ಮೆಡಿಕಲ್ ಕಾಲೇಜು ಪ್ರಾರಂಭಕ್ಕೆ ಸರ್ಕಾರದಿಂದ ಗ್ರೀನ್ ಸಿಗ್ನಲ್

By Suvarna News  |  First Published Jul 16, 2021, 4:54 PM IST

* ಮೆಡಿಕಲ್ ಕಾಲೇಜು ಮತ್ತು ಆರೋಗ್ಯ ಸಂಬಂಧಿಸಿದ ಕಾಲೇಜು ಪ್ರಾರಂಭಕ್ಕೆ ಗ್ರೀನ್ ಸಿಗ್ನಲ್.
* ಅಧಿಕೃತ ಆದೇಶ ಹೊರಡಿಸಿದ ರಾಜ್ಯ ಸರ್ಕಾರ.
* ಕಡ್ಡಾಯವಾಗಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಕನಿಷ್ಠ ಒಂದು ಡೋಸ್ ಲಸಿಕೆ ಪಡೆದಿರಬೇಕು.


ಬೆಂಗಳೂರು, (ಜು.16): ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಮೆಡಿಕಲ್ ಕಾಲೇಜು ಮತ್ತು ಆರೋಗ್ಯ ಸಂಬಂಧಿಸಿದ ಕಾಲೇಜು ಪ್ರಾರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

ಈ ರಾಜ್ಯ ಸರ್ಕಾರ ಇಂದು (ಶುಕ್ರವಾರ) ಅಧಿಕೃತ ಆದೇಶ ಹೊರಡಿಸಿದ್ದು, ಕಡ್ಡಾಯವಾಗಿ ಕೊರೋನಾ ನಿಯಮದ ಪ್ರಕಾರ ಕಾಲೇಜು ಪ್ರಾರಂಭಕ್ಕೆ ಸರ್ಕಾರದ ಅನುಮತಿ ನೀಡಿದೆ.

Latest Videos

undefined

ನೀಟ್ ಪರೀಕ್ಷಾ ದಿನಾಂಕ ಪ್ರಕಟಿಸಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್

 ಮೆಡಿಕಲ್, ಡೆಂಟಲ್ ಕಾಲೇಜ್, ಆಯುಷ್ , ಇನ್ಸ್ಟಿಟ್ಯೂಟ್, ನರ್ಸಿಂಗ್ ಕಾಲೇಜು ಮತ್ತು ಹೆಲ್ತ್ ಕೇರ್ ಅಕಾಡೆಮಿಕ್ ಇನ್ಸ್ಟಿಟ್ಯೂಟ್, ಕಾಲೇಜು ಸೇರಿದಂತೆ ಆರೋಗ್ಯ ಮತ್ತು ಮೆಡಿಕಲ್ ಸೆಕ್ಟರ್ ಸಂಸ್ಥೆಗಳನ್ನ ತೆರೆಯಲು ಅನುಮತಿಸಲಾಗಿದೆ.

 ಇನ್ನು ವಿದ್ಯಾರ್ಥಿಗಳು, ಟೀಚಿಂಗ್ ಸ್ಟಾಫ್, ನಾನ್ ಟೀಚಿಂಗ್ ಸ್ಟಾಪ್ ಅಲ್ಲದೇ ಇತರೆ ಸಿಬ್ಬಂದಿಗಳು ಕನಿಷ್ಠ ಒಂದು ಡೋಸ್ ಕೊರೋನಾ ಲಸಿಕೆ ಪಡೆದಿರಬೇಕು ಎಂದು ಸರ್ಕಾರ ಷರತ್ತು ವಿಧಿಸಿದೆ.

ಒಂದು ವೇಳೆ ಕೊರೋನಾ ಸೋಂಕಿನ ಮಾರ್ಗಸೂಚಿ ಕ್ರಮಗಳನ್ನು ಪಾಲಿಸದೇ ಇದ್ದಲ್ಲಿ, ಅಂತಹ ಕಾಲೇಜು, ಸಂಸ್ಥೆ ವಿರುದ್ಥ ಕೊರೋನಾ ಸೋಂಕಿನ ನಿಯಂತ್ರಣ ಕಾನೂನು ಕ್ರಮ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಕಾಯ್ದೆ 2005ರ ಸೆಕ್ಷನ್ 51 ರಿಂದ 60 ರಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೇ ಐಪಿಸಿ ಸೆಕ್ಷನ್ 188 ರಡಿಯಲ್ಲಿಯೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

click me!