ಗುಡ್‌ನ್ಯೂಸ್: ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ

By Suvarna News  |  First Published Jul 9, 2021, 2:50 PM IST

* ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ
* ಒಂದು ವಾರಗಳ ಕಾಲ ಸಮಯಾವಕಾಶ ವಿಸ್ತರಣೆ
* ಈ ಹಿಂದೆ ಜುಲೈ 10ರೊಳಗೆ ಅರ್ಜಿ ಸಲ್ಲಿಸಲು ಕೊನೆ ದಿನವಾಗಿತ್ತು


ಬೆಂಗಳೂರು, (ಜುಲೈ.09): ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಸಿಇಟಿ-2021 ಪರೀಕ್ಷೆ ಬರೆಯಲು  ಆನ್‌ಲೈನ್‌ ಅರ್ಜಿ ಸಲ್ಲಿಸುವ ಅವಧಿಯನ್ನು ಜುಲೈ 16ರವರೆಗೆ ವಿಸ್ತರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ತಿಳಿಸಿದ್ದಾರೆ. 

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಅರ್ಜಿ ಸಲ್ಲಿಕೆಯ ಜತೆಗೆ ಶುಲ್ಕ ಪಾವತಿಯನ್ನು ಜುಲೈ 19ರವರೆಗೂ ಪಾವತಿ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದಿದ್ದಾರೆ. 

Tap to resize

Latest Videos

ಸಿಇಟಿ ಪರೀಕ್ಷೆಗೆ ಆನ್​ಲೈನ್ ಮೂಲಕ ಅರ್ಜಿ ಆಹ್ವಾನ 

ಪೋಷಕರು ಮತ್ತು ವಿದ್ಯಾರ್ಥಿಗಳು ಮನವಿ ಮಾಡಿದ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ವಿಶೇಷ ವರ್ಗದ ಪ್ರಮಾಣ ಪತ್ರಗಳನ್ನು ಸಲ್ಲಿಸಲು ಜುಲೈ 14ರಿಂದ 20ರವರೆಗೆ ಅವಕಾಶ ನೀಡಲಾಗಿದೆ. ಎನ್‌ಸಿಸಿ, ಕ್ರೀಡೆ, ರಕ್ಷಣೆ, ರಕ್ಷಣೆ (ನಿವೃತ್ತ), ಸ್ಕೌಟ್ಸ್‌ ಅಂಡ್‌ ಗೈಡ್ಸ್‌ ವರ್ಗಗಳನ್ನು ಕ್ಲೇಮ್‌ ಮಾಡುವ ಅಭ್ಯರ್ಥಿಗಳು ನಿಗದಿಪಡಿಸಿರುವ ತಮಗೆ ಹತ್ತಿರವಾದ ಯಾವುದಾದರೂ ಕೇಂದ್ರಕ್ಕೆ ತೆರಳಿ ಪ್ರಮಾಣ ಪತ್ರಗಳನ್ನು ಸಲ್ಲಿಸಬಹುದಾಗಿದೆ. 

ಹೆಚ್ಚಿನ ವಿವರಗಳಿಗೆ http://kea.kar.nic.in ವೆಬ್‌ತಾಣಕ್ಕೆ ಭೇಟಿ ವಿವರ ಪಡೆಯಬಹುದು ಎಂದು ಡಿಸಿಎಂ ತಿಳಿಸಿದ್ದಾರೆ.

click me!