ದ್ವಿತೀಯ ಪಿಯುಸಿ ಬೆನ್ನಲೇ ಮತ್ತೊಂದು ಪರೀಕ್ಷೆ ಮುಂದೂಡಿಕೆ

By Suvarna News  |  First Published May 4, 2021, 4:15 PM IST

ಕೊರೋನಾ ಎರಡನೇ ಅಲೆ ಹೆಚ್ಚಳವಾಗುತ್ತಿರುವುದರಿಂದ ಮತ್ತೊಂದು ಪರೀಕ್ಷೆಯನ್ನು ಮುಂದೂಡಲಾಗಿದೆ. ಈ ಬಗ್ಗೆ ಕೇಂದ್ರ ಶಿಕ್ಷಣ ಸಚಿವ ಮಾಹಿತಿ ನೀಡಿದ್ದಾರೆ.


ನವದೆಹಲಿ, (ಮೇ.04): ದೇಶದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಇಇ ಮೇನ್ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಈ ಬಗ್ಗೆ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೊಖ್ರಿಯಾಲ್ ನಿಶಾಂಕ್ ಅವರು ಇಂದು(ಮಂಗಳವಾರ) ಘೋಷಣೆ ಮಾಡಿದರು. ಹೆಚ್ಚಿನ ಮಾಹಿತಿಗಾಗಿ ಎನ್ ಟಿಎಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವಂತೆ ವಿದ್ಯಾರ್ಥಿಗಳಿಗೆ ಪೊಖ್ರಿಯಾಲ್ ಮನವಿ ಮಾಡಿದ್ದಾರೆ.

Latest Videos

undefined

ದ್ವಿತೀಯ ಪಿಯುಸಿ ಪರೀಕ್ಷೆ ಮುಂದೂಡಿಕೆ: ಇನ್ನಷ್ಟು ಮಾಹಿತಿ ಕೊಟ್ಟ ಸುರೇಶ್ ಕುಮಾರ್

ಪರಿಷ್ಕೃತ ದಿನಾಂಕಗಳು ಪರೀಕ್ಷೆಗೆ ಕನಿಷ್ಠ 15 ದಿನಗಳ ಮೊದಲು ಇರುತ್ತವೆ ಎಂದು ನೋಷನ್ ಟೆಸ್ಟಿಂಗ್ ಏಜೆನ್ಸಿ ಹೇಳಿದೆ. ಮೊದಲ ಎರಡು ಸೆಷನ್‌ಗಳು ಈಗಾಗಲೇ ಫೆಬ್ರವರಿ ಮತ್ತು ಮಾರ್ಚ್ ನಲ್ಲಿ ಪೂರ್ಣಗೊಂಡಿವೆ. ಪರೀಕ್ಷೆಗಳಿಗೆ ಸಂಬಂಧಿಸಿದ ಇತ್ತೀಚಿನ ನವೀಕರಣಗಳಿಗಾಗಿ ಅಧಿಕೃತ ಎನ್ ಟಿಎ ವೆಬ್ ಸೈಟ್ (www.nta.ac.in) ಮತ್ತು (https://jeemain.nta.nic.in/) ಗೆ ಭೇಟಿ ನೀಡುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.

ಈ ಹಿಂದೆ, ದೇಶಾದ್ಯಂತ ಕೋವಿಡ್-19 ಪ್ರಕರಣಗಳ ಹೆಚ್ಚಳದಿಂದಾಗಿ ಜೆಇಇ ಪರೀಕ್ಷೆಗಳನ್ನು ಮುಂದೂಡಲಾಗಿತ್ತು.  ಇನ್ನು ಕರ್ನಾಟಕದಲ್ಲೂ ಸಹ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.

click me!