* ರೈತರ ಮಕ್ಕಳಿಗೆ ಶಿಷ್ಯ ವೇತನ ನೀಡುವ ಯೋಜನೆ ಜಾರಿಗೆ
* ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಪ್ರಕಟ
* ಪ್ರಮಾಣವಚನ ಸ್ವೀಕರಿಸಿದ ದಿನ ಯೋಜನೆ ಘೋಷಣೆ ಮಾಡಿದ್ದ ಬೊಮ್ಮಾಯಿ
ಬೆಂಗಳೂರು, (ಆ.07): ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನ ರೈತರ ಮಕ್ಕಳಿಗೆ ಒಂದು ಮಹತ್ವದ ಯೋಜನೆಯನ್ನು ಘೋಷಣೆ ಮಾಡಿದ್ರು. ಇದೀಗ ರಾಜ್ಯ ಸರ್ಕಾರ ರೈತರ ಮಕ್ಕಳಿಗೆ ಶಿಷ್ಯ ವೇತನ ನೀಡುವ ಬಗ್ಗೆ ಅಧಿಕೃತ ಆದೇಶ ಹೊರಿಡಿಸಿದೆ.
ಆರ್ಥಿಕ ಬಿಕ್ಕಟ್ಟು ಇದೆಯಾ? ಈ ಸ್ಕಾಲರ್‌ಶಿಪ್‌ಗಳಿಗೆ ಅಪ್ಲೈ ಮಾಡಿ
undefined
ಕೃಷಿ ಇಲಾಖೆಯ ಸರ್ಕಾರದ ಜಂಟಿ ಕಾರ್ಯದರ್ಶಿ ರಫೀ ಅಹಮದ್ ಎಂ.ಎಸ್ ಅವರು ರೈತರ ಮಕ್ಕಳಿಗೆ ಶಿಷ್ಯ ವೇತನ ಯೋಜನೆಯ ನಡವಳಿಗಳನ್ನು ಹೊರಡಿಸಿದ್ದು, ರೈತರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಶಿಷ್ಯ ವೇತನ ನಿಗದಿಪಡಿಲಾಗಿದೆ. ಅದು ಈ ಕೆಳಗಿನಂತಿದೆ.
ಯಾರಿಗೆ ಎಷ್ಟು ವೇತನ?
* ಪಿಯುಸಿ, ಡಿಪ್ಲೊಮಾ, ಐಟಿಐ ವಿದ್ಯಾರ್ಥಿಗಳಿಗೆ 2,500 ರೂ., ವಿದ್ಯಾರ್ಥಿನಿಯರಿಗೆ 3,000 ರೂ. ನೀಡಲಾಗುವುದು
* ಪದವಿಯ ಬಿಎ, ಬಿಎಸ್ಸಿ, ಬಿಕಾಂ ವಿದ್ಯಾರ್ಥಿಗಳಿಗೆ 5000 ರೂಪಾಯಿ ಮತ್ತು ವಿದ್ಯಾರ್ಥಿನಿಯರಿಗೆ 5500 ರೂ. ನೀಡಲಾಗುವುದು.
* ಎಲ್.ಎಲ್.ಬಿ., ಪ್ಯಾರಾಮೆಡಿಕಲ್, ಬಿ ಫಾರ್ಮಾ, ನರ್ಸಿಂಗ್ ವಿದ್ಯಾರ್ಥಿಗಳಿಗೆ 7,500 ರೂಪಾಯಿ, ವಿದ್ಯಾರ್ಥಿನಿಯರಿಗೆ 8000 ರೂ. ನೀಡಲಾಗುವುದು.
* ಎಂಬಿಬಿಎಸ್, ಬಿಇ, ಬಿಟೆಕ್, ಪಿಜಿ ವಿದ್ಯಾರ್ಥಿಗಳಿಗೆ 10,000 ರೂ., ವಿದ್ಯಾರ್ಥಿನಿಯರಿಗೆ 11,000 ರೂಪಾಯಿ ನೀಡಲಾಗುತ್ತದೆ. ಕೃಷಿ ಜಮೀನು ಹೊಂದಿರುವ ರೈತರ ಮಕ್ಕಳಿಗೆ ಶಿಷ್ಯವೇತನ ನೀಡಲಾಗುವುದು ಎಂದು ಹೇಳಲಾಗಿದೆ.
ಷರತ್ತುಗಳು
* ರೈತರ ಮಕ್ಕಳು ಕರ್ನಾಟಕ ರಾಜ್ಯದ ಅನುದಾನದಿಂದ ಪಾವತಿಸುವಂತ ಒಂದು ಶಿಷ್ಯವೇತನಕ್ಕೆ ಮಾತ್ರ ಅರ್ಹರಾಗುತ್ತಾರೆ. ಆದರೆ ಮೆರಿಟ್, ಅರ್ಹತಾ ಪರೀಕ್ಷೆ, ಶೈಕ್ಷಣಿಕ ಪರೀಕ್ಷೆಗಳಲ್ಲಿ Rank ಇತ್ಯಾದಿಗಳ ಆಧಾರದ ಮೇಲೆ ಪಡೆಯುವ ಶಿಷ್ಯವೇತನ, ಪ್ರಶಸ್ತಿ, ಪ್ರತಿಫಲ, ಇವುಗಳನ್ನು ರೈತರ ಮಕ್ಕಳು ಪಡೆದಿದ್ದರೂ, ಈ ಶಿಷ್ಯವೇತನವನ್ನು ಪಡೆಯಲು ಅರ್ಹರಾಗಿರುತ್ತಾರೆ.
* ರೈತರ ಮಕ್ಕಳ ತಂದೆ-ತಾಯಿ ಇಬ್ಬರು ಕೃಷಿ ಜಮೀನಿನ ಒಡೆಯರಾಗಿದ್ದರೇ, ಈ ಯೋಜನೆಯಲ್ಲಿ ಒಂದು ಶಿಷ್ಯವೇತನಕ್ಕೆ ಮಾತ್ರ ರೈತರ ಮಕ್ಕಳು ಅರ್ಹರಾಗಿರುತ್ತಾರೆ.
* ಈ ಶಿಷ್ಯವೇತನವು ಶಿಕ್ಷಣದ ಯಾವುದೇ ಕೋರ್ಸಿನ ಸೆಮಿಷ್ಟರ್, ಶೈಕ್ಷಣಿಕ ವರ್ಷಗಳಿಗೆ ಮಿತಿಯಾಗಿರತ್ಕದ್ದು.
* ಕೋರ್ಸ್ ನ ಸೆಮಿಸ್ಟರ್ ನಲ್ಲಿ, ಶೈಕ್ಷಣಿಕ ವರ್ಷದಲ್ಲಿ ಅನುತ್ತೀರ್ಣ ಹೊಂದಿ, ಪುನಹ ಆ ಸೆಮಿಸ್ಟರ್, ಶೈಕ್ಷಣಿಕ ವರ್ಷದಲ್ಲಿ ವಿದ್ಯಾಭ್ಯಾಸದ ಪುನರಾವರ್ತನೆಯಾದರೇ, ( ಪುನಹ ಪರೀಕ್ಷೆ ತೆಗೆದುಕೊಂಡರೇ ) ವಿದ್ಯಾರ್ಥಿಗಳು ಶಿಕ್ಷವೇತನವನ್ನು ಪಡೆಯಲು ಅರ್ಹರಾಗಿರುವುದಿಲ್ಲ.
* ಈ ಶಿಷ್ಯವೇತನವನ್ನು ಯಾವುದಾದರೂ ಒಂದು ವಿಧದ ಕೋರ್ಸ್ ಗೆ ನೀಡಲಾಗುವುದು.