ರಾಜ್ಯದಲ್ಲಿ ಸತತ ಎರಡನೇ ವರ್ಷ 2021-22ನೇ ಸಾಲಿನಲ್ಲೂ ಎಲ್ಲ ಮಾದರಿಯ ಶಾಲೆ, ಪಿಯು ಕಾಲೇಜುಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಏರಿಕೆಯಾಗಿದೆ. ಗಮನಾರ್ಹ ಅಂಶವೆಂದರೆ ಮತ್ತೆ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಾಗಿದ್ದು, ಖಾಸಗಿ ಶಾಲೆಗಳಲ್ಲಿ ಕಡಿಮೆಯಾಗಿದೆ.
ಬೆಂಗಳೂರು (ನ.06): ರಾಜ್ಯದಲ್ಲಿ ಸತತ ಎರಡನೇ ವರ್ಷ 2021-22ನೇ ಸಾಲಿನಲ್ಲೂ ಎಲ್ಲ ಮಾದರಿಯ ಶಾಲೆ, ಪಿಯು ಕಾಲೇಜುಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಏರಿಕೆಯಾಗಿದೆ. ಗಮನಾರ್ಹ ಅಂಶವೆಂದರೆ ಮತ್ತೆ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಾಗಿದ್ದು, ಖಾಸಗಿ ಶಾಲೆಗಳಲ್ಲಿ ಕಡಿಮೆಯಾಗಿದೆ. ಕೇಂದ್ರ ಶಿಕ್ಷಣ ಇಲಾಖೆಯು ಬಿಡುಗಡೆ ಮಾಡಿರುವ 2021-22ನೇ ಸಾಲಿನ ಯೂನಿಫೈಡ್ ಡಿಸ್ಟ್ರಿಕ್ಟ್ ಇನ್ಫರ್ಮೇಷನ್ ಸಿಸ್ಟಮ್ ಫಾರ್ ಎಜುಕೇಷನ್ ಪ್ಲಸ್ (ಯುಡೈಸ್ +) ವರದಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.
ವರದಿಯಲ್ಲಿನ ಅಂಕಿ ಅಂಶಗಳ ಪ್ರಕಾರ ಈ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಸರ್ಕಾರಿ, ಖಾಸಗಿ ಸೇರಿ ಎಲ್ಲ ಮಾದರಿ ಶಾಲೆ, ಪಿಯು ಕಾಲೇಜುಗಳಲ್ಲಿ ಒಟ್ಟಾರೆ 1,20,92381 ಮಕ್ಕಳು ದಾಖಲಾಗಿದ್ದಾರೆ. 2020-21ನೇ ಸಾಲಿನ 1.18 ಕೋಟಿ ಸಂಖ್ಯೆಯ ಮಕ್ಕಳ ದಾಖಲಾತಿಗೆ ಹೋಲಿಸಿದರೆ 2021-22ರಲ್ಲಿ ಮಕ್ಕಳ ದಾಖಲಾತಿ 2 ಲಕ್ಷ ಸಂಖ್ಯೆಗೂ ಹೆಚ್ಚಾಗಿದೆ. ಇನ್ನು, ಈ ಪೈಕಿ 2021-22ರಲ್ಲಿ ಸರ್ಕಾರಿ ಶಾಲೆ, ಪಿಯು ಕಾಲೇಜುಗಳಲ್ಲಿ 1ರಿಂದ 12ನೇ ತರಗತಿ ವರೆಗೆ 54,45,989 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. 2020-21ನೇ ಸಾಲಿನಲ್ಲಿ ಸರ್ಕಾರಿ ಶಾಲೆಗಳಿಗೆ ಒಟ್ಟು 50.31 ಲಕ್ಷ ಮಕ್ಕಳು ದಾಖಲಾತಿ ಪಡೆದಿದ್ದರು.
‘ಭಾರತ್ ಜೋಡೋ’ ಏಕೆಂದು ಅರ್ಥವಾಗ್ತಿಲ್ಲ: ಶೋಭಾ ಕರಂದ್ಲಾಜೆ
ಅಂದರೆ, 4.14 ಲಕ್ಷದಷ್ಟು ಹೆಚ್ಚು ಮಕ್ಕಳು ಕಳೆದ ಸಾಲಿನಲ್ಲಿ ದಾಖಲಾಗಿರುವುದು ಕಂಡುಬಂದಿದೆ. ಇನ್ನು, ಕೋವಿಡ್ ಬಳಿಕ ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಕುಸಿಯುತ್ತಾ ಬರುತ್ತಿದ್ದು, ಈ ಅವಧಿಯಲ್ಲೂ ಶೇ.1.64ರಷ್ಟುದಾಖಲಾತಿ ಪ್ರಮಾಣ ಕುಸಿತವಾಗಿದೆ. 2020-21ನೇ ಸಾಲಿನಲ್ಲಿ ಖಾಸಗಿ ಶಾಲೆಗಳಲ್ಲಿ 53,17,640 ಮಕ್ಕಳು ದಾಖಲಾಗಿದ್ದರು. ಆದರೆ, ಕಳೆದ ಸಾಲಿನಲ್ಲಿ (2021-22ರಲ್ಲಿ) ಇದು 51,53,185ಕ್ಕೆ ಇಳಿದಿದೆ. ಅನುದಾನಿತ ಶಾಲೆಗಳಲ್ಲೂ ಸಹ ದಾಖಲಾತಿ ಕಡಿಮೆಯಾಗಿದ್ದು 2021-21ನೇ ಸಾಲಿನಲ್ಲಿ 12,06,780 ಮಕ್ಕಳು ದಾಖಲಾಗಿದ್ದಾರೆ.
ಇದರ ಹಿಂದಿನ ವರ್ಷಕ್ಕೆ ಹೋಲಿಸಿದರೆ ಸುಮಾರು 2 ಲಕ್ಷದಷ್ಟು ಮಕ್ಕಳ ದಾಖಲಾತಿ ಕಡಿಮೆಯಾಗಿದೆ. ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ಉಂಟಾದ ಆರ್ಥಿಕ ಸಂಕಷ್ಟದ ಕಾರಣ ಬಡ ಹಾಗೂ ಮಧ್ಯಮ ವರ್ಗದ ಹಲವಾರು ಮಕ್ಕಳು ಖಾಸಗಿ ಅನುದಾನ ರಹಿತ ಶಾಲೆಗಳಿಂದ ಸರ್ಕಾರಿ ಶಾಲೆಗಳಿಗೆ ವರ್ಗಾವಣೆಗೊಂಡಿದ್ದಾರೆ. ಅವರೆಲ್ಲಾ ಸರ್ಕಾರಿ ಶಾಲೆಯಲ್ಲೇ ಮುಂದುವರೆಯುವ ಜತೆಗೆ ಇನ್ನಷ್ಟುಮಕ್ಕಳು ಸೇರ್ಪಡೆಯಾಗಿದ್ದಾರೆ.
ಓವರ್ ಲೋಡ್ ಸಾಗಿಸುವ ಲಾರಿ ಸೀಜ್ ಮಾಡಿ: ಸಚಿವ ಬಿ.ಸಿ.ಪಾಟೀಲ್
220 ಶಾಲೆಗಳಲ್ಲಿ ಕುಡಿಯುವ ನೀರಿಲ್ಲ!: ಸರ್ಕಾರಿ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಸರ್ಕಾರ ಕೋಟ್ಯಾಂತರ ರು. ವೆಚ್ಚ ಮಾಡಿದ್ದರೂ ಇನ್ನೂ ಕೂಡ 220 ಶಾಲೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯವೇ ಇಲ್ಲ ಎಂದು ವರದಿ ಹೇಳಿದೆ. ಸರ್ಕಾರಿ ಹಾಗೂ ಇತರೆ ಎಲ್ಲ ಮಾದರಿಯ 76,450 ಶಾಲೆಗಳಿದ್ದು ಈ ಪೈಕಿ 68,634 ಶಾಲೆಗಳಲ್ಲಿ ಕುಡಿಯಲು ನಲ್ಲಿ ನೀರನ್ನು ಅವಲಂಬಿಸಲಾಗಿದೆ. 1626 ಶಾಲೆಗಳು ಪ್ಯಾಕ್ಡ್ ವಾಟರ್, 2701 ಶಾಲೆಗಳಲ್ಲಿ ಹ್ಯಾಂಡ್ ಪಂಪ್, 1537 ಶಾಲೆಗಳಲ್ಲಿ ತೆರೆದ ಬಾವಿ, 80ರಲ್ಲಿ ಅಸುರಕ್ಷಿತ ಬಾವಿ ನೀರು ಅವಲಂಭಿಸಲಾಗಿದೆ. 220 ಆವರಣದಲ್ಲಿ ಕುಡಿಯುವ ನೀರಿನ ಸೌಲಭ್ಯವಿಲ್ಲ. ಬಹುತೇಕ ಶಾಲೆಗಳು ಮಕ್ಕಳ ಆರೋಗ್ಯ ತಪಾಸಣೆಗೆ ಕ್ರಮ ವಹಿಸಿಲ್ಲ ಎಂದು ವರದಿ ಹೇಳಿದೆ.