ಕೇಂದ್ರದ AI Mission ಸಹಭಾಗಿತ್ವದಲ್ಲಿ 50 ಸರ್ಕಾರಿ ಕಾಲೇಜಲ್ಲಿ ಹೈಟೆಕ್‌ ಎಐ ಲ್ಯಾಬ್‌ ಸ್ಥಾಪನೆಗೆ ಮುಂದಾದ ಸರ್ಕಾರ!

Kannadaprabha News, Ravi Janekal |   | Kannada Prabha
Published : Jun 13, 2026, 08:35 AM IST
Karnataka govt establish 50 AI labs in government colleges in tier 2 3 cities

ಸಾರಾಂಶ

ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶ ಹೆಚ್ಚಿಸಲು, ಕರ್ನಾಟಕ ಸರ್ಕಾರವು 50 ಸರ್ಕಾರಿ ಕಾಲೇಜುಗಳಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ (AI) ಲ್ಯಾಬ್‌ಗಳನ್ನು ಸ್ಥಾಪಿಸಲು ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರದ ಎಐ ಮಿಷನ್ ಸಹಭಾಗಿತ್ವದಲ್ಲಿ ನಡೆಯುವ ಈ ಯೋಜನೆ ಬಗ್ಗೆ ತಿಳಿಯಿರಿ

  • ರಾಜ್ಯ ಸರ್ಕಾರದಿಂದ ಅನುಮೋದನೆ
  • ಇದಕ್ಕೆ ₹10 ಕೋಟಿ ವೆಚ್ಚ: ಪ್ರಿಯಾಂಕ್‌

ಬೆಂಗಳೂರು (ಜೂ.13): ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಶೀಲತೆ(Employment in rural areas,) ಹೆಚ್ಚಿಸಲು ರಾಜ್ಯದ ಎರಡು ಮತ್ತು ಮೂರನೇ ಶ್ರೇಣಿಯ ನಗರ ಹಾಗೂ ಪಟ್ಟಣಗಳ 50 ಸರ್ಕಾರಿ ಕಾಲೇಜುಗಳಲ್ಲಿ 10 ಕೋಟಿ ರು. ವೆಚ್ಚದಲ್ಲಿ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ (AI) ಪ್ರಯೋಗಾಲಯಗಳನ್ನು ಸ್ಥಾಪಿಸಲು ಕರ್ನಾಟಕ ರಾಜ್ಯ ಸರ್ಕಾರ(Karnataka Government) ಆಡಳಿತಾತ್ಮಕ ಅನುಮೋದನೆ ನೀಡಿದೆ.

ಬಜೆಟ್‌ನಲ್ಲಿ ಘೋಷಿಸಿದಂತೆ ಕೇಂದ್ರ ಸರ್ಕಾರದ ಎಐ ಮಿಷನ್‌(Central Government's AI Mission) ಸಹಭಾಗಿತ್ವದಲ್ಲಿ ʼಎಐʼ ಪ್ರಯೋಗಾಲಯಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ.

ಆಯ್ಕೆ ಮಾಡಲಾಗುವ ಶಿಕ್ಷಣ ಸಂಸ್ಥೆ / ಕಾಲೇಜ್‌ಗಳಲ್ಲಿ ಆಧುನಿಕ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ(AI Lab) ಒಳಗೊಂಡ ಪ್ರಯೋಗಾಲಯಗಳನ್ನು ಸ್ಥಾಪಿಸಿ, ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ, ಕೌಶಲ ಅಭಿವೃದ್ಧಿ ಮತ್ತು ಹೊಸ ಆವಿಷ್ಕಾರಗಳಿಗೆ ಅವಕಾಶ ಕಲ್ಪಿಸಿಕೊಡಲಾಗುವುದು. ಯುವಜನರು ಇತ್ತೀಚಿನ ತಂತ್ರಜ್ಞಾನಗಳನ್ನು ಕರಗತ ಮಾಡಿಕೊಳ್ಳಲು ಮತ್ತು ಉದ್ಯೋಗಾರ್ಹತೆ ಹೆಚ್ಚಿಸಿಕೊಳ್ಳಲು ಇದು ನೆರವಾಗಲಿದೆ ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಎಐ ಮಿಷನ್‌ ಯೋಜನೆಯಡಿ ಪ್ರತಿಯೊಂದು ಪ್ರಯೋಗಾಲಯಕ್ಕೆ ಮೂರು ವರ್ಷಗಳ ಅವಧಿಗೆ 68.98 ಲಕ್ಷ ರು. ಮೊತ್ತದ ನೆರವನ್ನು ಮೂರು ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ 10 ಕೋಟಿ ರು. ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿದೆ. ಮೊದಲ ವರ್ಷ 6.29 ಕೋಟಿ ರು ಬಿಡುಗಡೆ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ಕೃತಕ ಬುದ್ಧಿಮತ್ತೆ ದತ್ತಾಂಶ ಪ್ರಯೋಗಾಲಯಗಳನ್ನು ಸ್ಥಾಪಿಸಲು 23 ಶೈಕ್ಷಣಿಕ ಸಂಸ್ಥೆಗಳನ್ನು ಆಯ್ಕೆ ಮಾಡಿರುವುದಕ್ಕೂ ಸರ್ಕಾರದ ಅನುಮೋದನೆ ದೊರೆತಿದೆ ಎಂದು ಸಚಿವರು ತಿಳಿಸಿದ್ದಾರೆ.

PREV
Read more Articles on
click me!

Recommended Stories

Karnataka Free student bus Pass: ಉಚಿತ ಬಸ್ ಪಾಸ್ ವಿತರಣೆಗೆ 123 ಕೇಂದ್ರಗಳ ಆರಂಭ; ಹಣ ಕಟ್ಟಿದ್ದರೆ ರೀಫಂಡ್!
Ballari University Exam Scam: ಬಳ್ಳಾರಿ ವಿವಿಯಲ್ಲಿ ಹಣ ಕೊಟ್ಟರೆ ಪರೀಕ್ಷೆ ಪಾಸ್‌! ಆಡಿಯೊ ವೈರಲ್