ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಯುಜಿಸಿಇಟಿ 2024ರ (UGCET 2024) ಫಲಿತಾಂಶವು ಪ್ರಕಟಿಸಲಾಗಿದ್ದು, ಹರ್ಷ ಕಾರ್ತಿಕೇಯ ಮೊದಲ ರ್ಯಾಂಕ್ ಪಡೆದಿದ್ದಾರೆ.
ಬೆಂಗಳೂರು (ಜೂ 1): ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಯುಜಿಸಿಇಟಿ 2024ರ (UGCET 2024) ಫಲಿತಾಂಶವು ಪ್ರಕಟಿಸಲಾಗಿದ್ದು, ಹರ್ಷ ಕಾರ್ತಿಕೇಯ ಮೊದಲ ರ್ಯಾಂಕ್ ಪಡೆದಿದ್ದಾರೆ. ಒಟ್ಟು 3,10,314 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, ಅವರ ಅಂಕಗಳ ಅನುಸಾರ ರ್ಯಾಂಕಿಂಗ್ ಹಂಚಿಕೆ ಮಾಡಲಾಗಿದೆ.
ಸದರಿ 2024ರ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಏ.18 ಮತ್ತು ಏ.19ರಂದು ಕರ್ನಾಟಕ ರಾಜ್ಯದಲ್ಲಿನ ಒಟ್ಟು 737 ಕೇಂದ್ರಗಳಲ್ಲಿ ನಡೆಸಲಾಗಿತ್ತು. ಒಟ್ಟು 3,49,653 ಅಭ್ಯರ್ಥಿಗಳು ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದು, ಆ ಪೈಕಿ 3,10,314 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿರುತ್ತಾರೆ. ಪ್ರಾಧಿಕಾರದ ವೆಬ್‌ಸೈಟ್ http://kea.kar.nic.in ನಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ವಿಷಯವಾರು ಅಂಕಗಳ ವಿವರಗಳನ್ನು ಮೇಲ್ಕಂಡ ವೆಬ್‌ಸೈಟುಗಳಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು.
undefined
ಸರ್ಕಾರಿ ಶಾಲೆಗೆ ಬಂದ ವಿದ್ಯಾರ್ಥಿಗೆ ಪಾದಪೂಜೆ ಮಾಡಿದ ಶಿಕ್ಷಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ
ಸಿಇಟಿ ಪರೀಕ್ಷೆಯಲ್ಲಿ ಪಠ್ಯಕ್ರಮದ ಹೊರತಾಗಿ ಪ್ರಶ್ನೆಗಳು ಬಂದಿರುವುದಾಗಿ ದೂರು ಬಂದ ಹಿನ್ನಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ವಿಷಯ ಪರಿಣಿತರ ವರದಿಯನ್ನಾಧರಿಸಿ ಈ ಕೆಳಗಿನಂತೆ ಪ್ರಶ್ನೆಗಳನ್ನು ಕೈಬಿಟ್ಟು ಮೌಲ್ಯಮಾಪನ ಮಾಡಿಲಾಗಿರುತ್ತದೆ. ಭೌತಶಾಸ್ತ್ರ 09, ರಸಾಯನಶಾಸ್ತ್ರ 15, ಗಣಿತ 15, ಜೀವಶಾಸ್ತ್ರ 11 ಪ್ರಶ್ನೆಗಳನ್ನು ಬಿಟ್ಟು ಮೌಲ್ಯಮಾಪನ ಮಾಡಿ ಫಲಿತಾಂಶ ಪ್ರಕಟಿಸಲಾಗಿದೆ. ಅದರಲ್ಲಿಯೂ ಗಣಿತ 01 ಹಾಗೂ ಭೌತಶಾಸ್ತ್ರ 01 ಸೇರಿ ಎರಡೂ ವಿಷಯಗಳಲ್ಲಿ ತಲಾ ಒಂದೊಂದು ಅಂಕಗಳನ್ನು ಕೃಪಾಂಕವಾಗಿ ನೀಡಲಾಗಿದೆ.
ಎಲ್ಲ ವಿಷಯಗಳಲ್ಲಿ ಪರಿಷ್ಕೃತ ಸರಿ ಉತ್ತರಗಳನ್ನು ಆಧರಿಸಿ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುದೆ. ಜೊತೆಗೆ ಪರಿಷ್ಕೃತ ಸರಿ ಉತ್ತರಗಳನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (ಕೆಎಸ್‌ಇಎಬಿ) ನಡೆಸಿರುವ ದ್ವಿತೀಯ ಪಿಯು ವಾರ್ಷಿಕ ಮೊದಲ ಎರಡು ಪರೀಕ್ಷೆಗಳ ಪೈಕಿ ಅತಿಹೆಚ್ಚು ಅಂಕಗಳನ್ನು ಗಣನೆಗೆ ತೆಗೆದುಕೊಂಡು ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಸ್ಪೆಲ್‌ಬೀ ಸ್ಪರ್ಧೆ: ಭಾರತೀಯ ಮೂಲದ ಬೃಹತ್ ಸೋಮಾ ವಿಜಯ
ವಿವಿಧ ಕೋರ್ಸ್‌ಗಳಿಗೆ ಅರ್ಹತೆ ಪಡೆದ ಅಭ್ಯರ್ಥಿಗಳ ವಿವರ