ಕಾಲೇಜುಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ

By Suvarna News  |  First Published Apr 6, 2022, 5:56 PM IST

ರಾಷ್ಟ್ರೀಯ ಶಿಕ್ಷಣ ನೀತಿ ಅಡಿ ಕಾಲೇಜುಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ ಎಂಬ ರಾಜ್ಯ ಸರಕಾರದ ಆದೇಶಕ್ಕೆ ರಾಜ್ಯ ಉಚ್ಚ ನ್ಯಾಯಾಲಯ ತಡೆಯಾಜ್ಞೆ ತಂದಿದೆ.


ಬೆಂಗಳೂರು (ಎ.6): ರಾಷ್ಟ್ರೀಯ ಶಿಕ್ಷಣ ನೀತಿಯ (National Education Policy) ಅಡಿ ಎಲ್ಲಾ ವಿದ್ಯಾರ್ಥಿಗಳಿಗೂ ಕನ್ನಡ (Kannada) ಕಲಿಕೆಯನ್ನ ರಾಜ್ಯ ಸರ್ಕಾರ (Karnataka Government) ಕಡ್ಡಾಯಗೊಳಿಸಿತ್ತು. ಆದರೆ ಇದಕ್ಕೆ ತದ್ವಿರುದ್ಧವಾಗಿ, ರಾಷ್ಟ್ರೀಯ ಶಿಕ್ಷಣ ನೀತಿಯಡಿ ಪ್ರಾದೇಶಿಕ ಭಾಷೆ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರವು ಹೈಕೋರ್ಟ್ ಗೆ ಪ್ರಮಾಣಪತ್ರ ಸಲ್ಲಿಸಿತ್ತು. ಹಾಗಾಗಿ ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ (Karnataka High court) ಒಪ್ಪಿಗೆ ನೀಡಲು ನಿರಾಕರಿಸಿದೆ.

ಕಾಲೇಜು ಹಂತದಲ್ಲಿಯೂ ಕನ್ನಡ ಕಲಿಕೆ ಕಡ್ಡಾಯಗೊಳಿಸಿ, ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಈ ಸಂಬಂಧ ಸರ್ಕಾರ ಹೊರಡಿಸಿದ್ದ ಎರಡು ಆದೇಶಗಳಿಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. 2021 ನೇ ಸಾಲಿನಲ್ಲಿ ಆಗಸ್ಟ್​ 7 ಮತ್ತು ಸೆಪ್ಟೆಂಬರ್ 15 ರಂದು ಹೊರಡಿಸಿದ್ದ ಆದೇಶಗಳಿಗೆ ಇದೀಗ ತಡೆ ನೀಡಲಾಗಿದೆ.

Tap to resize

Latest Videos

VIJAYAPURA ಕೆಂಡ ಹಾಯ್ದ ನಾಲ್ಕು ರಾಜ್ಯಗಳ 3 ಸಾವಿರ ಭಕ್ತರು!

ಬಿಡಿಎ ಆಯುಕ್ತರಾಗಿ ಎಂ.ಬಿ. ರಾಜೇಶ್ ಗೌಡ ನೇಮಕ ಅಸಿಂಧು?
ಬಿಡಿಎ ಆಯುಕ್ತರಾಗಿ ಎಂ.ಬಿ. ರಾಜೇಶ್ ಗೌಡ ನೇಮಕ ಪ್ರಶ್ನಿಸಿ ರಿಟ್ ಸಲ್ಲಿಸಲಾಗಿದ್ದು ಈ ಸಂಬಂಧ KASನಿಂದ IASಗೆ ಪದೋನ್ನತಿ ಹೊಂದಿದವರು ಆಯುಕ್ತರಾಗಬಹುದೇ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ ಮಾಡಿದೆ. ಇದಕ್ಕೆ ಉತ್ತರಿಸಲು ಸರ್ಕಾರಕ್ಕೆ ಹೆಚ್ಚಿನ ಕಾಲಾವಕಾಶ ನೀಡಲು ಹೈಕೋರ್ಟ್ ನಿರಾಕರಿಸಿದೆ. ಇಂತಹ ವಿಚಾರಗಳಲ್ಲಿ ಕಣ್ಮುಚ್ಚಿ ಕೂರಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸಿಜೆ‌ ರಿತುರಾಜ್ ಅವಸ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಲಾಲ್ ಕಟ್ ಮಾಡಿದ್ದೆ ನಾವು ತಿನ್ನೋದು, ಮಾಂಸ ತಿನ್ನದವರಿಂದ ವಿವಾದ ಸೃಷ್ಟಿ

ವಕೀಲ ಮೋಹನ್ ಕುಮಾರ್ ಎಂಬುವವರು ರಿಟ್ ಸಲ್ಲಿಸಿದ್ದರು. ಬಿಡಿಎ ನಿಯಮಾವಳಿಯಂತೆ ನೇಮಕ ನಡೆದಿಲ್ಲ. ವಿಭಾಗೀಯ ಆಯುಕ್ತ ದರ್ಜೆಯ ಅಧಿಕಾರಿ ನೇಮಕವಾಗಬೇಕಿತ್ತು. ಆದರೆ ಅದಕ್ಕಿಂತ ಕೆಳ ಹಂತದ ಅಧಿಕಾರಿಯ ನೇಮಕವಾಗಿದೆ. ಹಾಗಾಗಿ ಎಂ.ಬಿ. ರಾಜೇಶ್ ಗೌಡ ನೇಮಕವನ್ನು ಅನೂರ್ಜಿತಗೊಳಿಸಲು ರಿಟ್​ ಮೂಲಕ ಮನವಿ ಮಾಡಲಾಗಿದೆ. ತತ್ಸಂಬಂಧ ಎಂ.ಬಿ. ರಾಜೇಶ್ ಗೌಡ, ಬಿಡಿಎ ಮತ್ತು ಸರ್ಕಾರಕ್ಕೆ ಕೋರ್ಟ್​ ನೋಟಿಸ್ ನೀಡಿದೆ. ಏಪ್ರಿಲ್​ 13ರೊಳಗೆ ಪ್ರತಿಕ್ರಿಯಿಸಲು ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಸೂಚನೆ ನೀಡಿದೆ.

click me!