ಬಿಜೆಪಿ ಸರ್ಕಾರದ ಅವಧಿಯಲ್ಲಾದ ಪಠ್ಯ ಪರಿಷ್ಕರಣೆಯಿಂದ ವಿವಾದಕ್ಕೀಡಾಗಿದ್ದ ರಾಜ್ಯ ಪಠ್ಯಕ್ರಮದ 1 ರಿಂದ 10ನೇ ತರಗತಿ ವರೆಗಿನ ಕನ್ನಡ ಪ್ರಥಮ ಹಾಗೂ ದ್ವಿತೀಯ ಭಾಷೆ, 9 ಮತ್ತು 10ನೇ ತರಗತಿಯ ಕನ್ನಡ ತೃತೀಯ ಭಾಷೆ ಮತ್ತು 6ರಿಂದ 10ನೇ ತರಗತಿಯ ಸಮಾಜ ವಿಜ್ಞಾನ ವಿಷಯಗಳ ಪಠ್ಯಪುಸ್ತಕಗಳನ್ನು ರಾಜ್ಯ ಸರ್ಕಾರ ಹೊಸದಾಗಿ ಪರಿಷ್ಕರಣೆ ಮಾಡಿದೆ.
ಬೆಂಗಳೂರು (ಮಾ.06): ಬಿಜೆಪಿ ಸರ್ಕಾರದ ಅವಧಿಯಲ್ಲಾದ ಪಠ್ಯ ಪರಿಷ್ಕರಣೆಯಿಂದ ವಿವಾದಕ್ಕೀಡಾಗಿದ್ದ ರಾಜ್ಯ ಪಠ್ಯಕ್ರಮದ 1 ರಿಂದ 10ನೇ ತರಗತಿ ವರೆಗಿನ ಕನ್ನಡ ಪ್ರಥಮ ಹಾಗೂ ದ್ವಿತೀಯ ಭಾಷೆ, 9 ಮತ್ತು 10ನೇ ತರಗತಿಯ ಕನ್ನಡ ತೃತೀಯ ಭಾಷೆ ಮತ್ತು 6ರಿಂದ 10ನೇ ತರಗತಿಯ ಸಮಾಜ ವಿಜ್ಞಾನ ವಿಷಯಗಳ ಪಠ್ಯಪುಸ್ತಕಗಳನ್ನು ರಾಜ್ಯ ಸರ್ಕಾರ ಹೊಸದಾಗಿ ಪರಿಷ್ಕರಣೆ ಮಾಡಿದೆ. 2024-25ರಿಂದ ಇವು ಜಾರಿಗೆ ಬರಲಿವೆ.
ಪರಿಷ್ಕರಣೆಯಲ್ಲಿ ‘ಟಿಪ್ಪು ಸುಲ್ತಾನ್’, ‘ಹೊಸ ಧರ್ಮಗಳ ಉದಯ’ ಮತ್ತಿತರ ಹಿಂದೆ ವಿವಾದಕ್ಕೀಡಾಗಿದ್ದ ಯಾವುದೇ ಪಠ್ಯಗಳನ್ನು ಪರಿಷ್ಕರಿಸುವ ಗೋಜಿಗೆ ಹೋಗಿಲ್ಲ. ತಿದ್ದೋಲೆಯಲ್ಲಿದ್ದಂತೆ ಮುಂದುವರೆಸಲಾಗಿದೆ. ಸಾಹಿತಿ ದೇವನೂರು ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’ ಪಠ್ಯವನ್ನು ಪುನಃ ಸೇರಿಸಲಾಗಿದೆ. ವಿಶ್ವಗುರು ಬಸವೇಶ್ವರರನ್ನು ಸಾಂಸ್ಕೃತಿಕ ನಾಯಕ ಎಂದು ದಾಖಲಿಸಲಾಗಿದೆ. ಉಳಿದಂತೆ ವಿದ್ಯಾರ್ಥಿಗಳ ವಯೋಮಾನಕ್ಕೆ ಅನುಗುಣವಾಗಿ ಕೆಲವು ಪಠ್ಯಗಳನ್ನು ಮುಂದಿನ ತರಗತಿಗಳಿಗೆ ಸ್ಥಳಾಂತರಿಸಿದೆ.
undefined
ದಿನಬೆಳಗಾದರೆ ಪ್ರಧಾನಿ ಮೋದಿ ಬಗ್ಗೆ ಸಿದ್ದರಾಮಯ್ಯ ಟೀಕೆ ಏಕೆ?: ಎಚ್.ಡಿ.ದೇವೇಗೌಡ
6 ತರಗತಿ ಸಮಾಜ ವಿಜ್ಞಾನ: ಇತಿಹಾಸ ಪರಿಚಯ ಮತ್ತು ಆರಂಭಿಕ ಸಮಾಜದ ಕುರಿತ ಮಾಹಿತಿ ಇರುವ ಅಧ್ಯಾಯನವನ್ನು ಹೊಸದಾಗಿ ಸೇರಿಸಲಾಗಿದೆ. ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ ಪಠದಲ್ಲಿ ಎಲ್ಲ ಮಾಹಿತಿಯನ್ನು ನವೀಕರಿಸಲಾಗಿದೆ. ದಕ್ಷಿಣ ಭಾರತದ ರಾಜವಂಶಗಳು ಅಧ್ಯಾಯದಲ್ಲಿ ಗುಳ್ಳಕಾಯಜ್ಜಿಯ ಕಥೆ ಕೈಬಿಡಲಾಗಿದೆ. ತಿದ್ದೋಲೆಯ ಪ್ರಕಾರ ವೇದ ಕಾಲದ ಸಂಸ್ಕೃತಿ ಮತ್ತು ಹೊಸ ಧರ್ಮಗಳ ಉದಯ ಪಾಠಗಳನ್ನು ಸೇರಿಸಲಾಗಿದೆ. ಮಾನವ ಹಕ್ಕಗಳು ಅಧ್ಯಾಯದಲ್ಲಿ ಮಕ್ಕಳ ಹಕ್ಕುಗಳನ್ನು ಸೇರಿಸಲಾಗಿದೆ. ಮಾನವತೆಯ ಹಕ್ಕು ಚರ್ಚಿಸುವಾಗ ಲಿಂಗತ್ವ ಅಲ್ಪಸಂಖ್ಯಾತರ ಅವಕಾಶಗಳನ್ನು ಸೇರಿಸಲಾಗಿದೆ.
7ನೇ ತರಗತಿ ಸಮಾಜ ವಿಜ್ಞಾನ: ವಿಶ್ವಗುರು ಬಸವೇಶ್ವರರನ್ನು ಸಾಂಸ್ಕೃತಿಕ ನಾಯಕ ಎಂದು ದಾಖಲಿಸಿದೆ. ಭಾರತಕ್ಕೆ ಐರೋಪ್ಯರ ಆಗಮನ ಮತ್ತು ಬ್ರಿಟೀಷ್ ಆಳ್ವಿಯ ಪರಿಣಾಮಗಳು ಕುರಿತ ಪಾಠದಲ್ಲಿ ಸ್ಪಷ್ಟತೆ ತರಲು 2017-18ನೇ ರ ಪರಿಷ್ಕೃತ ಪಠ್ಯದ ಅಂಶಗಳನ್ನು ಮರು ನಿರೂಪಿಸಲಾಗಿದೆ. ಸಾಮಾಜಿಕ ಧಾಮಿಕ ಸುಧಾರಣೆಗಳು ಪಠ್ಯ ಸೇರ್ಪಡೆ ಮೂಲಕ ಮೈಸೂರು ಮತ್ತು ಇತರೆ ಸಂಸ್ಥಾನಗಳ ಅಧ್ಯಾಯದ ಜೊತೆಗೆ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಮಾಹಿತಿ ಸೇರಿಸಲಾಗಿದೆ. ಪೌರನೀತಿಯಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳನ್ನು ಪರಿಚಯಿಸುವ ಅಧ್ಯಾಯನ ಸೇರಿಸಲಾಗಿದೆ.
8ನೇ ತರಗತಿ ಇತಿಹಾಸ: ಸಿಂಧೂ-ಸರಸ್ವತಿ ನಾಗರಿಕತೆ ಎಂಬ ಅಧ್ಯಾಯದ ಶೀರ್ಷಿಕೆಯಲ್ಲಿ ಪ್ರಾಚೀನ ಭಾರತದ ನಾಗರಿಕತೆಗಳು: ಸಿಂಧು ಸರಸ್ವತಿ ನಾಗರಿಕತೆ ಮತ್ತು ವೇದಗಳ ಕಾಲ ಎಂದು ಬದಲಿಸಿದೆ. ಸನಾತನ ಧರ್ಮ ಎಂಬ ಅಧ್ಯಾಯದಲ್ಲಿ ಕೆಲವು ಅಂಶಗಳನ್ನು ಸೇರಿಸಿ ವ್ಯವಸ್ಥಿತವಾದ ನಿರೂಪಣೆ ನೀಡಲಾಗಿದೆ. ಜೈನ ಮತ್ತು ಬೌದ್ಧ ಮತಗಳು ಎಂಬ ಶೀರ್ಷಿಕೆಯನ್ನು ಜೈನ ಮತ್ತು ಬೌದ್ಧ ಧರ್ಮಗಳು ಎಂದು ಬದಲಾಯಿಸಿದೆ. \B\B
9ನೇ ತರಗತಿ ಇತಿಹಾಸ: ಭಕ್ತಿಪಂಥ ಅಧ್ಯಾಯದಲ್ಲಿ ಕನಕದಾಸರು, ಪುರಂದರದಾಸರು, ಸಂತ ಶಿಶುನಾಳ ಶರೀಫರ ಮಾಹಿತಿ ಸೇರ್ಪಡೆ.
10ನೇ ತರಗತಿ ಇತಿಹಾಸ: ಕರ್ನಾಟಕದಲ್ಲಿ ಬ್ರಿಟೀಷ್ ಆಳ್ವಿಕೆಗೆ ಪ್ರತಿರೋದಗಳು ಅಧ್ಯಾಯದಲ್ಲಿ ಮೈಸೂರಿನ ಅರಸರ ಹಾಗೂ ಕಿತ್ತೂರು, ಸುರಪುರ, ಕೊಪ್ಪಳ, ಹಲಗಲಿಗಳ ಸ್ಥಳೀಯ ಬಂಡಾಯಗಳನ್ನು ಕ್ರಮಬದ್ಧವಾಗಿ ದಾಖಲಿಸಲಾಗಿದೆ. ಸಾವಿತ್ರಿ ಬಾಯಿಂ ಪುಲೆ, ಯುವ ಬಂಗಾಳಿ ಚಳವಳಿ ಮತ್ತು ಪೆರಿಯಾರ್ ಅವರ ವಿಷಯಾಂಶಗಳ ಸೇರ್ಪಡೆ.
9ನೇ ತರಗತಿ ರಾಜ್ಯ ಶಾಸ್ತ್ರ: ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ನ್ಯಾಯಾಂಗ ವ್ಯವಸ್ಥೆ ಎಂಬ ಅಧ್ಯಾಯಗಳಲ್ಲಿ ಭಾರತದ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ವಿವರಗಳನ್ನು ಸೇರಿಸಿ ನೂತನ ಸಂಸತ್ ಭವನದ ಚಿತ್ರ, ಕರ್ನಾಟಕದ ಮುಖ್ಯಮಂತ್ರಿಗಳು ಹಾಗೂ ಅವರ ಕಾಲಾವಧಿಯನ್ನು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಡಳಿತಾತ್ಮಕ ನಕ್ಷೆಯನ್ನು ಸೇರಿಸಲಾಗಿದೆ. ಅಂತಾರಾಷ್ಟ್ರೀಯ ಸಂಬಂಧಗಳನ್ನು ಪರಿಚಯಿಸುವ ಹೊಸ ಅಧ್ಯಯ ಸೇರಿಸಲಾಗಿದೆ.
10ನೇ ತರಗತಿ ರಾಜ್ಯಶಾಸ್ತ್ರ: ಮಹಿಳಾ ಮೀಸಲಾತಿ ಬಗ್ಗೆ ಇತ್ತೀಚಿನ ಮಸೂದೆಯ ನಾರೀ ಶಕ್ತಿ ವಂದನಾ ಅಧಿನಿಯಮ, ಲಿಂಗತ್ವ ಅಲ್ಪ ಸಂಖ್ಯಾತರ ಕ್ಷೇಮ ಕುರಿತ ಮಾಹಿತಿ ಸೇರಿಸಲಾಗಿದೆ. ಇದೇ ತರಗತಿಯ ಅರ್ಥಶಾಸ್ತ್ರ ಪಠ್ಯದಲ್ಲಿ ರಾಷ್ಟ್ರೀಯ ವರಮಾನ, ಅರ್ಥಶಾಸ್ತ್ರದ ಪರಿಚಯ ಮತ್ತು ವ್ಯಾಖ್ಯಾನ, ಹಸಿರು ಕ್ರಾಂತಿಯ ಹರಿಕಾರ ಡಾ.ಎಂ.ಎಸ್.ಸ್ವಾಮಿನಾಥನ್ ಅವರಿಗೆ ಗೌರವಾರ್ಥವಾಗಿ ನೀಡಿರುವ ಭಾರತ ರತ್ನ ಪ್ರಶಸ್ತಿಯ ಮಾಹಿತಿಯನ್ನು ಸೇರಿಸಲಾಗಿದೆ.
1ರಿಂದ 10ನೇ ತರಗತಿಯ ಕನ್ನಡ (ಪ್ರಥಮ ಭಾಷೆ): ಕೆ.ವಿ.ತಿರುಮಲೇಶ್, ವಿ.ಜಿ.ಭಟ್ಟರ ಮಕ್ಕಳ ಕವನಗಳ ಸೇರ್ಪಡೆ. ಕಂಬಾರರ-‘ಸೀಮೆ’, ಕಾರ್ನಾಡ್ ಅವರ- ‘ಅಕಾರ’, ದೇವಿದಾಸ- ‘ಚಕ್ರಗ್ರಹಣ’, ಮರಿಯಪ್ಪ ಭಟ್ಟ- ‘ನಮ್ಮ ಭಾಷೆ’, ಎ.ಎನ್.ಮೂರ್ತಿರಾವ್- ‘ವ್ಯಾಘ್ರ ಗೀತೆ’, ದೇವನೂರು ಮಹಾದೇವ- ‘ಎದೆಗೆ ಬಿದ್ದ ಅಕ್ಷರ’, ಅಕ್ಕಮಹಾದೇವಿ- ‘ವಚನಗಳು’ ಸೇರ್ಪಡೆ.
5ರಿಂದ 7ನೇ ತರಗತಿ ಕನ್ನಡ (ದ್ವಿತೀಯ ಭಾಷೆ): ಹೋಯಿಸಳ- ಸಂತಮ್ಮಣ್ಣ, ರಾಜತತ್ನಂ- ತುತ್ತೂರಿ, ಅಡಿಗ- ದೇಶ ಪ್ರೇಮ, ವಿ.ಜಿ. ಭಟ್ಟ- ಕನಸಿನಲ್ಲಿ ಈ ಮಕ್ಕಳ ಸಾಹಿತ್ಯದ ಶ್ರೇಷ್ಠ ಕೃತಿಗಳನ್ನು ಸೇರಿಸಲಾಗಿದೆ. 9ನೇ ತರಗತಿಗೆ ಎಸ್.ಜಿ.ನರಸಿಂಹಾಚಾರರ ಗೋವಿನ ಚರಿತ್ರೆ ಹಾಗೂ ಮುಡ್ನಾಕೂಡು ಚಿನ್ನಸ್ವಾಮಿ ಅವರ ಸಮುದ್ರ ಚುಂಬನ ಕವನಗಳನ್ನು ಪೂರಕ ಓದಿಗೆ ಸೇರಿಸಲಾಗಿದೆ.
ನೀರಿನ ಸಮಸ್ಯೆ ಪರಿಹರಿಸಲು ತಾಲೂಕಿಗೊಂದು ಹೆಲ್ಪ್‌ಲೈನ್: ಸಿಎಂ ಸಿದ್ದರಾಮಯ್ಯ
9 ಮತ್ತು 10ನೇ ತರಗತಿ ಕನ್ನಡ (ತೃತೀಯ ಭಾಷೆ): ಕೈಬಿಟ್ಟಿದ್ದ ನಾಗೇಶ್ ಹೆಗಡೆ, ಪಿ.ಲಂಕೇಶ್, ಶ್ರೀನಿವಾಸ ಉಡುಪ ಅವರ ಕವನ ಹೊಸದಾಗಿ ಸೇರ್ಪಡೆ ಮಾಡಲಾಗಿದೆ.