ಇಂದು ಬೆಳಗ್ಗೆ 11.30ಕ್ಕೆ ಪಿಯುಸಿ ಫಲಿತಾಂಶ: ಮೊಬೈಲಲ್ಲೇ ರವಾನೆ

By Kannadaprabha News  |  First Published Jun 18, 2022, 5:50 AM IST

*  ವಿದ್ಯಾರ್ಥಿಗಳಿಗೆ ಅಗ್ನಿ ಪರೀಕ್ಷೆ
*  6.83 ಲಕ್ಷ ವಿದ್ಯಾರ್ಥಿಗಳ ಹಣೆಬರಹ ನಿರ್ಧಾರ
*  ವಿದ್ಯಾರ್ಥಿಗಳು ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದಾಗಿದೆ 
 


ಬೆಂಗಳೂರು(ಜೂ.18):  ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶವನ್ನು ಜೂ.18ರಂದು (ಶನಿವಾರ) ಬೆಳಿಗ್ಗೆ 11.30ಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು ಪ್ರಕಟಿಸಲಿದ್ದು ಬಳಿಕ ವಿದ್ಯಾರ್ಥಿಗಳು ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದಾಗಿದೆ.

ಮಲ್ಲೇಶ್ವರದಲ್ಲಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಶನಿವಾರ ಬೆಳಿಗ್ಗೆ 11.30ಕ್ಕೆ ಸಚಿವ ನಾಗೇಶ್‌ ಅವರು ಪತ್ರಿಕಾಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಲಿದ್ದು ಬಳಿಕ ಮಂಡಳಿಯ ವೆಬ್‌ಸೈಟ್‌ www.karresults.nic.in ಸ್‌ಎಸ್‌ಎಲ್‌ಸಿ ಫಲಿತಾಂಶದ ಮಾದರಿಯಲ್ಲೇ ಪಿಯುಸಿ ಫಲಿತಾಂಶವನ್ನೂ ವಿದ್ಯಾರ್ಥಿಗಳ ನೊಂದಾಯಿತ ಮೊಬೈಲ್‌ ಸಂಖ್ಯೆಗೆ ಕಳುಹಿಸಲಾಗುವುದು.

Tap to resize

Latest Videos

ಪಿಯುಸಿ ಬಳಿಕ ಬಿ ಫಾರ್ಮಾ ಕೋರ್ಸ್, ಉದ್ಯೋಗ ವಿಫುಲ

ವಿದ್ಯಾರ್ಥಿಗಳು ಹಿಜಾಬ್‌ ಧರಿಸದೇ ಆಡಳಿತ ಮಂಡಳಿಗಳು ನಿಗದಿ ಮಾಡಿರುವ ಸಮವಸ್ತ್ರ ಧರಿಸಿ ಪರೀಕ್ಷೆಗೆ ಹಾಜರಾಗುವಂತೆ ಹೈಕೋರ್ಚ್‌ ನೀಡಿದ್ದ ಆದೇಶದ ನಡುವೆಯೇ ಏ.22 ರಿಂದ ಮೇ 18ರ ವರೆಗೆ ಪರೀಕ್ಷೆಗಳು ನಡೆದಿದ್ದವು. 1076 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು 6,83,563 ವಿದ್ಯಾರ್ಥಿಗಳು ಹಾಜರಾಗಿದ್ದರು. ಸರಳವಾಗಿ ಪ್ರಶ್ನೆ ಪತ್ರಿಕೆ ನಿಡಿದ್ದರಿಂದ ಒಟ್ಟಾರೆ ಉತ್ತಮ ಫಲಿತಾಂಶ ಹೊರಬರುವ ನಿರೀಕ್ಷೆ ಇದೆ.
 

click me!