ನಾಳೆ (ಸೆ.20) 2020-2021ನೇ ಸಾಲಿನ ಸಿಇಟಿ ರಿಸಲ್ಟ್: ಚೆಕ್‌ ಮಾಡಲು ಇಲ್ಲಿ ಕ್ಲಿಕ್ ಮಾಡಿ

By Suvarna NewsFirst Published Sep 19, 2021, 6:04 PM IST
Highlights

* ನಾಳೆ (ಸೆ.20) 2020-2021ನೇ ಸಾಲಿನ ಸಿಇಟಿ ರಿಸಲ್ಟ್ ಪ್ರಕಟ
* ಫಲಿತಾಂಶ ಪ್ರಕಟಿಸಲಿರುವ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ
* ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ  ಮಾಹಿತಿ

ಬೆಂಗಳೂರು, (ಸೆ.19):  2020-2021ನೇ ಸಾಲಿನ  ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ನಡೆದಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಸೋಮವಾರ (ಸೆ.20) ಪ್ರಕಟವಾಗಲಿದೆ 

 ನಾಳೆ (ಸೋಮವಾರ) ಮಧ್ಯಾಹ್ನ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಸಿಇಟಿ ಫಲಿತಾಂಶ ಪ್ರಕಟ ಮಾಡಲಿದ್ದಾರೆ.

ಸಿಇಟಿ ಸುಸೂತ್ರ; ಶೇ. 95 ರಷ್ಟು ವಿದ್ಯಾರ್ಥಿಗಳು ಹಾಜರ್!

ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್​ಸೈಟ್ kea.kar.nic.in ನಲ್ಲಿ‌ ಫಲಿತಾಂಶ ವೀಕ್ಷಿಸಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದ್ದಾರೆ.

 2,01,834 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು ಇಂಜಿನಿಯರಿಂಗ್, ಯೋಗ, ನ್ಯಾಚುರೋಪತಿ, ಬಿ-ಫಾರ್ಮಾ, ಡಿ-ಫಾರ್ಮಾ, ವೆಟರ್ನರಿ & ಫಾರ್ಮ್ ಸೈನ್ಸ್​ ಸೇರಿದಂತೆ ಇತರೆ ಕೋರ್ಸ್​ಗಳಿಗೆ ಆಗಸ್ಟ್ 28,29 ಮತ್ತು 30ರಂದು  ಪರೀಕ್ಷೆ ನಡೆದಿತ್ತು.

ಗಣಿತಶಾಸ್ತ್ರ ಪರೀಕ್ಷೆಗೆ 92.90%, ಜೀವಶಾಸ್ತ್ರ ಪರೀಕ್ಷೆಗೆ 80.48%,ರಸಾಯನಶಾಸ್ತ್ರ ಪರೀಕ್ಷೆಗೆ 95.88% , ಭೌತಶಾಸ್ತ್ರ ಪರೀಕ್ಷೆಗೆ 95.91% ರಷ್ಟು ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆ ಬರೆದಿದ್ದಾರೆ. 

ಫಲಿತಾಂಶ ನೋಡುವುದು ಹೇಗೆ?
* kea.kar.nic.in ಭೇಟಿ ನೀಡಿ.
* KCET  result 2021 ಎನ್ನುವ ಲಿಂಕ್‌ ಮೇಲೆ ಕ್ಲಿಕ್ ಮಾಡಿ.
* ರಿಜಿಸ್ಟರ್ ನಂಬರ್ ಹಾಕಿ. 
* ಬಳಿಕ ಸಬ್‌ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ
* ನಂತರ ಫಲಿತಾಂಶ ಸ್ಕ್ರೀನ್‌ ಮೇಲೆ ಕಾಣಿಸುತ್ತದೆ.
* ಸ್ಕ್ರೀನ್ ಮೇಲೆ ಕಾಣುವ ಫಲಿತಾಂಶವನ್ನು ಡೌನ್‌ಲೋಡ್ ಮತ್ತು ಪ್ರಿಂಟ್ ಔಟ್ ತೆಗೆದುಕೊಳ್ಳಬಹುದು.

click me!