ಹಂಪಿ ಕನ್ನಡ ವಿಶ್ವವಿದ್ಯಾಲಯ ಸಂಪರ್ಕ ತರಗತಿ ರದ್ದು

By Kannadaprabha News  |  First Published Oct 30, 2020, 12:43 PM IST

ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಈ ಸಾಲಿನ ಸಂಪರ್ಕ ತರಗತಿ ರದ್ದು| ಗೃಹಲೇಖನ/ಸಂಪ್ರಬಂಧ ಪಡೆಯಲು ನಿರ್ಣಯ| ಅವಧಿ ಮೀರಿ ಬಂದ ಅರ್ಜಿಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸಲಾಗುವುದಿಲ್ಲ| 


ಹೊಸಪೇಟೆ(ಅ.30): ಹಂಪಿ ಕನ್ನಡ ವಿವಿಯ ದೂರಶಿಕ್ಷಣ ನಿರ್ದೇಶನಾಲಯವು ನಡೆಸುವ ಎಂ.ಎ. ಅಂತಿಮ ವರ್ಷದ ಕೋರ್ಸ್‌ಗಳಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ದೇಶವ್ಯಾಪಿ ಕೋವಿಡ್‌-19 ಕೊರೋನಾ ವೈರಸ್‌ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಈ ಸಾಲಿನ ಸಂಪರ್ಕ ತರಗತಿಗಳನ್ನು ರದ್ದುಪಡಿಸಿ, ಗೃಹಲೇಖನ/ಸಂಪ್ರಬಂಧಗಳನ್ನು ಪಡೆಯಲು ನಿರ್ಣಯಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಎಂ.ಎ. ಅಂತಿಮ ವರ್ಷ ಮತ್ತು ಡಿಪ್ಲೊಮಾ ಕೋರ್ಸ್‌ಗಳ ರಿಪೀಟರ್‌ ವಿದ್ಯಾರ್ಥಿಗಳು ನವೆಂಬ​ರ್‌ 1ರಿಂದ 30ರ ವರೆಗೆ ಯಾವುದೇ ದಂಡ ಶುಲ್ಕವಿಲ್ಲದೆ ಗೃಹಲೇಖನ/ಸಂಪ್ರಬಂಧ ಹಾಗೂ ಪರೀಕ್ಷಾ ಅರ್ಜಿಯನ್ನು ಸಲ್ಲಿಸಬಹುದು. ​

Latest Videos

undefined

ರಾಜ್ಯದಲ್ಲಿ ಸೋಂಕು ಇಳಿಕೆ : ಶಾಲೆ ಆರಂಭಿಸಲು ಮುಹೂರ್ತ ಫಿಕ್ಸ್ ..?

ಡಿ. 1ರಿಂದ 31ರ ವರೆಗೆ ರು. 200 ದಂಡ ಸಹಿತ ಗೃಹಲೇಖನ/ಸಂಪ್ರಬಂಧ ಹಾಗೂ ರು. 300.00 ದಂಡ ಸಹಿತ ಪರೀಕ್ಷಾ ಅರ್ಜಿಯನ್ನು ಸಲ್ಲಿಸಬಹುದು. ಅವಧಿ ಮೀರಿ ಬಂದ ಅರ್ಜಿಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸಲಾಗುವುದಿಲ್ಲ ಎಂದು ಕನ್ನಡ ವಿವಿ ಪ್ರಕಟಣೆಯಲ್ಲಿ ತಿಳಿಸಿದೆ.
 

click me!