KCET Results 2022; ಸಿಇಟಿ ಫಲಿತಾಂಶ ಬಿಡುಗಡೆ, ಆಗಸ್ಟ್ 5ರಿಂದ ದಾಖಲಾತಿ ಪರಿಶೀಲನೆ

By Gowthami KFirst Published Jul 30, 2022, 10:55 AM IST
Highlights

ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ಪ್ರಸಕ್ತ ಸಾಲಿನ  ಸಿಇಟಿ ಫಲಿತಾಂಶವು ಇಂದು ಬಿಡುಗಡೆಗೊಂಡಿದೆ. ಅಭ್ಯರ್ಥಿಗಳು http://www.karresults.nic.in/  ನಲ್ಲಿ ಫಲಿತಾಂಶ ವೀಕ್ಷಿಸಬಹುದು.

 ಬೆಂಗಳೂರು (ಜು.30): ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ಪ್ರಸಕ್ತ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶವು ಜು.30ರ ಶನಿವಾರ  ಪ್ರಕಟವಾಗಿದೆ. ಮಲ್ಲೇಶ್ವರಂನಲ್ಲಿರುವ ಪ್ರಾಧಿಕಾರದ ಕಚೇರಿಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಬೆಳಗ್ಗೆ  ಫಲಿತಾಂಶ ಪ್ರಕಟಿಸಿದ್ದು, ಆನ್ ಲೈನ್ ಮೂಲಕವೇ ಈ ಬಾರಿ ದಾಖಲಾತಿ ಪರಿಶೀಲನೆ ನಡೆಯಲಿದೆ. ಆಗಸ್ಟ್ 5 ರಿಂದ ದಾಖಲಾತಿ ಪರಿಶೀಲನೆ ಶುರು ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ.  11 ಗಂಟೆಗೆ ಪ್ರಾಧಿಕಾರದ ವೆಬ್‌ಸೈಟ್‌  http://www.karresults.nic.in/ ನಲ್ಲಿ ಫಲಿತಾಂಶ ಬಿಡುಗಡೆಗೊಂಡಿದ್ದು, ವಿದ್ಯಾರ್ಥಿಗಳು ಫಲಿತಾಂಶ ವೀಕ್ಷಿಸಬಹುದು ಎಂದು ಕೆಇಎ ಅಧಿಕಾರಿಗಳು ತಿಳಿಸಿದ್ದಾರೆ. ಎಂಜಿನಿಯರಿಂಗ್‌, ಕೃಷಿ, ಪಶುಸಂಗೋಪನೆ, ಆಯುಷ್‌, ಯುನಾನಿ, ಫಾರ್ಮಸಿ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಕಳೆದ ಜೂನ್‌ 16 ಮತ್ತು 17 ರಂದು ನಡೆದ ಸಿಇಟಿ ಪರೀಕ್ಷೆಗೆ ಇಟ್ಟು 2,10,829 ವಿದ್ಯಾರ್ಥಿಗಳು ಹಾಜರಾಗಿದ್ದರು. ಜೂ.18ರಂದು ಹೊರನಾಡು ಹಾಗೂ ಗಡಿನಾಡು ವಿದ್ಯಾರ್ಥಿಗಳಿಗೆ ಕನ್ನಡ ಪರೀಕ್ಷೆ ನಡೆಸಲಾಗಿತ್ತು. ರಾಜ್ಯದ ಒಟ್ಟು 486 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.ಜು.17ರಂದೇ ಸಿಇಟಿ ಪರೀಕ್ಷೆ ಪ್ರಕಟಿಸಲು ಸಿದ್ದತೆ ನಡೆದಿತ್ತಾದರು ಸಿಬಿಎಸ್‌ಇ, ಐಸಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟಣೆ ವಿಳಂಬವಾಗಿದ್ದರಿಂದ ಪ್ರಾಧಿಕಾರ ಈಗ ಫಲಿತಾಂಶ ಪ್ರಕಟಿಸಿದೆ. 

ಎಂಜಿನಿಯರ್ ಗೆ - 171656  ರ‍್ಯಾಂಕ್‌
ಕೃಷಿ ಕೋರ್ಸ್- 139968  ರ‍್ಯಾಂಕ್‌
ಪಶುಸಂಗೋಪನೆ- 142820  ರ‍್ಯಾಂಕ್‌
ಯೋಗ ಮತ್ತು ನ್ಯಾಚುರೋಪತಿ- 142750  ರ‍್ಯಾಂಕ್‌
ಬಿ ಫಾರ್ಮ್ - 174568  ರ‍್ಯಾಂಕ್‌ ನೀಡಲಾಗಿದೆ.

ಎಂಜಿನಿಯರಿಂಗ್ ನಲ್ಲಿ  ರ‍್ಯಾಂಕ್‌ ಪಡೆದವರು
ಮೊದಲ ರ‍್ಯಾಂಕ್‌  - ಅಪೂರ್ವ ಟಂಡನ್ (97% ), ನ್ಯಾಷನಲ್ ಪಬ್ಲಿಕ್ ಸ್ಕೂಲ್ ಯಲಹಂಕ
ಎರಡನೇ ರ‍್ಯಾಂಕ್‌ - ಸಿದ್ದಾರ್ಥ ಸಿಂಗ್ (96%), ಶ್ರೀ ಚೈತನ್ಯ ಟೆಕ್ನೊ ಸ್ಕೂಲ್ ಮಾರತ್ತಹಳ್ಳಿ
ಮೂರನೇ ರ‍್ಯಾಂಕ್‌  - ಆತ್ಮಕುರಿ ವೆಂಕಟ ಮಾದ್, ಶ್ರೀ ಚೈತನ್ಯ ಟೆಕ್ನೊ ಸ್ಕೂಲ್ ಮಾರತ್ತಹಳ್ಳಿ

ಬಿಎಸ್ಸಿ ಅಗ್ರಿಕಲ್ಚರ್ ನಲ್ಲಿ  ರ‍್ಯಾಂಕ್‌ ಪಡೆದವರು
ಮೊದಲ ರ‍್ಯಾಂಕ್‌  - ಅರ್ಜುನ್ ರವಿಶಂಕರ್ (93%),  HAL ಪಬ್ಲಿಕ್ ಸ್ಕೂಲ್, ಬೆಂಗಳೂರು
ಎರಡನೇ ರ‍್ಯಾಂಕ್‌ - ಸುಮೀಸ್ ಎಸ್ ಪಾಟೀಲ್  (92%), ಶ್ರೀ ಚೈತನ್ಯ ಟೆಕ್ನೊ ಸ್ಕೂಲ್, ಉಲ್ಲಾಳ, ಬೆಂಗಳೂರು
ಮೂರನೇ ರ‍್ಯಾಂಕ್‌  - ಸುದೀಪ್ YM  (92%), ವಿದ್ಯಾನಿಕೇತನ ಪಿಯು ಕಾಲೇಜ್, ತುಮಕೂರು

ಯೋಗ ಮತ್ತು ನ್ಯಾಚುರೋಪತಿಯಲ್ಲಿ  ರ‍್ಯಾಂಕ್‌ ಪಡೆದವರು
ಮೊದಲ ರ‍್ಯಾಂಕ್‌  - ಹೃಷಿಕೇಶ್ (98%), ನ್ಯಾಷನಲ್ ಸೆಂಟರ್ ಫಾರ್ ಎಕ್ಸ್ಲೆನ್ಸ್, ಬೆಂಗಳೂರು
ಎರಡನೇ ರ‍್ಯಾಂಕ್‌ - ವಿ ರಾಜೇಶ್  (96%), ಮಾದವ ಕೃಪ ಇಂಗ್ಲೀಷ್ ಸ್ಕೂಲ್, ಉಡುಪಿ 
ಮೂರನೇ ರ‍್ಯಾಂಕ್‌  - ಕೃಷ್ಣ S.R (96%), ಶ್ರೀ ಚೈತನ್ಯ ಟೆಕ್ನೊ ಸ್ಕೂಲ್, ಬೆಂಗಳೂರು

B.V.sc (ಪಶುವೈದ್ಯಕೀಯ ವಿಜ್ಞಾನ) ರ‍್ಯಾಂಕ್‌ ಪಡೆದವರು
ಮೊದಲ ರ‍್ಯಾಂಕ್‌  - ಹೃಷಿಕೇಶ್ (98%), ನ್ಯಾಷನಲ್ ಸೆಂಟರ್ ಫಾರ್ ಎಕ್ಸ್ಲೆನ್ಸ್, ಬೆಂಗಳೂರು
ಎರಡನೇ ರ‍್ಯಾಂಕ್‌ - ಮನಿಶ್, SA  (97%), ಶ್ರೀ ಚೈತನ್ಯ ಟೆಕ್ನೊ ಸ್ಕೂಲ್, ಕೆ.ಆರ್.ಪುರ ಬೆಂಗಳೂರು
ಮೂರನೇ ರ‍್ಯಾಂಕ್‌  - ಶುಭ ಕೌಶಿಕ್ (96%), ಶ್ರೀ ಚೈತನ್ಯ ಟೆಕ್ನೊ ಸ್ಕೂಲ್, ಬೆಂಗಳೂರು

ಬಿಫಾರ್ಮಾ ನಲ್ಲಿ ಟಾಪರ್ ಆದವರು
ಮೊದಲ ರ‍್ಯಾಂಕ್‌  - ಶಿಶಿರ್, RK   (98%), ನಾರಾಯಣ ಇ-ಟೆಕ್ನೊ ಸ್ಕೂಲ್ ವಿದ್ಯಾರಣ್ಯಪುರ, ಬೆಂಗಳೂರು 
ಎರಡನೇ ರ‍್ಯಾಂಕ್‌ - ಹೃಷಿಕೇಶ್   (98%), ನ್ಯಾಷನಲ್ ಸೆಂಟರ್ ಫಾರ್ ಎಕ್ಸ್ಲೆನ್ಸ್, ಬೆಂಗಳೂರು
ಮೂರನೇ ರ‍್ಯಾಂಕ್‌  - ಅಪೂರ್ವ ಟಂಡನ್  (97%), ನ್ಯಾಷನಲ್ ಪಬ್ಲಿಕ್ ಸ್ಕೂಲ್ ಯಲಹಂಕ

click me!