ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕು..!

By Kannadaprabha News  |  First Published Mar 31, 2021, 8:03 AM IST

27 ದಿನಗಳಲ್ಲಿ 89 ವಿದ್ಯಾರ್ಥಿಗಳಲ್ಲಿ ವೈರಸ್‌ ಪತ್ತೆ| ಕೊರೋನಾ ಪತ್ತೆಯಾದ ಶಾಲೆಗಳು ಕಂಟೈನ್ಮೆಂಟ್‌| ಮಾ.1ರಿಂದ ಪಾಲಿಕೆ ವ್ಯಾಪ್ತಿಯ ಎಲ್ಲ ಶಾಲೆಗಳಲ್ಲಿ ಕೋವಿಡ್‌ ಪರೀಕ್ಷೆ| ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದವರನ್ನು ಗುರುತಿಸಿ ಪರೀಕ್ಷೆ| 
 


ಬೆಂಗಳೂರು(ಮಾ.31):  ಬಿಬಿಎಂಪಿ ವ್ಯಾಪ್ತಿಯ ಎಲ್ಲ ಶಾಲೆಗಳಲ್ಲಿ ಕಳೆದ 27 ದಿನಗಳಲ್ಲಿ 26,047 ವಿದ್ಯಾರ್ಥಿಗಳನ್ನು ಕೋವಿಡ್‌-19 ಪರೀಕ್ಷೆಗೆ ಒಳಪಡಿಸಲಾಗಿದ್ದು ಈ ಪೈಕಿ 89 ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಾ.29ರಂದು ದಾಸರಹಳ್ಳಿಯ ಸರ್ಕಾರಿ ಪ್ರೌಢಶಾಲೆಯ 9 ವಿದ್ಯಾರ್ಥಿಗಳಲ್ಲಿ ಕೊರೋನಾ ವೈರಸ್‌ ಪತ್ತೆಯಾಗಿದ್ದು, ಕಳೆದ ಏಳು ದಿನಗಳಲ್ಲಿ ಒಟ್ಟಾರೆ 37 ಮಂದಿ ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿರುವುದು ವಿದ್ಯಾರ್ಥಿಗಳ ಪೋಷಕರಲ್ಲಿ ಆತಂಕ ಮೂಡಿಸಿದೆ.

Latest Videos

undefined

ಮತ್ತೆ ಕೊರೋನಾ ಅಟ್ಟಹಾಸ: ಕರ್ನಾಟಕದ ಈ ಜಿಲ್ಲೆಯಲ್ಲೀಗ ಜನತಾ ಲಾಕ್‌ಡೌನ್‌..!

ಮಾ.1ರಿಂದ ಪಾಲಿಕೆ ವ್ಯಾಪ್ತಿಯ ಎಲ್ಲ ಶಾಲೆಗಳಲ್ಲಿ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ. ಪಾಲಿಕೆ ಆರೋಗ್ಯಾಧಿಕಾರಿಗಳ ಮಾಹಿತಿಯಂತೆ ಈವರೆಗೆ 26,047 ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ದಾಸರಹಳ್ಳಿಯ ಕಿರಣ್‌ ಪ್ರೌಢಶಾಲೆ (8 ಪಾಸಿಟಿವ್‌), ಶಂಕರೇಶ್ವರ್‌ ಸರ್ಕಾರಿ ಶಾಲೆ (5), ಎಸ್‌ಬಿಎಂ ಇಂಗ್ಲಿಷ್‌ ಪ್ರೌಢಶಾಲೆ (5), ಪಶ್ಚಿಮ ವಲಯದ ಬಿಬಿಎಂಪಿ ಪ್ರೌಢಶಾಲೆ (9), ದಾಸರಹಳ್ಳಿ ವಲಯ ವಾರ್ಡ್‌ ಸಂಖ್ಯೆ 14ರ ಸರ್ಕಾರಿ ಪ್ರೌಢಶಾಲೆಯನ್ನು (9) ಕ್ಲಸ್ಟರ್‌ ಎಂದು ಬಿಬಿಎಂಪಿ ಘೋಷಿಸಿದೆ.

ಈ ನಡುವೆ ಪಾಸಿಟಿವ್‌ ಪತ್ತೆಯಾಗಿರುವ ಶಾಲೆಗಳನ್ನು ಕಂಟೈನ್ಮೆಂಟ್‌ ಝೋನ್‌ ಆಗಿ ಪರಿವರ್ತಿಸಲಾಗಿದೆ. ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದವರನ್ನು ಗುರುತಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ಪ್ರತಿ 15 ದಿನಗಳಿಗೊಮ್ಮೆ ಶಾಲೆಗಳಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕ ಸಿಬ್ಬಂದಿಯನ್ನು ಕೊರೋನಾ ಸೋಂಕು ಪರೀಕ್ಷೆಗೆ ಒಳಪಡಿಸುವಂತೆ ಪಾಲಿಕೆ ಅಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಅವರು ತಿಳಿಸಿದ್ದಾರೆ ಎಂದು ಪಾಲಿಕೆ ಆರೋಗ್ಯಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
 

click me!