ನೀವು ನಿಮ್ಮ ಶಿಕ್ಷಕರಿಗೆ ಕೃತಜ್ಞತೆ ತಿಳಿಸಲು, ಅವರಿಗೆ ಈ ದಿನದ ಶುಭಾಶಯಗಳನ್ನು ತಿಳಿಸಲು ಇಲ್ಲಿ ಉದಾಹರಣೆ ಸಹಿತ ತಿಳಿಸಲಾಗಿದೆ. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನದ ಸವಿನೆನಪಿನ ಅಂಗವಾಗಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ.
ಸೆಪ್ಟೆಂಬರ್ 05 ಭಾರತೀಯರಿಗೆ ಒಂದು ಮಹತ್ವದ ದಿನ. ಅದರಲ್ಲೂ ಶಾಲಾ, ಕಾಲೇಜುಗಳು, ವಿವಿಗಳಿಗೆ ಹೆಚ್ಚು ವಿಶೇಷ ದಿನ. ಕಾರಣ ಈ ದಿನದಂದು ಶಿಕ್ಷಕರ ದಿನ ಆಚರಣೆ ನಡೆಸಲಾಗುತ್ತದೆ. ಈ ವಿಶೇಷ ದಿನಕ್ಕಾಗಿಯೇ ವಿದ್ಯಾರ್ಥಿಗಳು ಹಲವು ಸ್ಪರ್ಧೆಗಳಿಗೆ, ಭಾಷಣ ಕಾರ್ಯಕ್ರಮಕ್ಕೆ ಸಿದ್ಧತೆಯನ್ನು ಸಹ ನಡೆಸುತ್ತಾರೆ. ರಾಷ್ಟ್ರದ ಮೊದಲ ಪ್ರಜೆ ರಾಷ್ಟ್ರಪತಿಗಳು ಸಹ ತಮ್ಮ ಶಿಕ್ಷಕರನ್ನು ನೆನೆದು, ಅವರಿಗೆ ಕೃತಜ್ಞತೆ ಸಲ್ಲಿಸಲು ಮರೆಯುವುದಿಲ್ಲ.
ನೀವು ನಿಮ್ಮ ಶಿಕ್ಷಕರಿಗೆ ಕೃತಜ್ಞತೆ ತಿಳಿಸಲು, ಅವರಿಗೆ ಈ ದಿನದ ಶುಭಾಶಯಗಳನ್ನು ತಿಳಿಸಲು ಇಲ್ಲಿ ಉದಾಹರಣೆ ಸಹಿತ ತಿಳಿಸಲಾಗಿದೆ. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನದ ಸವಿನೆನಪಿನ ಅಂಗವಾಗಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಅಂದಹಾಗೆ ವಿದ್ಯಾರ್ಥಿಗಳೇ.. ನೀವು ನಿಮ್ಮ ನೆಚ್ಚಿನ ಶಿಕ್ಷಕರಿಗೆ ಶಿಕ್ಷಕರ ದಿನದ ಶುಭಾಶಯಗಳನ್ನು ಹೇಗೆ ತಿಳಿಸಬಹುದು ಎಂದು ಹಲವು ಉದಾರಣೆಗಳನ್ನು ಈ ಕೆಳಗಿನಂತೆ ತಿಳಿಸಲಾಗಿದೆ.
ಮಕ್ಕಳನ್ನು ಮುದ್ದು ಮಾಡದೇ ಇರ್ಬೇಡಿ, ಆದರೆ, ಸಂಸ್ಕಾರ ಕಲಿಸೋದ ಮರೀಬೇಡಿ!
* ನೀವು ಕಲಿಸಿದ ಪಾಠ ನಾನೆಂದು ಮರೆಯುವುದಿಲ್ಲ. ಉತ್ತಮ ವಿದ್ಯಾರ್ಥಿಯಾಗಲು, ಅದಕ್ಕಿಂತ ಮಿಗಿಲಾಗಿ ಉತ್ತಮ ವ್ಯಕ್ತಿ ಆಗಲು ಸಹಾಯ ಮಾಡಿದ್ದೀರಿ. ನಿಮ್ಮ ಎಲ್ಲ ರೀತಿಯ ಸಹಾಯ, ಪ್ರೋತ್ಸಾಹಕ್ಕಾಗಿ ಧನ್ಯವಾದಗಳು. ಶಿಕ್ಷಕರ ದಿನದ ಶುಭಾಶಯಗಳು!
* ನೀವು ನನಗೆ ಕೇವಲ ಶಿಕ್ಷಕರಲ್ಲ. ಅದಕ್ಕಿಂತ ಮಿಗಿಲಾದವರು. ನೀವು ನನ್ನ ಆದರ್ಶ ವ್ಯಕ್ತಿ. ಶಿಕ್ಷಕರ ದಿನದ ಶುಭಾಶಯಗಳು!
* ಪ್ರಪಂಚದಲ್ಲಿಯೇ ನನ್ನ ನೆಚ್ಚಿನ ಉತ್ತಮ ಶಿಕ್ಷಕರಿಗೆ ಶಿಕ್ಷಕರ ದಿನದ ಶುಭಾಶಯಗಳು'. ನಮಗಾಗಿ ನೀವು ನೀಡಿದ ಎಲ್ಲ ಜ್ಞಾನಕ್ಕೆ ನಾವು ಅಭಾರಿ. ನೀವು ನನಗೆ ಹೆಚ್ಚು ಕಲಿಸಿದ್ದೀರಿ. ಕೇವಲ ಶೈಕ್ಷಣಿಕ ಜ್ಞಾನವಲ್ಲದೇ, ಜೀವನಕ್ಕೂ ಪಾಠ ಕಲಿಸಿದ್ದೀರಿ. ನಿಮ್ಮ ಸಹಾಯ ಹಾಗೂ ಮಾರ್ಗದರ್ಶನಕ್ಕೆ ತುಂಬಾ ಧನ್ಯವಾದಗಳು.
* ನಿಮ್ಮನ್ನು ಶಿಕ್ಷಕರಾಗಿ ಪಡೆಯಲು ನಾವು ಪುಣ್ಯಮಾಡಿದ್ವಿ. ತಪ್ಪಾದಾಗ ತಿದ್ದಿ, ಪ್ರೋತ್ಸಾಹಿಸಿದ್ದೀರಿ. ನಿಮ್ಮ ತಾಳ್ಮೆಯನ್ನು ನಮಗೆ ಕಲಿಸಿದ್ದೀರಿ. ನಮ್ಮ ಎಲ್ಲ ಯಶಸ್ಸಿನ ಹಿಂದೆ ನಿಮ್ಮ ಶ್ರಮ ಅತಿ ಮುಖ್ಯವಾಗಿದೆ. ಶಿಕ್ಷಕರ ದಿನದ ಶುಭಾಶಯಗಳು!.
* ಈ ಒಂದು ವಿಶೇಷ ದಿನ, ನಿಮ್ಮ ಮಾರ್ಗದರ್ಶನ ಹಾಗೂ ಸಹಾಯಕ್ಕೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ನೀವು ನಮಗೆ ಕೇವಲ ಪಾಠ ಹೇಳಿಕೊಡಲಿಲ್ಲ. ಜತೆಗೆ ನಾನು ಉತ್ತಮ ವ್ಯಕ್ತಿ ಆಗಲು ಪ್ರೇರಣೆ ನೀಡಿದವರು ನೀವು. ಹ್ಯಾಪಿ ಟೀಚರ್ಸ್ ಡೇ!.
* ನಮಗೆ ಶಿಕ್ಷಕರಾಗಿರುವುದಕ್ಕೆ, ಮಾರ್ಗದರ್ಶಕರಾಗಿರುವುದಕ್ಕೆ, ಸ್ನೇಹಿತರಂತೆ ಸಲಹೆ, ಅರಿವು ಮೂಡಿಸುತ್ತಿರುವುದಕ್ಕೆ ತುಂಬಾ ಧನ್ಯವಾದಗಳು. ನನ್ನ ವ್ಯಕ್ತಿತ್ವ ತುಂಬಾ ಸುಂದರವಾಗಿ ರೂಪುಗೊಳ್ಳಲು ಪ್ರಭಾವ ಬೀರಿದವರು ನೀವು. ನಿಮಗೆ ಶಿಕ್ಷಕರ ದಿನದ ಶುಭಾಶಯಗಳು.
* ನನ್ನಂತ ಇನ್ನು ಸಾವಿರಾರು, ಲಕ್ಷಾಂತರ ವಿದ್ಯಾರ್ಥಿಗಳಿಗೆ ನಿಮ್ಮ ಬೋಧನೆಯ ಅಗತ್ಯ ಖಂಡಿತವಾಗಿ ಬೇಕಾಗಿದೆ. ನಿಮ್ಮ ಬೋಧನೆ, ಮಾರ್ಗದರ್ಶನ, ಸಹಾಯದ ಮನೋಭಾವ ಎಲ್ಲರಿಗೂ ಮಾದರಿ. ನೀವು ನನ್ನ ಆದರ್ಶ ವ್ಯಕ್ತಿ ಎನ್ನಲು ತುಂಬಾ ಹೆಮ್ಮೆ ಪಡುತ್ತೇನೆ. ಶಿಕ್ಷಕರ ದಿನದ ತುಂಬು ಹೃದಯದ ಶುಭಾಶಯಗಳು.
* ಜ್ಞಾನದ ಬೆಳಕಿನಿಂದ ನನ್ನ ಬದುಕನ್ನು ಪ್ರಕಾಶಮಾನವಾಗಿಸಿದ ನನ್ನ ನೆಚ್ಚಿನ ಗುರುಗಳಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು
ಮಕ್ಕಳು ದೊಡ್ಡೋರಾಗ್ತಾ ಇದಾರೆ ಅಂತಾದ್ರೆ ಈ ಕೆಲ್ಸಗಳನ್ನ ಕಲಿತ್ಕೊಳ್ಬೇಕು!
* ಪ್ರೀತಿ ಮತ್ತು ಮೆಚ್ಚುಗೆಯಿಂದ ತುಂಬಿದ ಸಂತೋಷದಾಯಕ ಶಿಕ್ಷಕರ ದಿನ ಇದಾಗಿರಲಿ. ಹ್ಯಾಪಿ ಟೀಚರ್ಸ್ ಡೇ!