ಬೆಂಗಳೂರು (ಸೆ.20): ಕಳೆದ ಆಗಸ್ಟ್-ಸೆಪ್ಟಂಬರ್‌ನಲ್ಲಿ ನಡೆಸಲಾಗಿದ್ದ ದ್ವಿತೀಯ ಪಿಯುಸಿ 2021ನೇ ಸಾಲಿನ ವಾರ್ಷಿಕ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ಶೇ.29.91 ಫಲಿತಾಂಶ ಬಂದಿದೆ.
ವಿಜ್ಞಾನ ವಿಭಾಗದಲ್ಲಿ ಶೇ 70.83, ವಾಣಿಜ್ಯ ಶೇ. 29.98, ಕಲಾ ವಿಭಾಗದಲ್ಲಿ ಶೇ. 39.06 ರಷ್ಟು ಫಲಿತಾಂಶ ಬಂದಿದೆ. ಈ ಬಾರಿಯೂ ಬಾಲಕೀಯರೇ ಮೇಲು ಗೈ ಸಾಧಿಸಿದ್ದು ಶೇ.36.72 ರಷ್ಟು ಫಲಿತಾಂಶ ನೀಡಿದ್ದಾರೆ. ಬಾಲಕರು ಶೇ. 26.06 ರಷ್ಟು ಮಂದಿ ಪಾಸ್ ಆಗಿದ್ದಾರೆ.
ಖಾಸಗಿ ಪಿಯು ಕಾಲೇಜಲ್ಲಿ ಹೆಚ್ಚುವರಿ ಪ್ರವೇಶಾತಿ ಅವಕಾಶ
ಅತಿ ಹೆಚ್ಚು ಅಂಕ ವಿಷಯವಾರು
ವಿಜ್ಞಾನ ವಿಭಾಗದಲ್ಲಿ 600- 573 ಅಂಕ ಪಡೆಯಲಾಗಿದೆ. ವಾಣಿಜ್ಯ ವಿಭಾಗದಲ್ಲಿ 600- 594 ಅತಿ ಹೆಚ್ಚು ಅಂಕ ಪಡೆಯಲಾಗಿದೆ. ಇನ್ನು ಕಲಾ ವಿಭಾಗದಲ್ಲಿ 600 -592 ಅತೀ ಹೆಚ್ಚಿನ ಅಂಕವಾಗಿದೆ.
ಜಿಲ್ಲಾವಾರು ಫಲಿತಾಂಶ ಗಮನಿಸಿದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡ ಜಿಲ್ಲಾವಾರು ಫಲಿತಾಂಶದಲ್ಲಿ ಬೆಂಗಳೂರು ಉತ್ತರ ಪ್ರಥಮ ಸ್ಥಾನ ಪಡೆದುಕೊಂಡಿದೆ. ಬೆಂಗಳೂರು ದಕ್ಷಿಣ ದ್ವಿತೀಯ ಸ್ಥಾನದಲ್ಲಿದ್ದರೆ, ಬೆಂಗಳೂರು ಗ್ರಾಮಾಂತರ ತೃತೀಯ ಹಾಗು ಕೊನೆಯ ಸ್ಥಾನ ಕೊಡಗು ಪಡೆದಿದೆ.
ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು
580 ವಿದ್ಯಾರ್ಥಿಗಳು ಡಿಸ್ಟಿಕ್ಷನ್ ಅಂಕ ಶೇ.85 ಕ್ಕಿಂತ ಅಧಿಕ ಪಡೆದುಕೊಂಡಿದ್ದಾರೆ. ಪ್ರಥಮ ದರ್ಜೆಯಲ್ಲಿ 1.939 ವಿದ್ಯಾರ್ಥಿಗಳು ಪಾಸ್ ಆಗಿದ್ದರೆ. ಸೆಕೆಂಡ್ ಕ್ಲಾಸ್ನಲ್ಲಿ 1578 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಇನ್ನು ತೃತೀಯ ಸ್ಥಾನವವನ್ನು 1410 ವಿದ್ಯಾರ್ಥಿಗಳು ಪಡೆದಿದ್ದಾರೆ.
ದಕ್ಷಿಣ ಕನ್ನಡ : ಸೆ.1ರಿಂದ ದ್ವಿತೀಯ ಪಿಯು ಕ್ಲಾಸ್ ಆರಂಭ
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಫಲಿತಾಂಶ ಪ್ರಕಟಿಸಿದ್ದಾರೆ. ವಿದ್ಯಾರ್ಥಿಗಳು kea.kar.nic.in ವೆಬ್‌ಸೈಟ್‌ನಲ್ಲಿ ತಮ್ಮ ಫಲಿತಾಂಶ ವೀಕ್ಷಿಸಬಹುದು.
ಕೋವಿಡ್ ಹಿನ್ನೆಲೆಯಲ್ಲಿ ಖಾಸಗಿ ಅಭ್ಯರ್ಥಿಗಳನ್ನು ಹೊರತುಪಡಿಸಿ ದ್ವಿತೀಯ ಪಿಯುಸಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ ಎಲ್ಲ ವಿದ್ಯಾರ್ಥಿಗಳ ಎಸ್‌ಎಸ್‌ಎಲ್‌ಸಿ ಮತ್ತು ಪ್ರಥಮ ಪಿಯುಸಿ ಫಲಿತಾಂಶ ಆಧರಿಸಿ ಉತ್ತೀರ್ಣ ಮಾಡಲಾಗಿತ್ತು. ಆದರೆ ಖಾಸಗಿ ಅಭ್ಯರ್ಥಿಗಳ ಪರೀಕ್ಷೆಯನ್ನು ನಡೆಸಲಾಗಿತ್ತು.
ಅದರಂತೆ ಸರ್ಕಾರ 17470 ಮಂದಿ ಖಾಸಗಿ ಅಭ್ಯರ್ಥಿಗಳ ಜತೆಗೆ ಎಸ್ಸೆಸ್ಸೆಲ್ಸಿ ಮತ್ತು ಪ್ರಥಮ ಪಿಯು ಫಲಿತಾಂಶ ಆಧರಿಸಿ ನೀಡಿದ ಫಲಿತಾಂಶ ರದ್ದುಪಡಿಸಿಕೊಂಡಿದ್ದ 592 ಅಭ್ಯರ್ಥಿಗಳೂ ಸೇರಿ ಒಟ್ಟು 18,413 ಮಂದಿಗೆ ಕಳೆದ ಆ.19ರಿಂದ ಸೆ.3ರ ವರೆಗೆ ಪರೀಕ್ಷೆ ನಡೆಸಿತ್ತು.