ಸಿಇಟಿ ಫಲಿತಾಂಶ ಪ್ರಕಟ: ರಿಸಲ್ಟ್ ನೋಡಲು ಇಲ್ಲಿ ಕ್ಲಿಕ್ ಮಾಡಿ

By Suvarna News  |  First Published Sep 20, 2021, 3:43 PM IST

* ಸಿಇಟಿ ಫಲಿತಾಂಶ ಪ್ರಕಟ: ರಿಸಲ್ಟ್
* ಫಲಿತಾಂಶ ಪ್ರಕಟಿಸಿದ ಉನ್ನತ ಶಿಕ್ಷಣ ಸಚಿವ ಡಾ ಸಿ.ಎನ್ ಅಶ್ವತ್ಥ್ ನಾರಾಯಣ 
* 2020-2021ನೇ ಸಾಲಿನ  ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ನಡೆದಿದ್ದ ಸಿಇಟಿ


ಬೆಂಗಳೂರು, (ಸೆ.20): 2020-2021ನೇ ಸಾಲಿನ  ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ನಡೆದಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಪ್ರಕಟವಾಗಿದೆ.

ಇಂದು (ಸೆ.20) ಮಧ್ಯಾಹ್ನ ಉನ್ನತ ಶಿಕ್ಷಣ ಸಚಿವ ಡಾ ಸಿ.ಎನ್ ಅಶ್ವತ್ಥ್ ನಾರಾಯಣ ಅವರು ಮಲ್ಲೇಶ್ವರಂನ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದರು. 

Tap to resize

Latest Videos

undefined

 2020-2021ನೇ ಸಾಲಿನ ಸಿಇಟಿ ರಿಸಲ್ಟ್: ಚೆಕ್‌ ಮಾಡಲು ಇಲ್ಲಿ ಕ್ಲಿಕ್ ಮಾಡಿ 

ಮೈಸೂರಿನ ಮೇಘನ್ ಹೆಚ್​.ಕೆ ಸಿಇಟಿ ಇಂಜಿನಿಯರಿಂಗ್​ ಸೇರಿದಂತೆ ಎಲ್ಲ 5 ಕೋರ್ಸ್ ಗಳಲ್ಲೂ ಪ್ರಥಮ ರ್ಯಾಂಕ್ ಪಡೆದಿದ್ದಾರೆ.

ಮೈಸೂರಿನ ಪ್ರಮತಿ ಹಿಲ್ ವೀವ್ ಅಕಾಡೆಮಿಯ ಮೇಘನ್ ಎಚ್.ಕೆ. ಅವರು ಎಲ್ಲಾ ವಿಭಾಗದಲ್ಲೂ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. 
ಅಲ್ಲದೇ ಇಂಜಿನಿಯರಿಂಗ್, ಬಿ-ಫಾರ್ಮಾ, ಕೃಷಿ ವಿಜ್ಞಾನ, ಪಶುವೈದ್ಯಕೀಯ, ಯೋಗ ಮತ್ತು ನ್ಯಾಚುರೋಪಥಿಯಲ್ಲಿ ಮೇಘನ್ ಎಚ್. ಕೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೆಬ್​ಸೈಟ್​ನಲ್ಲಿ ಫಲಿತಾಂಶ ನೋಡಬಹುದು. kea.kar.nic.in ವೆಬ್​ಸೈಟ್​ನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದು.

ಫಲಿತಾಂಶ ನೋಡುವುದು ಹೇಗೆ?
* kea.kar.nic.in ಭೇಟಿ ನೀಡಿ.
* KCET  result 2021 ಎನ್ನುವ ಲಿಂಕ್‌ ಮೇಲೆ ಕ್ಲಿಕ್ ಮಾಡಿ.
* ರಿಜಿಸ್ಟರ್ ನಂಬರ್ ಹಾಕಿ. 
* ಬಳಿಕ ಸಬ್‌ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ
* ನಂತರ ಫಲಿತಾಂಶ ಸ್ಕ್ರೀನ್‌ ಮೇಲೆ ಕಾಣಿಸುತ್ತದೆ.
* ಸ್ಕ್ರೀನ್ ಮೇಲೆ ಕಾಣುವ ಫಲಿತಾಂಶವನ್ನು ಡೌನ್‌ಲೋಡ್ ಮತ್ತು ಪ್ರಿಂಟ್ ಔಟ್ ತೆಗೆದುಕೊಳ್ಳಬಹುದು.

click me!