ಪಿಜಿ ವೈದ್ಯ ಕೋರ್ಸ್‌ಗಳಿಗೆ ಅ.9ರಿಂದ ಪ್ರವೇಶ ಆರಂಭ, ಶುಲ್ಕ ಪಾವತಿಸಲು ಅ.11 ಕೊನೆ ದಿನ

By Gowthami K  |  First Published Oct 8, 2023, 11:08 AM IST

ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಸಂಬಂಧಿಸಿದ ಫಲಿತಾಂಶ ಪ್ರಕಟವಾಗಿದ್ದು, ಅ.9ರಿಂದ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದೆ


ಬೆಂಗಳೂರು (ಅ.8): ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಸಂಬಂಧಿಸಿದ ಫಲಿತಾಂಶ ಪ್ರಕಟವಾಗಿದ್ದು, ಅ.9ರಿಂದ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದ್ದಾರೆ.

ಸೀಟು ಸಿಕ್ಕಿರುವ ಅಭ್ಯರ್ಥಿಗಳು ಅ.9ರಂದು ಬೆಳಿಗ್ಗೆ 9ರಿಂದ ಅ.10ರ ರಾತ್ರಿ 8ರವರೆಗೆ ಚಲನ್ ಡೌನ್‌ಲೋಡ್ ಮಾಡಿಕೊಂಡು ಶುಲ್ಕ‌ ಪಾವತಿಸಬಹುದು. ಶುಲ್ಕ ಪಾವತಿಸಲು ಅ.11 ಕೊನೆ ದಿನವಾಗಿದೆ. ಕ್ಲಾಸ್- ‘ವೈ’ ಅಭ್ಯರ್ಥಿಗಳು ಶುಲ್ಕ ಪಾವತಿ‌ ನಂತರ ಮೂಲ ದಾಖಲೆಗಳನ್ನು ಪ್ರಾಧಿಕಾರದ ಕಚೇರಿಗೆ ಸಲ್ಲಿಸಬೇಕು.

Tap to resize

Latest Videos

undefined

ಶುಲ್ಕ ಪಾವತಿ ಮತ್ತು ಮೂಲ ದಾಖಲೆಗಳನ್ನು ಸಲ್ಲಿಸಿದ ನಂತರ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ಸಿಗಲಿದೆ. ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ನಂತರ ಅ.12ರಂದು ಕಾಲೇಜಿಗೆ ವರದಿ‌ ಮಾಡಿಕೊಳ್ಳಲು‌ ಕೊನೆಯ ದಿನವಾಗಿದೆ ಎಂದು ತಿಳಿಸಿದ್ದಾರೆ.

ಬೆನ್ನುಮೂಳೆಯಿಂದ ಅಂತರಿಕವಾಗಿ ಬೇರ್ಪಟ್ಟಿದ್ದ ಬಾಲಕನ ತಲೆ ಬುರುಡೆ ಯಶಸ್ವಿ ಮರು ಜೋಡಣೆ

ಮುಕ್ತ ವಿವಿ ಪ್ರವೇಶಾತಿ:
ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವಿವಿಧ ಕೋರ್ಸುಗಳ ಪ್ರಥಮ ವರ್ಷದ ಪ್ರವೇಶಾತಿಗೆ ಅ.20ಕೊನೆಯ ದಿನವಾಗಿದೆ.

ಹಾವೇರಿ ಪ್ರಾದೇಶಿಕ ಕೇಂದ್ರದಲ್ಲಿ ಸ್ನಾತಕ, ಸ್ನಾತಕೋತ್ತರ ಕೋರ್ಸ್‌ಗಳಾದ ಬಿಎ, ಬಿ.ಕಾಂ, ಬಿಬಿಎ, ಬಿಸಿಎ, ಬಿಎಲ್ಐಎಸ್‌ಸಿ, ಬಿಎಸ್ಸಿ, ಎಂಎ, ಎಂಎಸಿ, ಎಂಸಿಜೆ, ಎಂಕಾಂ, ಎಂಎಲ್ಐಎಸ್‌ಸಿ, ಬಿಎಸ್‌ಡಬ್ಲೂ, ಎಂಎಸ್‌ಡಬ್ಲೂ ಮತ್ತು ಪಿಜೆ ಡಿಪ್ಲೋಮಾ ಸರ್ಟಿಫಿಕೇಟ್ ಪ್ರೋಗ್ರಾಂಗಳಿಗೆ ಪ್ರವೇಶಾತಿ ಮಾಡಿಕೊಳ್ಳಲಾಗುತ್ತಿದೆ. ಪ್ರಥಮ ವರ್ಷದ ಕೋರ್ಸ್‌ಗಳ ಪ್ರವೇಶಾತಿಗೆ ಅ.20ಕೊನೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಪ್ರಾದೇಶಿಕ ನಿರ್ದೇಶಕರು, ಕರಾಮುವಿ ಪ್ರಾದೇಶಿಕ ಕೇಂದ್ರ, ಶಿವಲಿಂಗೇಶ್ವರ ವಿದ್ಯಾಪೀಠ, ಹಾವೇರಿ ಮೊ. 9743276734, 7406185779, 9481683318, 789991669 ಹಾಗೂ 8123770545 ಸಂಪರ್ಕಿಸಲು ಕೋರಲಾಗಿದೆ.

ದಂತ ವೈದ್ಯನ ಎಡವಟ್ಟು..ವೃದ್ಧೆ ಸುಕನ್ಯಾ ನರಳಾಟ..!

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 2023-24ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಯ ಪ್ರವೇಶಾತಿ ಅವಧಿಯನ್ನು ಅ.20ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ವಿವಿ ಪ್ರಾದೇಶಿಕ ನಿರ್ದೇಶಕಿ ಮೈತ್ರಿ ಡಿ.ಎಸ್. ತಿಳಿಸಿದ್ದಾರೆ.

ವಿಜಯಪುರದಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಪ್ರಸ್ತುತ 2023-24ನೇ (ಜುಲೈ ಆವೃತ್ತಿ) ಶೈಕ್ಷಣಿಕ ಸಾಲಿಗೆ ಪ್ರವೇಶ ಆರಂಭಿಸಿದ್ದು, ಸ್ನಾತಕ, ಸ್ನಾತಕೋತ್ತರ ಕೋರ್ಸ್‌ಗಳಿಗೆ ಅರ್ಜಿಯನ್ನು ಸಲ್ಲಿಸಲು ಅ.20 ರವರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ.

ಬಿಎ, ಬಿಕಾಂ, ಬಿಬಿಎ, ಬಿಸಿಎ, ಬಿಎಸ್ಸಿ (ಐಟಿ) ಹಾಗೂ ಬಿಎಸ್ಸಿ (14 ಕಾಂಬಿನೇಷನ್ಸ್), ಬಿಎಸ್‌ಡಬ್ಲೂ, ಬಿಎಲ್‌ಐಎಸ್ಸಿ, ಎಂ.ಎ, ಎಂ.ಕಾಂ, ಎಂಬಿಎ, ಎಂ.ಎಲ್.ಐ.ಎಸ್ಸಿ, ಎಂ.ಎಸ್ಸಿ, ಎಂಸಿಎ ಪಿಜಿ ಸರ್ಟಿಫಿಕೇಟ್ ಪ್ರೊಗ್ರಾಮ್ಸ್, ಡಿಪ್ಲೋಮಾ ಪ್ರೊಗ್ರಾಮ್ಸ್ ಮತ್ತು ಸರ್ಟಿಫಿಕೇಟ್ ಪ್ರೊಗ್ರಾಮಗಳಿಗೆ ಪ್ರವೇಶ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‌ಸೈಟ್ www.ksoumysuru.ac.in ನಲ್ಲಿ ಕೋರ್ಸ್‌ಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ನಂತರ ಪ್ರಾದೇಶಿಕ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ ಪ್ರವೇಶಾತಿ ಪಡೆಯಬಹುದಾಗಿದೆ.

ವಿಜಯಪುರ ಪ್ರಾದೇಶಿಕ ಕೇಂದ್ರ ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೂ ಭಾನುವಾರ ಕೂಡ ಅ. 20ರವರೆಗೆ ಕಾರ್ಯ ನಿರ್ವಹಿಸಲಿದ್ದು, ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಪ್ರಾದೇಶಿಕ ಕೇಂದ್ರ, ವಿ.ಎಸ್.ಜಿ, ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಆವರಣ, ಆಕಾಶವಾಣಿ ಕೇಂದ್ರದ ಎದುರುಗಡೆ, ರಿಂಗ್ ರಸ್ತೆ, ವಿಜಯಪುರ ಮೊ: 9483628267, 9483920065, 7892550053, 9110256738 ಸಂಖ್ಯೆಗೆ ಸಂಪರ್ಕಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

click me!