ಸರ್ಕಾರಿ ಶಾಲಾ ಆವರಣದಲ್ಲಿ ಬೆಳೆದ ವಿಷಕಾರಿ ಬೀಜ ತಿಂದು, ಅಸ್ವಸ್ಥರಾದ ಮಕ್ಕಳು

Published : Jun 20, 2023, 06:47 PM ISTUpdated : Jun 20, 2023, 06:56 PM IST
ಸರ್ಕಾರಿ ಶಾಲಾ ಆವರಣದಲ್ಲಿ ಬೆಳೆದ ವಿಷಕಾರಿ ಬೀಜ ತಿಂದು, ಅಸ್ವಸ್ಥರಾದ ಮಕ್ಕಳು

ಸಾರಾಂಶ

ಶಾಲೆಯ ಆವರಣದಲ್ಲಿ ಬೆಳೆದ ವಿಷಕಾರಿ ಬೀಜವನ್ನು ತಿಂದು 10ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಉತ್ತರಕನ್ನಡ (ಜೂ.20): ಸರ್ಕಾರಿ ಶಾಲೆಯ ಆವರಣದಲ್ಲಿ ಬೆಳೆದ ವಿಷಕಾರಿ ಬೀಜವನ್ನು ತಿಂದು 10ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಗುಂಡೊಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಪ್ರತಿನಿತ್ಯದಂತೆ ಮಂಗಳವಾರೂ ಶಾಲೆಗೆ ಹೋಗಿದ್ದ ಮಕ್ಕಳು, ಶಾಲೆಯ ಆವರಣದಲ್ಲಿ ಬೆಳೆದ ವಿಷಕಾರಿ ಬೀಜವನ್ನು ತಿಂದಿದ್ದಾರೆ. ಇನ್ನು ಬೀಜವನ್ನು ತಿಂದಿದ್ದ 10ಕ್ಕೂ ಅಧಿಕ ಮಕ್ಕಳು ಅಸ್ವಸ್ಥರಾಗಿದ್ದು ಕೂಡಲೇ ಅವರಿಗೆ ಶಾಲಾ ಶಿಕ್ಷಕರು ನೀರನ್ನು ಕುಡಿಸಿ, ಕೈಯಲ್ಲಿದ್ದ ಬೀಜವನ್ನು ತಿನ್ನದಂತೆ ಸೂಚನೆ ನೀಡಿದ್ದಾರೆ. ಕೆಲವರಿಗೆ ವಾಂತಿಯನ್ನು ಮಾಡಿಸುವ ಪ್ರಯತ್ನವನ್ನೂ ಮಾಡಿದ್ದು, ಕೂಡಲೇ ಆಂಬುಲೆನ್ಸ್‌ಗೆ ಕರೆ ಮಾಡಿ ವಿದ್ಯಾರ್ಥಿಗಳನ್ನು ಸ್ಥಲೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಹಾಲು ತಗೊಂಡೋಗು ಅಂದ್ರೆ, ಮಗಳ ಪ್ರಾಣನೇ ಹೊತ್ತೊಯ್ದ ಹಾಲಿನ ವಾಹನ

ಶೇಂಗಾ ಬೀಜವೆಂದು ವಿಷದ ಬೀಜ ತಿಂದರು: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 1ನೇ, 2ನೇ ಮತ್ತು 3ನೇ ತರಗತಿಯ ಮಕ್ಕಳು ಶಾಲೆಯ ಆವರಣದಲ್ಲಿ ಮಳೆಗಾಲದಲ್ಲಿ ಬೆಳೆಯುವ ವಿಷದ ಜಾತಿಯ ಬೀಜವನ್ನು ಶೇಂಗಾ (ಕಡಲೆಕಾಯಿ) ಬೀಜ ಎಂದು ಭಾವಿಸಿ ವಿಷ ಬೀಜ ತಿಂದಿದ್ದಾರೆ. ನಂತರ, ಮಕ್ಕಳಲ್ಲಿ ವಾಂತಿ ಬೇಧಿ ಕಾಣಿಸಿಕೊಂಡಿತ್ತು. ಕಾಳಗಿನಕೊಪ್ಪ ಗ್ರಾಮದ ಸರ್ಕಾರಿ ಆಸ್ಪತ್ರೆ ಹಾಗೂ ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಕ್ಕಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ. ಹಳಿಯಾಳ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪ್ಯಾರಾಲಿಸಿಸ್‌ ಇಂಜೆಕ್ಷನ್‌ ಪಡೆದ ಮಹಿಳೆ ಸಾವು:
ಉತ್ತರಕನ್ನಡ (ಜೂ.19): ಕಾರವಾರದ ಹಳಗ ಗ್ರಾಮದ ಸೈಂಟ್ ಮೆರೀಸ್ ಆಸ್ಪತ್ರೆಯಲ್ಲಿ ನಿನ್ನೆ ಸೋಮವಾರ ಪ್ಯಾರಾಲಿಸಿಸ್‌ ತಡೆಗಟ್ಟುವ ಇಂಜೆಕ್ಷನ್ ತೆಗದುಕೊಂಡ ವಿವಾಹಿತೆ ಮಹಿಳೆ ಸಾವನ್ನಪ್ಪಿದ್ದಳು. ಉತ್ತರ ಕನ್ನಡ ಜಿಲ್ಲೆಯ ಕಾರವಾರ‌ ತಾಲೂಕಿನಲ್ಲಿ ಘಟನೆನ ನಡೆದಿತ್ತು. ಮೃತ ಮಹಿಳೆಯನ್ನು ಕೊಪ್ಪಳ ಮೂಲದ‌ ಸ್ವಪ್ನ‌ ರಾಯ್ಕರ್ (32) ಎಂದು ಗುರುತಿಸಲಾಗಿತ್ತು.  ಸೈಂಟ್ ಮೆರೀಸ್ ಆಸ್ಪತ್ರೆಯು ಪ್ಯಾರಲಿಸೀಸ್ ಗೆ ಇಂಜೆಕ್ಷನ್ ಕೊಡುವ ಆಸ್ಪತ್ರೆಯಾಗಿದೆ. ರಾಜ್ಯ ಹೊರ ರಾಜ್ಯದಿಂದ ಸಾಕಷ್ಟು ಸಂಖ್ಯೆಯಲ್ಲಿ ಇಂಜೆಕ್ಷನ್ ತೆಗೆದುಕೊಳ್ಳಲು ಇಲ್ಲಿಗೆ ಜನರು‌ ಬರ್ತಾರೆ. ಆದರೆ, ನಿನ್ನೆ ಬೆಳಗ್ಗೆ ಇಂಜೆಕ್ಷನ್‌ ತೆಗೆದುಕೊಂಡ ಮಹಿಳೆ ದಿಢೀರನೆ ಕುಸಿದು ಬಿದ್ದು ಸಾವನ್ನಪ್ಪಿರುವ ದುರ್ಘಟನೆ ನಡೆದಿತ್ತು.

ಹೋಟೆಲ್‌ ಊಟ ಮೀರಿಸಿದ ಇಂದಿರಾ ಕ್ಯಾಂಟೀನ್‌: ತರಹೇವಾರಿ ಊಟದ ಮೆನು ಬಿಡುಗಡೆ

ಸಮಸ್ಯೆ ಇಲ್ಲದಿದ್ದರೂ ಇಂಜೆಕ್ಷನ್‌ ಪಡೆದಿದ್ದ ಮಹಿಳೆ:  ಜನರು ಯಾವುದೇ ಸಮಸ್ಯೆ ಇಲ್ಲದಿದ್ದರೂ ಪ್ಯಾರಲಿಸೀಸ್ ಆಗದಂತೆ ಮುಂಜಾಗ್ರತೆಯಾಗಿ ಇಂಜೆಕ್ಷನ್ ಪಡೆಯಲು ಕಾರವಾರದ ಸೈಂಟ್ ಮೆರೀಸ್ ಆಸ್ಪತ್ರೆಗೆ ಬರುತ್ತಿದ್ದರು. ಅದರಂತೆಯೇ ಮುಂಜಾಗ್ರತಾ ಕ್ರಮವಾಗಿ ಇಂಜೆಕ್ಷನ್‌ ಪಡೆಯಲು ಮುಂದಾಗಿದ್ದ ಮಹಿಳೆ, ಇಂಜೆಕ್ಷನ್ ಪಡೆದು ಬೆಡ್‌ನಿಂದ‌ ಇಳಿಯುತ್ತಿದ್ದಂತೇ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ನಂತರ ಮಹಿಳೆಯ ಮೃತದೇಹ ಜಿಲ್ಲಾ‌ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. 

PREV
Read more Articles on
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ