ಬೆಳಗಾವಿ ವಿಶ್ವೇಶ್ವರಯ್ಯ ವಿವಿ ಘಟಿಕೋತ್ಸವ, ಡಿಜಿಟಲ್ ಕ್ಷೇತ್ರದಲ್ಲಿ ಭಾರತ ಮುಂಚೂಣಿ ರಾಷ್ಟ್ರ: ಕಾಮಕೋಟಿ

By Girish Goudar  |  First Published Aug 1, 2023, 9:30 PM IST

ವಿದ್ಯಾರ್ಥಿ ಜೀವನದಲ್ಲಿ, ಘಟಿಕೋತ್ಸವ ಸಮಾರಂಭವು  ವಿಶಿಷ್ಟ, ವಿಶೇಷವಾದ ಕ್ಷಣವಾಗಿದೆ. ಪದವೀಧರರಿಗೆ ಇದು ಸಾಧನೆಯ ದಿನವಾಗಿದೆ, ವಿದ್ಯಾರ್ಥಿಗಳ ನಿರಂತರ ಪರಿಶ್ರಮದಿಂದ ಮಾತ್ರ ಈ ಹಂತ ತಲುಪಲು ಸಾಧ್ಯ. ವಿದ್ಯಾರ್ಥಿಗಳು ತಮ್ಮ ಪದವಿ ನಂತರದಲ್ಲಿ ಬರುವ ವೃತ್ತಿಪರ ಸವಾಲುಗಳನ್ನು ಎದುರಿಸಲು ಮಾನಸಿಕವಾಗಿ ಸಜ್ಜಾಗಬೇಕು ಇದರಿಂದ ಯಶಸ್ಸಿನ ಮಾರ್ಗ ಕಂಡುಕೊಳ್ಳಲು ಸಹಕಾರಿಯಾಗಲಿದೆ: ಪ್ರೊ.ವಿ. ಕಾಮಕೋಟಿ 


ಬೆಳಗಾವಿ(ಆ.01):  ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ವಿವಿಧ ಮಹತ್ವದ ಸಾಧನೆಗಳನ್ನು ಮಾಡುವುದರ ಮೂಲಕ ವಿಶ್ವದಲ್ಲಿ ತನ್ನದೇಯಾದ ಛಾಪು ಮೂಡಿಸಿದೆ. ಇತರೆ ದೇಶಗಳಿಗಿಂತ ಭಾರತ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯ ರಾಷ್ಟ್ರವಾಗಿದೆ ಎಂದು ಮದ್ರಾಸ್ಸಿನ ಭಾರತೀಯ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕರಾದ ಪ್ರೊ.ವಿ. ಕಾಮಕೋಟಿ ಅವರು ತಿಳಿಸಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಜ್ಞಾನಸಂಗಮ ಆವರಣದ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಮಂಗಳವಾರ ನಡೆದ ವಿಟಿಯು 23ನೇ ಘಟಿಕೋತ್ಸವದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ, ಘಟಿಕೋತ್ಸವ ಸಮಾರಂಭವು  ವಿಶಿಷ್ಟ, ವಿಶೇಷವಾದ ಕ್ಷಣವಾಗಿದೆ. ಪದವೀಧರರಿಗೆ ಇದು ಸಾಧನೆಯ ದಿನವಾಗಿದೆ, ವಿದ್ಯಾರ್ಥಿಗಳ ನಿರಂತರ ಪರಿಶ್ರಮದಿಂದ ಮಾತ್ರ ಈ ಹಂತ ತಲುಪಲು ಸಾಧ್ಯ. ವಿದ್ಯಾರ್ಥಿಗಳು ತಮ್ಮ ಪದವಿ ನಂತರದಲ್ಲಿ ಬರುವ ವೃತ್ತಿಪರ ಸವಾಲುಗಳನ್ನು ಎದುರಿಸಲು ಮಾನಸಿಕವಾಗಿ ಸಜ್ಜಾಗಬೇಕು ಇದರಿಂದ ಯಶಸ್ಸಿನ ಮಾರ್ಗ ಕಂಡುಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು.

Tap to resize

Latest Videos

ನಮ್ಮ ಗುರುಕುಲ ಪದ್ಧತಿ ವಿಶ್ವಕ್ಕೇ ಮಾದರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

ಡಿಜಿಟಲ್ ಯುಗದಲ್ಲಿ ಭಾರತ:

ಈಗಾಗಲೇ ಭಾರತ ಡಿಜಿಟಲ್ ಯುಗಕ್ಕೆ ಬಂದು ನಿಂತಿದೆ. ತಂತ್ರಜ್ಞಾನ ಬಳಕೆಯಲ್ಲಿ ಈಗ ನಾವೆಲ್ಲರೂ ಒಂದು ಭಾಗವಾಗಿದ್ದೇವೆ, ಉದಾಹರಣೆಗೆ  ಯುಪಿಐ ಪೇಮೆಂಟ್ ಸಿಸ್ಟಮ್, ಆಧಾರ್ ಅಳವಡಿಕೆ, ಆರೋಗ್ಯ ಸೇತು, ಇವೆಲ್ಲವೂ ಸಾರ್ವಜನಿಕರಿಗೆ, ಸಮಾಜದ ದುರ್ಬಲ  ಅಂಚಿನಲ್ಲಿರುವ ವರ್ಗಗಳಿಗೆ ಸುಲಭ ಮಾರ್ಗವಾಗಿ ಅನುವು ಮಾಡಿಕೊಟ್ಟಿವೆ. 

ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸನ್ನು ನನಸು ಮಾಡಿಕೊಳ್ಳಲು ಅವಕಾಶಗಳ ಸದ್ಬಳಕೆ ಮಾಡಿಕೊಳ್ಳಬೇಕು. ಪದವಿಯ ನಂತರ ವಿದ್ಯಾರ್ಥಿಗಳು ತಮಗೆ ಸಿಕ್ಕಿರುವ ಅವಕಾಶಗಳ ಸರಿಯಾದ ರೀತಿಯಲ್ಲಿ ಬಳಸಿಕೊಂಡು ವೃತ್ತಿಪರ ಬೆಳವಣಿಗೆ ಹೊಂದಬೇಕು. ಉದ್ಯೋಗ ಹುಡುಕುವ ಬದಲಿಗೆ ಉದ್ಯೋಗ ಸೃಷ್ಟಿಸುವ  ಮೂಲಕ ಭವಿಷ್ಯದಲ್ಲಿ ದೇಶಕ್ಕೆ ನೀವೆಲ್ಲರೂ ಕೊಡುಗೆ ನೀಡುವ ವ್ಯಕ್ತಿಗಳಾಗಬೇಕು ಎಂದು ಭಾರತೀಯ ತಂತ್ರಜ್ಞಾನ ಸಂಸ್ಥೆಯ ಮದ್ರಾಸ್, ನಿರ್ದೇಶಕರಾದ ಪ್ರೊ.ವಿ. ಕಾಮಕೋಟಿ ಅವರು ತಿಳಿಸಿದರು. 

ಭಾರತ ವಿಶ್ವಗುರು ಸ್ಥಾನ ಅಲಂಕರಿಸಲಿದೆ:

ದೇಶದ ತಾಂತ್ರಿಕ ವಿಶ್ವ ವಿದ್ಯಾಲಯಗಳಲ್ಲಿ ಸರ್.ಎಂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸಹ ಒಂದು ದೊಡ್ಡ ವಿಶ್ವ ವಿದ್ಯಾಲಯ. ಪದವಿ ನಂತರ ವಿದ್ಯಾರ್ಥಿಗಳು ಉದ್ಯೋಗ ಸೃಷ್ಟಿಸುವ ಗುರಿ ಹೊಂದಬೇಕು ಎಂದು ಕರ್ನಾಟಕ ರಾಜ್ಯದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ತಿಳಿಸಿದರು.

ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಈಗಾಗಲೇ ಸಾಕಷ್ಟು ವಿಕಸನ ಹೊಂದಿದೆ. ಸದ್ಯ ದೇಶದ ಆರ್ಥಿಕತೆ ವಿಶ್ವದಲ್ಲಿ 5ನೇ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ಆರ್ಥಿಕತೆಯಲ್ಲಿ ದೇಶ 3 ಸ್ಥಾನಕ್ಕೆ ಏರಲಿದೆ ಈ ನಿಟ್ಟಿನಲ್ಲಿ ಭವಿಷ್ಯದ ಪ್ರಜೆಗಳ ಪಾಲುದಾರಿಕೆ ಅವಶ್ಯವಾಗಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಹೊಂದುವ ಮೂಲಕ ಭವಿಷ್ಯದಲ್ಲಿ  ಭಾರತ ವಿಶ್ವಗುರು ಸ್ಥಾನ ಅಲಂಕರಿಸಲಿದೆ. 100 ವರ್ಷಗಳ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಯಲ್ಲಿ ಖಚಿತವಾಗಿ ಭಾರತ ವಿಶ್ವಗುರು ಸ್ಥಾನದಲ್ಲಿರಲಿದೆ ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಭರವಸೆ ವ್ಯಕ್ತಡಿಸಿದರು.

ಉತ್ತಮ ಭವಿಷ್ಯಕ್ಕೆ ನಿರಂತರ ಶ್ರಮ ವಹಿಸಿ:

ಸರ್.ಎಂ. ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ 212 ಕಾಲೇಜುಗಳಲ್ಲಿ ಈಗಾಗಲೇ ಸಾಕಷ್ಟು ವಿದ್ಯಾರ್ಥಿಗಳು ಪದವಿ ಪಡೆದುಕೊಂಡಿದ್ದಾರೆ. ಪದವಿಯ ಬಳಿಕ ನಿರಂತರ ಶ್ರಮ ವಹಿಸಿ ವಿದ್ಯಾರ್ಥಿಗಳು ಉತ್ತಮ ಜೀವನ ರೂಪಿಸಿಕೊಳ್ಳಬೇಕು.

ವಿವಿಧ ಕ್ಷೇತ್ರಗಳಲ್ಲಿ ಪರಿಣಿತರಾಗಿ, ಹೆಚ್ಚಿನ ಜ್ಞಾನ ಸಂಪಾದಿಸಬೇಕು. ಪದವಿ ಪಡೆದು ವೃತ್ತಿ ಬದುಕು ಪ್ರಾರಂಭಿಸುವ ವಿದ್ಯಾರ್ಥಿಗಳು ಶಿಸ್ತು, ನಂಬಿಕೆ ಭರವಸೆಯಿಂದ ಮುನ್ನುಗ್ಗಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. 

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್ ಕುಲಸಚಿವರಾದ ಬಿ.ಇ ರಂಗಸ್ವಾಮಿ, ಮೌಲ್ಯ ಮಾಪನ ಕುಲಸಚಿವರಾದ ಟಿ.ಎನ್ ಶ್ರೀನಿವಾಸ, ಹಣಕಾಸು ಅಧಿಕಾರಿ ಎಂ. ಎ ಸ್ವಪ್ನ, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪಾಲಕರು ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು.

ಗೌರವ ಡಾಕ್ಟರೇಟ್ ಪದವಿ ಪ್ರದಾನ: 

ಶ್ರೀ ಆದಚುಂಚನಗಿರಿ ಮಹಾಸಂಸ್ಥಾನದ ಮಠದ ಶ್ರೀಗಳು ಹಾಗೂ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ  ಮಹಾಸ್ವಾಮಿಗಳಿಗೆ ಗೌರವ ಡಾಕ್ಟರೇಟ್ ಪದವಿ ಪ್ರಕಟಿಸಲಾಯಿತು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಎ.ವಿ.ಎಸ್. ಮೂರ್ತಿ ಹಾಗೂ ಮೈಸೂರು ಮೆಕ್ಯಾನಿಕ್ ಟೈಲ್ ಕಂಪನಿ ಲಿ. ಬೆಂಗಳೂರು ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು, ಬೆಂಗಳೂರಿನ ಹೆಗ್ಗುಂಜಿ ರಾಜೀವ್ ಶೆಟ್ಟಿ ಚಾರಿಟೇಬಲ್ ಸೊಸೈಟಿಯ ಅಧ್ಯಕ್ಷರಾದ ಎಚ್.ಎಸ್.ಶೆಟ್ಟಿ ಅವರಿಗೆ "ಡಾಕ್ಟರ್ ಆಫ್ ಸೈನ್ಸ್" ಗೌರವ ಪದವಿ ಪ್ರದಾನ ಮಾಡಿ ಗೌರವಿಸಲಾಯಿತು.

ಕರ್ನಾಟಕ ರಾಜ್ಯ ಮುಕ್ತ ವಿವಿಯಿಂದ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಗೌರವ ಡಾಕ್ಟರೇಟ್‌

ಘಟಿಕೋತ್ಸವದಲ್ಲಿ ಬಿಇ/ಬಿಟೆಕ್- 42,545. (CBCS-42,239+Non-CBCS 306), ಬಿ.ಪ್ಲಾನ್ -06 (CBCS Only), ಬಿ.ಆರ್ಕ್ -1003 (CBCS-999+Non-CBCS 4) ಹಾಗೂ ಸಂಶೋಧನಾ ಪದವಿಗಳಾದ  550 ಪಿಎಚ್ ಡಿ, 04 ಎಂ.ಎಸ್.ಸಿ (Eng) ಬೈ ರಿಸರ್ಚ್ ಮತ್ತು 02 ಇಂಟಿಗ್ರೇಟೆಡ್ ಡ್ಯುಯಲ್ ಪದವಿಗಳು ಸೇರಿದಂತೆ ಒಟ್ಟು 556 ಸಂಶೋಧನಾ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ಪದವಿ ಪ್ರದಾನ:

ವಿವಿಧ ವಿಭಾಗಗಳಲ್ಲಿ ಚಿನ್ನದ ಪದಕ ಪಡೆದ ಮೊದಲ 10 ಪದಕ ವಿಜೇತರಾದ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ, ಇನ್ಸ್‌ಟ್ಯೂಟ್ ಆಫ್ ಟೆಕ್ನಾಲಜಿ, ಸಿವಿಲ್ ಎಂಜಿನಿಯರಿಂಗ್ ವಿಭಾಗದ  ಮದಕಶಿರಾ ಚಿನ್ಮಯ ವಿಕಾಸ್‌ ಅವರಿಗೆ 13 ಚಿನ್ನದ ಪದಕ, ಮೆಕ್ಕಾನಿಕಲ್ ಇಂಜಿನಿಯರಿಂಗ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ಅಭಿಷೇಕ್.ಜಿ 7 ಪದಕ,  \ಸರ್ ಎಂ. ವಿಶ್ವೇಶ್ವರಯ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಗುಡಿಕಲ್ ಸಾಯಿ ವಂಶಿ 7, ಬಳ್ಳಾರಿಯ ಎಲೆಕ್ನಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ಕೆ. ಆರ್. ಸಂಪತ್‌ ಕುಮಾರ್ 7 ಚಿನ್ನದ ಪದಕ ನೀಡುವುದರ ಮೂಲಕ ಪದವಿಗಳನ್ನು ಪ್ರದಾನ ಮಾಡಲಾಯಿತು.

click me!