PUC Supplementary Result 2022; ಸೆ.12ರಂದು ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ

By Gowthami K  |  First Published Sep 8, 2022, 9:11 PM IST

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ಸೆಪ್ಟೆಂಬರ್ 12ರಂದು ಪ್ರಕಟಗೊಳ್ಳಲಿದೆ. ಈ ಬಗ್ಗೆ ಶಿಕ್ಷಣ ಸಚಿವ ಬಿಸಿ ನಾಗೇಶ್  ಟ್ವೀಟ್ ಮಾಡಿ ತಿಳಿಸಿದ್ದಾರೆ. ಪರೀಕ್ಷೆ ಬರೆದವರು ಫಲಿತಾಂಶಕ್ಕಾಗಿ ಇಲಾಖೆಯ ಅಧಿಕೃತ ವೆಬ್‌ತಾಣ karresults.nic.in ನಲ್ಲಿ ಬೆಳಗ್ಗೆ 11 ಗಂಟೆಯಿಂದ ಲಾಗ್‌ ಇನ್ ಆಗಿ ಫಲಿತಾಂಶವನ್ನು ಪರಿಶೀಲಿಸಬಹುದು.


ಬೆಂಗಳೂರು (ಸೆ. 8): ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ಸೆಪ್ಟೆಂಬರ್ 12ರಂದು ಪ್ರಕಟಗೊಳ್ಳಲಿದೆ. ಈ ಬಗ್ಗೆ ಶಿಕ್ಷಣ ಸಚಿವ ಬಿಸಿ ನಾಗೇಶ್  ಟ್ವೀಟ್ ಮಾಡಿ ತಿಳಿಸಿದ್ದಾರೆ. ಪರೀಕ್ಷೆ ಬರೆದವರು ಫಲಿತಾಂಶಕ್ಕಾಗಿ ಇಲಾಖೆಯ ಅಧಿಕೃತ ವೆಬ್‌ತಾಣ karresults.nic.in ನಲ್ಲಿ ಬೆಳಗ್ಗೆ 11 ಗಂಟೆಯಿಂದ ಲಾಗ್‌ ಇನ್ ಆಗಿ ಫಲಿತಾಂಶವನ್ನು ಪರಿಶೀಲಿಸಬಹುದು. ಕಳೆದ ಏಪ್ರಿಲ್‌/ ಮೇನಲ್ಲಿ ನಡೆದ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ  ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳು ಆ.12ರಿಂದ ಆರಂಭವಾಗಿತ್ತು. ರಾಜ್ಯಾದ್ಯಂತ ಒಟ್ಟು 307 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು,  ಆಗಸ್ಟ್ 25ರವರೆಗೆ  ಪರೀಕ್ಷೆ ಸೂಸೂತ್ರವಾಗಿ ನಡೆದಿತ್ತು. ಅನುತ್ತೀರ್ಣರಾದ, ಇತರೆ ವರ್ಷಗಳ ಪುನರಾವರ್ತಿತ ಹಾಗೂ ಖಾಸಗಿ ಅಭ್ಯರ್ಥಿಗಳು ಸೇರಿ ಒಟ್ಟು 1,85,449 ವಿದ್ಯಾರ್ಥಿಗಳು  ಪೂರಕ ಪರೀಕ್ಷೆಗೆ ಹೆಸರು ನೋಂದಾವಣೆ ಮಾಡಿಕೊಂಡಿದ್ದರು. ಪರೀಕ್ಷಾ ಕಾರ್ಯಕ್ಕೆ ಪ್ರತಿ ಕೇಂದ್ರಕ್ಕೆ ಒಬ್ಬ ಜಂಟಿ ಮುಖ್ಯಸ್ಥ, ಸಿಟ್ಟಿಂಗ್‌, ಸಿಟ್ಟಿಂಗ್‌ ಸ್ಕ್ವಾಡ್‌, 64 ಸಂಚಾರಿ ಸ್ಕ್ವಾಡ್‌ ಸೇರಿದಂತೆ ಒಟ್ಟು 678 ಸಿಬ್ಬಂದಿ ನಿಯೋಜಿಸಲಾಗಿತ್ತು. ಈ ಮೂಲಕ ತುಂಬಾ ಭದ್ರತೆಯಿಂದ ಪರೀಕ್ಷೆ ನಡೆಸಲಾಗಿತ್ತು. ಫಲಿತಾಂಶಗಳನ್ನು ಪರಿಶೀಲಿಸಲು, ವಿದ್ಯಾರ್ಥಿಗಳು ಈ ಕೆಳಗಿನ ಹಂತವನ್ನು ಅನುಸರಿಸಿ.

  • ಇಲಾಖೆಯ ಅಧಿಕೃತ ವೆಬ್‌ತಾಣ karresults.nic.in ಗೆ ಭೇಟಿ ನೀಡಿ.
  • ಸ್ಕ್ರೀನ್‌ ಮೇಲೆ ರಿಸಲ್ಟ್‌ ಲಿಂಕ್‌ ತೆರೆದ ಬಳಿಕ ಅದರ ಮೇಲೆ ಕ್ಲಿಕ್ಕಿಸಿ
  • ಬಳಿಕ ಲಾಗಿನ್‌ ಕ್ರೆಡೆನ್ಶಿಯಲ್ಸ್‌ ಗೆ ವಿದ್ಯಾರ್ಥಿಗಳು ತಮ್ಮ ರೋಲ್ ನಂಬರ್‌ ಅನ್ನು ಬಳಸಿ
  • ಸ್ಕ್ರೀನ್‌ ಮೇಲೆ ನಿಮ್ಮ ರಿಸಲ್ಟ್‌ ಕಾಣಿಸಿಕೊಳ್ಳಲಿದೆ.
  • ರಿಸಲ್ಟ್‌ ಚೆಕ್‌ ಮಾಡಿ ಮತ್ತು ಪೇಜ್‌ ಅನ್ನು ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳಿ 

 

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶವನ್ನು ಸೆಪ್ಟೆಂಬರ್ 12ರಂದು ಪ್ರಕಟಿಸಲಾಗುತ್ತದೆ.

ಬೆಳಗ್ಗೆ 11 ಗಂಟೆ ನಂತರ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಾಗಲಿದೆ.https://t.co/KfXLW0iMAQ

— B.C Nagesh (@BCNagesh_bjp)

Tap to resize

Latest Videos

51 ಅನಧಿಕೃತ ಖಾಸಗಿ ಶಾಲೆಗಳು?
ರಾಜ್ಯದಲ್ಲಿ ಅನುಮತಿಯೇ ಇಲ್ಲದೆ ನಡೆಯುತ್ತಿರುವ ಅನಧಿಕೃತ ಖಾಸಗಿ ಶಾಲೆಗಳ ಪತ್ತೆ ಕಾರ್ಯವನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ನಡೆಸುತ್ತಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಅಧಿಕಾರಿಗಳು ನಡೆಸಿದ ಪರಿಶೀಲನೆಯಲ್ಲಿ ಇಂತಹ 51 ಶಾಲೆಗಳನ್ನು ಪತ್ತೆ ಮಾಡಿ ನೋಟಿಸ್‌ ನೀಡಿದ್ದಾರೆ.

ನೋಟಿಸ್‌ಗೆ ಈ ಶಾಲೆಗಳು ನೀಡುವ ಉತ್ತರವನ್ನು ಆಧರಿಸಿ ಆ ಶಾಲೆಗಳನ್ನು ಬಂದ್‌ ಮಾಡಬೇಕಾ ಮುಂದುವರೆಸಬೇಕಾ ಎಂಬ ನಿರ್ಧಾರವನ್ನು ಶಿಕ್ಷಣ ಇಲಾಖೆ ಕೈಗೊಳ್ಳಲಿದೆ. 51 ಶಾಲೆಗಳ ಪೈಕಿ ಬೆಂಗಳೂರು ದಕ್ಷಿಣ ವಲಯದಲ್ಲೇ ಅತಿ ಹೆಚ್ಚು 38 ಶಾಲೆಗಳನ್ನು ಪತ್ತೆ ಹೆಚ್ಚಲಾಗಿದೆ. ಉಳಿದಂತೆ ಬೆಂಗಳೂರು ಉತ್ತರ ವಲಯದಲ್ಲಿ 11 ಶಾಲೆಗಳು ಮತ್ತು ಆನೇಕಲ್‌ ತಾಲೂಕಿನಲ್ಲಿ ಎರಡು ಶಾಲೆಗಳು ಶಿಕ್ಷಣ ಇಲಾಖೆ ಕಾಯ್ದೆಯ ನಿಯಮ ಉಲ್ಲಂಘಿಸಿ ನಡೆಯುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಈ ಶಾಲೆಗಳಿಗೆ ಅಧಿಕಾರಿಗಳು ನೋಟಿಸ್‌ ಜಾರಿಗೊಳಿಸಿದ್ದಾರೆ. ಈ ಎಲ್ಲ ಶಾಲೆಗಳ ಪಟ್ಟಿ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದೆ.

ಮಕ್ಕಳ ಆತಂಕಕ್ಕೆ ಪರೀಕ್ಷೆ, ಫಲಿತಾಂಶ ಕಾರಣ: ಎನ್‌ಸಿಇಆರ್‌ಟಿ ಅಧ್ಯಯನ

ಖಾಸಗಿ ಶಾಲೆಗಳು ಸರ್ಕಾರದ ಕಾಯ್ದೆ, ಕಾನೂನುಗಳನ್ನು ಪಾಲಿಸುತ್ತಿಲ್ಲ. ವಿವಿಧ ಜಿಲ್ಲೆಗಳಲ್ಲಿ ಅನೇಕ ಶಾಲೆಗಳು ಅನಧಿಕೃತವಾಗಿ ನಡೆಯುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ಆರ್‌.ವಿಶಾಲ್‌ ಅವರು ಇಲಾಖೆಯ ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಮ್ಮ ವ್ಯಾಪ್ತಿಯ ಎಲ್ಲ ಶಾಲೆಗಳ ದಾಖಲೆಗಳನ್ನು ಪರಿಶೀಲಿಸಿ ಅನಧಿಕೃತವಾಗಿ ಶಾಲೆಗಳು ನಡೆಯುತ್ತಿರುವುದು ಕಂಡುಬಂದರೆ ಅವುಗಳ ಪಟ್ಟಿಮಾಡಿ ಮಾಹಿತಿ ಕಳುಹಿಸುವಂತೆ ಹಾಗೂ ಕಾನೂನಾತ್ಮಕವಾಗಿ ನೋಟಿಸ್‌ ನೀಡಿ ಆ ಶಾಲೆಗಳನ್ನು ಬಂದ್‌ ಮಾಡಲು ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದರು.

MYSURU; ಸಹಾಯಕ ಪ್ರಾಧ್ಯಾಪಕರ ಹುದ್ದೆ ಹೆಚ್ಚಳ ಆಗ್ರಹಿಸಿ ಪತ್ರ ಚಳುವಳಿ

ಇದರ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ದಕ್ಷಿಣ ವಲಯ ಡಿಡಿಪಿಐ ಬೈಲಾಂಜನಪ್ಪ ಮತ್ತು ಉತ್ತರ ವಲಯದ ಡಿಡಿಪಿಐ ಲೋಹಿತೇಶ್ವರ ರೆಡ್ಡಿ ತಮ್ಮ ವ್ಯಾಪ್ತಿಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಒಟ್ಟಾರೆ 51 ಶಾಲೆಗಳನ್ನು ಪತ್ತೆ ಹೆಚ್ಚಿ ನೋಟಿಸ್‌ ನೀಡಿದ್ದಾರೆ. ಕೆಲ ಶಾಲೆಗಳನ್ನು ಈಗಾಗಲೇ ಬಂದ್‌ ಮಾಡಿದ್ದಾರೆ. ಉಳಿದ ಶಾಲೆಗಳು ನೀಡುವ ಉತ್ತರದ ಮೇಲೆ ಅವುಗಳ ಭವಿಷ್ಯ ನಿರ್ಧಾರವಾಗಲಿದೆ ಎಂದು ಇಲಾಖಾ ಅಧಿಕಾರಿಗಳು ಹೇಳಿದ್ದಾರೆ.

click me!