ಪರೀಕ್ಷೆ ಮುಂದೂಡಿಕೆ: ಅಧಿಕೃತವಾಗಿ ಘೋಷಿಸಿದ ಶಿಕ್ಷಣ ಸಚಿವ

By Suvarna News  |  First Published Apr 18, 2021, 2:24 PM IST

ದೇಶಾದ್ಯಂತ ಕೊರೋನ ಸೋಂಕು ಮತ್ತೆ ಮಿತಿಮೀರುತ್ತಿದ್ದು ಶಿಕ್ಷಣ ವ್ಯವಸ್ಥೆಯ ಮೇಲೆ ಪ್ರಭಾವ ಬೀರುತ್ತಿದೆ. ಮತ್ತೆ ಪರೀಕ್ಷೆಗಳು ಮುಂದೂಡಲ್ಪಡುತ್ತಿದ್ದು, ಇದೀಗ ಈ ಸಾಲಿಗೆ ಜಂಟಿ ಪ್ರವೇಶ ಮುಖ್ಯ ಪರೀಕ್ಷೆ (JEE) ಯೂ ಸೇರಿದೆ.


ನವದೆಹಲಿ, (ಏ.18): ಜಂಟಿ ಪ್ರವೇಶ ಮುಖ್ಯ ಪರೀಕ್ಷೆ (JEE) ಮುಂದೂಡಲಾಗಿದೆ. ಪರೀಕ್ಷೆ ಮುಂದೂಡಲ್ಪಟ್ಟಿದ್ದನ್ನು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಕೂಡ ದೃಢಪಡಿಸಿದ್ದಾರೆ.

 ಸದ್ಯದ ಕೊವಿಡ್​-19 ಸ್ಥಿತಿಯಲ್ಲಿ ಜೆಇಇ ಮುಖ್ಯ ಪರೀಕ್ಷೆಯನ್ನು ಮುಂದೂಡುವುದೇ ಒಳಿತು ಎಂದು ನಾನೂ ಸಹ ಎನ್​ಟಿಎಗೆ ಸಲಹೆ ನೀಡಿದ್ದೆ. ವಿದ್ಯಾರ್ಥಿಗಳ ಶಿಕ್ಷಣದೊಂದಿಗೆ ಅವರ ಸುರಕ್ಷತೆ ನನ್ನ ಮತ್ತು ಶಿಕ್ಷಣ ಸಚಿವಾಲಯದ ಮೊದಲ ಆದ್ಯತೆ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.

Latest Videos

undefined

1 ರಿಂದ 9 ನೇ ತರಗತಿ ಪರೀಕ್ಷೆ ಬಗ್ಗೆ ಸ್ಪಷ್ಟನೆ ಕೊಟ್ಟ ಸಚಿವ ಸುರೇಶ್ ಕುಮಾರ್

 ಏಪ್ರಿಲ್​ 27ರಿಂದ 30ರವರೆಗೆ ನಡೆಯಲಿದ್ದ JEE ಮುಖ್ಯ ಪರೀಕ್ಷೆ(2021)ಯನ್ನು ರಾಷ್ಟ್ರೀಯ ಪರೀಕ್ಷಾ ಮಂಡಳಿ (NTA) ಮುಂದೂಡಿದೆ. ಸದ್ಯಕ್ಕೇನೂ ಪರೀಕ್ಷೆಯ ಹೊಸ ದಿನಾಂಕವನ್ನು ಘೋಷಣೆ ಮಾಡಿಲ್ಲ.

ದೇಶದಲ್ಲಿ ಸದ್ಯದಲ್ಲಿರುವ ಕೊವಿಡ್​ 19 ಪರಿಸ್ಥಿತಿಯನ್ನು ಅವಲೋಕಿಸಲಾಗಿದೆ. ಪರೀಕ್ಷಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಏಪ್ರಿಲ್​ ಸೆಷನ್​​ನಲ್ಲಿ ನಡೆಯಬೇಕಿದ್ದ ಜೆಇಇ ಮುಖ್ಯ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಎನ್​ಟಿಎ ಹೇಳಿಕೆ ಬಿಡುಗಡೆ ಮಾಡಿದೆ. ಇನ್ನು ಪರೀಕ್ಷೆ ನಡೆಸುವ 15 ದಿನಗಳ ಮೊದಲು ದಿನಾಂಕ ಘೋಷಿಸಲಾಗುವುದು ಎಂದು ತಿಳಿಸಿದೆ.

ಇನ್ನು ಜೆಇಇ ಮುಖ್ಯಪರೀಕ್ಷೆಯ ಫೆಬ್ರವರಿ ಮತ್ತು ಮಾರ್ಚ್​ ಸೆಷನ್​ಗಳು ಮುಕ್ತಾಯಗೊಂಡಿದ್ದು, ಏಪ್ರಿಲ್​ದು 27ರಿಂದ ಪ್ರಾರಂಭವಾಗಲಿತ್ತು. ಆದರೆ ಅದನ್ನು ಮುಂದೂಡಬೇಕು.

ಕೊರೋನಾ ಸಮಯದಲ್ಲಿ ಪರೀಕ್ಷೆ ಬರೆಯುವುದು ಸುರಕ್ಷಿತವಲ್ಲ ಎಂದು ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳು ಕೂಡ ಬೇಡಿಕೆ ಮುಂದಿಟ್ಟಿದ್ದರು. ಈ ಬಗ್ಗೆ ಆಕ್ರೋಶವನ್ನೂ ಹೊರಹಾಕಿದ್ದರು. 

click me!