ಕೆಇಎ ಮೂಲಕ ಕೆ -ಸೆಟ್ ಪರೀಕ್ಷೆ ನಡೆಸಲು ತೀರ್ಮಾನಿಸಿದ ರಾಜ್ಯ ಸರ್ಕಾರ

By Govindaraj S  |  First Published Dec 24, 2022, 12:23 PM IST

ಕೆಇಎ ಮೂಲಕ ಕೆ -ಸೆಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಕೆ -ಸೆಟ್ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯಾಗಿದ್ದು, ಈ ಸಂಬಂಧ ಉನ್ನತ ಶಿಕ್ಷಣ ಇಲಾಖೆ ಆದೇಶವನ್ನು ಹೊರಡಿಸಿದೆ.


ಬೆಂಗಳೂರು (ಡಿ.24): ಕೆಇಎ ಮೂಲಕ ಕೆ -ಸೆಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಕೆ -ಸೆಟ್ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯಾಗಿದ್ದು, ಈ ಸಂಬಂಧ ಉನ್ನತ ಶಿಕ್ಷಣ ಇಲಾಖೆ ಆದೇಶವನ್ನು ಹೊರಡಿಸಿದೆ. ಕೆ ಸೆಟ್ ಪರೀಕ್ಷೆ ನಡೆಸೋ ಜವಬ್ದಾರಿ ಮೈಸೂರು ವಿಶ್ವ ವಿದ್ಯಾಲಯದ್ದಾಗಿತ್ತು. 2021ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಕೆ -ಸೆಟ್ ಪರೀಕ್ಷೆ ನಡೆಸಲಾಗಿತ್ತು. 

ಕೆ-ಸೆಟ್ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿರುವ ಸಾಕಷ್ಟು ದೂರು ಕೇಳಿ ಬಂದ ಹಿನ್ನಲೆ  ಈ ನಿರ್ಧಾರಕ್ಕೆ ಸರ್ಕಾರ ಬಂದಿದೆ. ಮೈಸೂರು ವಿವಿ ಕೆ -ಸೆಟ್ ನಡೆಸುವ ನೋಡೆಲ್ ಏಜೆನ್ಸಿಯಾಗಿದ್ದು, ಯುಜಿಸಿ ಮಾನ್ಯತೆ ಪಡೆದಿತ್ತು. ಪ್ರತಿ ವರ್ಷ 42 ವಿಷಯಗಳಲ್ಲಿ ಪರೀಕ್ಷೆ ನಡೆಸುತ್ತಿದ್ದು, ಈ ಹಿಂದಿನ ಪರೀಕ್ಷೆಯಲ್ಲಿ ಅವ್ಯವಹಾರ ನಡೆದ ಹಿನ್ನೆಲೆಯಲ್ಲಿ ಕೆಇಎ ಮೂಲಕ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.

Tap to resize

Latest Videos

ತಪ್ಪು ಮಾಹಿತಿ ನೀಡಿದವರ ಅರ್ಜಿ ತಿರಸ್ಕಾರ: ಜಲಸಂಪನ್ಮೂಲ ಇಲಾಖೆ ಸ್ಪಷ್ಟನೆ

ಕೆಸೆಟ್‌ ಪರೀಕ್ಷೆ ಕೆಇಎ ವ್ಯಾಪ್ತಿಗೆ- ಪ್ರತಾಪ ಸಿಂಹ ಶ್ಲಾಘನೆ: ಕೆ.ಸೆಟ್‌ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಓಉಅ) ಮೂಲಕ ನಡೆಸುವಂತೆ ಆದೇಶಿಸಿರುವುದು ಶ್ಲಾಘನೀಯ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕೆ. ಸೆಟ್‌ ಪರೀಕ್ಷೆಯನ್ನು ಅಕ್ರಮವಾಗಿ ನಡೆಸುತ್ತಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೋಸ ಆಗಬಾರದು ಹಾಗೂ ಅವರಿಗೆ ಆದ್ಯತೆ ಸಿಗಬೇಕು ಎಂಬ ಉದ್ದೇಶದಿಂದ ಕೆ.ಸೆಟ್‌ ಪರೀಕ್ಷೆಯಲ್ಲಿ ಪಾರದರ್ಶಕತೆ ತರಬೇಕು ಎಂದು ಯುಜಿಸಿ ಅಧ್ಯಕ್ಷ ಜಗದೀಶ್‌ ಕುಮಾರ್‌ ಅವರಲ್ಲಿ ಸಂಸದ ಪ್ರತಾಪ ಸಿಂಹ ಈ ಹಿಂದೆ ಮನವಿ ಮಾಡಿದ್ದರು. 

ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ವಿರುದ್ದ ಹಾಸನ ಡೀಸಿಗೆ ಸಂಸದೆ ಮನೇಕಾ ಗಾಂಧಿ ದೂರು

ಈ ಸಂಬಂಧ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್‌ ನಾರಾಯಣ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದರು. ಈ ಸಂಬಂಧ ಇಂದು ರಾಜ್ಯ ಸರ್ಕಾರ ಕೆ.ಸೆಟ್‌ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನಡೆಸಲು ತೀರ್ಮಾನಿಸಿದೆ. ನನ್ನ ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಿರುವ ಉನ್ನತ ಶಿಕ್ಷಣ ಸಚಿವರಾದ ಡಾ.ಅಶ್ವತ್ಥ ನಾರಾಯಣ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.

click me!