ಶಾಲಾ ಆವರಣದಲ್ಲಿ ಸ್ನಾನಗೃಹ, ಶೌಚಾಲಯ ನಿರ್ಮಾಣಕ್ಕೆ ಚಿಂತನೆ: ಚಾಮರಾಜನಗರ ನಗರಸಭೆ ನಡೆಗೆ ಭಾರೀ ವಿರೋಧ..!

By Girish Goudar  |  First Published Nov 29, 2023, 11:30 PM IST

ಸರ್ಕಾರಿ ಶಾಲೆ ಉಳಿಸಿ ಸರ್ಕಾರಿ ಶಾಲೆ ಬೆಳೆಸಿ ಅನ್ನೋ ಮಾತು ಬರಿ ಬಾಯ್ಮಾತಿಗೆ ಮಾತ್ರ ಸೀಮಿತವಾಗಿದೆ. ಈಗಾಗ್ಲೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಶೂನ್ಯ ದಾಖಲಾತಿ ಹಿನ್ನಲೆ 14 ಶಾಲೆಗಳಿಗೆ ಬೀಗ ಹಾಕಲಾಗಿದೆ, ಸರ್ಕಾರಿ ಶಾಲೆಗಳು ಅಳಿವಿನ ಅಂಚಿಗೆ ಬಂದು ತಲುಪಿವೆ. ಇಂತಹ ಸ್ಥಿತಿ ಇರುವಾಗ್ಲೆ ಚಾಮರಾಜನಗರ ನಗರಸಭೆ ದೊಡ್ಡ ಯಡವಟ್ಟಿಗೆ ಮುಂದಾಗಿದೆ. 118 ವರ್ಷ ಇತಿಹಾಸವುಳ್ಳ ಸರ್ಕಾರಿ ಶಾಲೆಯನ್ನ ತೆರವುಗೊಳಿಸಿ ಆ ಸ್ಥಳದಲ್ಲಿ ಸ್ನಾನ ಗೃಹ ಹಾಗೂ ಶೌಚಾಲಯ ನಿರ್ಮಾಣ ಮಾಡಲು ಮುಂದಾಗಿದೆ. 


ವರದಿ- ಪುಟ್ಟರಾಜು. ಆರ್. ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ(ನ.29):  ಅದು 118 ವರ್ಷಗಳ ಇತಿಹಾಸವುಳ್ಳ ಪುರಾತನ ಸರ್ಕಾರಿ ಶಾಲೆ. ಆ ಶಾಲೆಗೆ ಮೈಸೂರಿನ ದಿವಾನರಾದ ಸರ್ ಮಿರ್ಜಾ ಇಸ್ಮಾಯಿಲ್ ಕೂಡ ಭೇಟಿ ಕೊಟ್ಟು ಪ್ರಸಂಶೆ ವ್ಯಕ್ತಪಡಿಸಿದ್ರು. ಅಂತಹ ಈ ಶಾಲೆಯ ಆವರಣದಲ್ಲಿ ಸಾರ್ವಜನಿಕ ಸ್ನಾನಗೃಹ, ಶೌಚಾಲಯ ನಿರ್ಮಾಣಕ್ಕೆ ನಗರಸಭೆ ಸ್ಥಳ ಗುರುತಿಸಿದೆ. ಇದೀಗ ನಗರಸಭೆಯ ನಡೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ..

Tap to resize

Latest Videos

undefined

ಸರ್ಕಾರಿ ಶಾಲೆ ಉಳಿಸಿ ಸರ್ಕಾರಿ ಶಾಲೆ ಬೆಳೆಸಿ ಅನ್ನೋ ಮಾತು ಬರಿ ಬಾಯ್ಮಾತಿಗೆ ಮಾತ್ರ ಸೀಮಿತವಾಗಿದೆ. ಈಗಾಗ್ಲೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಶೂನ್ಯ ದಾಖಲಾತಿ ಹಿನ್ನಲೆ 14 ಶಾಲೆಗಳಿಗೆ ಬೀಗ ಹಾಕಲಾಗಿದೆ, ಸರ್ಕಾರಿ ಶಾಲೆಗಳು ಅಳಿವಿನ ಅಂಚಿಗೆ ಬಂದು ತಲುಪಿವೆ. ಇಂತಹ ಸ್ಥಿತಿ ಇರುವಾಗ್ಲೆ ಚಾಮರಾಜನಗರ ನಗರಸಭೆ ದೊಡ್ಡ ಯಡವಟ್ಟಿಗೆ ಮುಂದಾಗಿದೆ. 118 ವರ್ಷ ಇತಿಹಾಸವುಳ್ಳ ಸರ್ಕಾರಿ ಶಾಲೆಯನ್ನ ತೆರವುಗೊಳಿಸಿ ಆ ಸ್ಥಳದಲ್ಲಿ ಸ್ನಾನ ಗೃಹ ಹಾಗೂ ಶೌಚಾಲಯ ನಿರ್ಮಾಣ ಮಾಡಲು ಮುಂದಾಗಿದೆ. ಈ ವಿಚಾರ ಈಗ ಚಾಮರಾಜನಗರದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಸಾಹಿತಿಗಳು ಹಾಗೂ ಚಿಂತಕರು ಜಿಲ್ಲಾಡಳಿತಕ್ಕೆ ಪತ್ರ ಅಭಿಯಾನ ಮೂಲಕ ಎಚ್ಚರಿಕೆಯನ್ನ ನೀಡಿದ್ದಾರೆ.ಈ ಶಾಲೆಯ ಇತಿಹಾಸ ನೋಡುವುದಾದ್ರೆ ಮೈಸೂರು ಸಂಸ್ಥಾನದ ಸರ್ ಮಿರ್ಜಾ ಇಸ್ಮಾಯಿಲ್ ಕೂಡ ಈ ಶಾಲೆಗೆ ಭೇಟಿ ನೀಡಿದ್ರು. ಅನೇಕ ಸಾಹಿತಿಗಳು ಚಿಂತಕರು ಈ ಪೇಟೆ ಶಾಲೆಯಲ್ಲಿ ಕಲಿತು ಸಮಾಜಕ್ಕೆ ಕೊಡುಗೆಯನ್ನ ನೀಡಿದ್ದಾರೆ. ಈ ಶಾಲೆಯಲ್ಲಿ ವ್ಯಾಸಾಂಗ ಮಾಡಿದವರು ಉನ್ನತ ಸ್ಥಾನಮಾನವನ್ನ ಅಲಂಕರಿಸಿದ ಉದಾಹರಣೆಗಳು ಸಹ ಇವೆ ಇಂತಹ ಪುರಾತನ ಹಾಗೂ ಇತಿಹಾಸವುಳ್ಳ ಶಾಲೆಯನ್ನ ಕೆಡವಿ ಶೌಚಾಲಯ ಹಾಗೂ ಸ್ನಾನ ಗೃಹ ನಿರ್ಮಾಣ ಮಾಡುವುದು ಎಷ್ಟು ಸರಿ ಎನ್ನುವುದು ಸಾಹಿತಿ ಜಿ.ಎಸ್ ಶಿವರುದ್ರಪ್ಪ ಪುತ್ರ ಜಯದೇವ್ ಸಹ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಕೌಟುಂಬಿಕ ಕಲಹ: ಮದುವೆಯಾದ 6 ತಿಂಗಳಲ್ಲೇ ಗೃಹಿಣಿ ನೇಣು ಬಿಗಿದು ಆತ್ಮಹತ್ಯೆ!

ಇನ್ನೂ ಹೈ ಕೋರ್ಟ್ ಹಾಗೂ ಜಿಲ್ಲಾಡಳಿತ ನಿರ್ದೇಶನದ ಮೇರೆಗೆ ಚಾಮರಾಜನಗರ ನಗರ ಪ್ರದೇಶವಾದ ಜೋಡಿ ರಸ್ತೆಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕೆಂಬ ಸೂಚನೆಯಿದೆ. ಆ ಹಿನ್ನಲೆ ಮೂರು ಸ್ಥಳಗಳನ್ನು ಗುರುತಿಸಲಾಗಿದೆ.ಆದರಲ್ಲಿ ಶಾಲಾ ಆವರಣ ಕೂಡ ಒಂದು,ಪಕ್ಕದಲ್ಲಿ ಆಸ್ಪತ್ರೆಯಿರುವ ಹಿನ್ನಲೆ ಜನರಿಗೆ ಅನುಕೂಲವಾಗಲಿದೆಂದು ಸ್ಥಳ ಪರಿಶೀಲನೆ ನಡೆಸಲಾಗಿದೆ.ಆದ್ರೆ ಸಾರ್ವಜನಿಕರಿಂದ ಈ ನಡೆಗೆ ವಿರೋಧ ವ್ಯಕ್ತವಾದರೆ ಬೇರೊಂದು ಸ್ಥಳದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸ್ತೇವೆ ಅಂತಾರೆ ಅಧಿಕಾರಿಗಳು.

ಒಟ್ನಲ್ಲಿ ಶತಮಾನ ಶಾಲೆಯನ್ನು ಉಳಿಸಿ,ಬೆಳೆಸುವುದು ಪ್ರತಿಯೊಬ್ಬರ ಕೆಲಸ.ಸಾರ್ವಜನಿಕ ಶೌಚಾಲಯ ನಿರ್ಮಿಸಿ ಬೇಲಿಯೇ ಎದ್ದು ಹೊಲ ಮೇಯುವ ಕೆಲಸ ಮಾಡೋದು ಬೇಡ ಅಂತಾ ಅಧಿಕಾರಿಗಳ ನಡೆಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆ.

click me!