ನಾಳೆ ಸಿಇಟಿ ರಿಸಲ್ಟ್‌: 2 ಲಕ್ಷ ಮಕ್ಕಳ ಭವಿಷ್ಯ ನಿರ್ಧಾರ

Published : Sep 19, 2021, 10:01 AM ISTUpdated : Sep 19, 2021, 10:03 AM IST
ನಾಳೆ ಸಿಇಟಿ ರಿಸಲ್ಟ್‌: 2 ಲಕ್ಷ ಮಕ್ಕಳ ಭವಿಷ್ಯ ನಿರ್ಧಾರ

ಸಾರಾಂಶ

*  ಆಗಸ್ಟ್‌ 28ರಿಂದ 30ರವರೆಗೆ ನಡೆದಿದ್ದ ಸಿಇಟಿ ಪರೀಕ್ಷೆ *  ಸೋಮವಾರ ಬೆಳಗ್ಗೆ ಫಲಿತಾಂಶ ಪ್ರಕಟ  *  ಸಚಿವರ ದಿನಾಂಕದಲ್ಲಿ ವ್ಯತ್ಯಯವಾದಲ್ಲಿ ಸೆ.21ರಂದು ಪ್ರಕಟ   

ಬೆಂಗಳೂರು(ಸೆ.19): 2020-2021ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಸೆ.20ರ ಸೋಮವಾರ ಪ್ರಕಟವಾಗಲಿದೆ. 

ಆಗಸ್ಟ್‌ 28ರಿಂದ 30ರವರೆಗೆ ಸಿಇಟಿ ನಡೆದಿತ್ತು. ಈ ಬಾರಿ 2 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಮೌಲ್ಯಮಾಪನ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಸೆ.20ರಂದು ಫಲಿತಾಂಶ ನೀಡಲಾಗುವುದು ಎಂದು ಈ ಹಿಂದೆಯೇ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ತಿಳಿಸಿದ್ದರು. 

ಸಿಇಟಿ ವಿದ್ಯಾರ್ಥಿಗಳಿಗೆ 8 ಕೃಪಾಂಕ?

ಆ ಪ್ರಕಾರವಾಗಿಯೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಸಿದ್ಧತೆಯಲ್ಲಿ ತೊಡಗಿದ್ದು, ಸೋಮವಾರ ಬೆಳಗ್ಗೆ ಫಲಿತಾಂಶ ಪ್ರಕಟ ಮಾಡಲಿದೆ. ಸಚಿವರ ದಿನಾಂಕದಲ್ಲಿ ವ್ಯತ್ಯಯವಾದಲ್ಲಿ ಸೆ.21ರಂದು ಪ್ರಕಟಿಸಲಾಗುವುದು ಎಂದು ಕೆಇಎ ಮೂಲಗಳು ತಿಳಿಸಿವೆ.
 

PREV
click me!

Recommended Stories

ChatGPT ಬಳಸಿ ಪರೀಕ್ಷೆಯಲ್ಲಿ ಕಾಪಿ? ಸಿಕ್ಕಿಬಿದ್ದ ವಿದ್ಯಾರ್ಥಿ ಆತ್ಮಹತ್ಯೆ ಕೇಸ್​ಗೆ ಟ್ವಿಸ್ಟ್​: ಜಾತಿ ನಿಂದನೆ ಕೇಸ್​
Most Educated Cricketer: ಧೋನಿ, ಕೊಹ್ಲಿ ಅಲ್ಲ, ಟೀಂ ಇಂಡಿಯಾದ ಅತಿ ಹೆಚ್ಚು ಓದಿದ ಆಟಗಾರ ಆರ್‌ಸಿಬಿಯ ಈ ಸ್ಟಾರ್ ಕ್ರಿಕೆಟಿಗ!