾಣಕ್ಕೆ ಚಾಲನೆ, 172 ಎಕರೆ ಪ್ರದೇಶದಲ್ಲಿ ನಿರ್ಮಾಣ
ಆದರೆ ಕರ್ನಾಟಕ ರಾಜ್ಯದಲ್ಲಿ ಕನ್ನಡಭಾಷೆಯೇ ಪ್ರಥಮವಾಗಿದ್ದು ಬೇರೆ ಭಾಷೆಗಳು ದ್ವಿತೀಯ ಸ್ಥಾನದಲ್ಲಿರುತ್ತದೆ. ಆದರೆ ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಸಚಿವರಾದ ಶಿವಶಂಕರ್ ಅವರು ಕೇವಲ 5 ಪ್ರಶ್ನೆಗಳನ್ನು ಮಾತ್ರ ಕನ್ನಡ ಮಾಧ್ಯಮದ ಭಾಷೆಯಲ್ಲಿ ನೀಡಿದ್ದು, ಇನ್ನುಳಿದ 45 ಪ್ರಶ್ನೆಗಳನ್ನು ಸಂಪೂರ್ಣವಾಗಿ ಆಂಗ್ಲ ಭಾಷೆಯಲ್ಲಿ ನೀಡಿದ್ದರಿಂದ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿ ಗೊಂದಲಕ್ಕೀಡಾಗಿದ್ದಾರೆ. ಈ ಪರೀಕ್ಷೆ ರದ್ದುಪಡಿಸಿ ಕನ್ನಡ ಮಾಧ್ಯಮ ಭಾಷೆ ಮತ್ತು ಆಂಗ್ಲ ಮಾಧ್ಯಮ ಭಾಷೆಯಲ್ಲಿ ಪ್ರಶ್ನೆ ಪತ್ರಿಕೆಯನ್ನು ಸಿದ್ದಪಡಿಸಿ ಹಾಲಿ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಗೆ 7 ದಿನಗಳ ಅವಧಿಯೊಳಗೆ ಮರು ಪರೀಕ್ಷೆ ನಡೆಸಬೇಕೆಂದು ಒತ್ತಾಯಿಸಿದರು.
ಸರ್ಕಾರಿ ಕೋಟಾದಡಿ ಓದಿ ವೈದ್ಯೆಯಾದ ಅಮೆರಿಕ ಪ್ರಜೆಗೆ ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆ
ಪ್ರತಿಭಟನೆಯಲ್ಲಿ ಬಾಲ ನಾಗರಾಜ್, ಆನಂದ್ ಇಟ್ಟಿಗುಡಿ, ಫಯಾಜ್ ಅಹ್ಮದ್, ಸದ್ದಾಮ್ ಹುಸೇನ್, ಫಯಾಜ್, ಜಗದೀಶ್, ಮಂಜುನಾಥ್, ಅಕ್ಬರ್ ಭಾಷಾ, ಹನುಮಂತು, ಶಾಂತಮ್ಮ, ಬಸವರಾಜ್, ಚಮನ್ ಶರೀಫ್, ನಟರಾಜ್ ಎಸ್ ವಿ, ಸುಲೇಮಾನ್, ಪುನೀತ್, ಎನ್ ದಾದಾಪೀರ್, ಬಸವರಾಜ್, ರಾಜು ಆನೆಕೊಂಡ ,ಹುಲಿಕುಂಟೆಶ್ವರ್ ಇನ್ನು ಅನೇಕರು ಉಪಸ್ಥಿತರಿದ್ದರು