ಗುಲ್ಬರ್ಗ ವಿವಿ ಪ್ರಶ್ನೆ ಪತ್ರಿಕೆ ಸೋರಿಕೆ: ಪರೀಕ್ಷೆ ಮುಂದಕ್ಕೆ

By Girish GoudarFirst Published May 27, 2022, 4:30 AM IST
Highlights

*   ಹೊಸ ಗೋಲ್ಮಾಲ್‌
*   ಪರೀಕ್ಷಾ ಅಕ್ರಮಗಳ ಸಾರಿಗೆ ಇನ್ನೊಂದು ಸೇರ್ಪಡೆ
*   ಬಿ.ಕಾಂ. 5ನೇ ಸೆಮಿಸ್ಟರ್‌ ಪ್ರಶ್ನೆಪತ್ರಿಕೆ ಬಹಿರಂಗ
 

ಯಾದಗಿರಿ/ರಾಯಚೂರು(ಮೇ.27): ರಾಜ್ಯದಲ್ಲಿ ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ, ಪ್ರಾಧ್ಯಾಪಕರ ಪರೀಕ್ಷೆಯಲ್ಲಿ ಅಕ್ರಮ, ಎಸ್‌ಎಸ್‌ಎಲ್‌ಸಿ ಪ್ರಶ್ನೆಪತ್ರಿಕೆ ಸೋರಿಕೆ ಮುಂತಾದ ಘಟನೆಗಳ ಬೆನ್ನಲ್ಲೇ ಇದೀಗ ಗುಲ್ಬರ್ಗ ವಿಶ್ವವಿದ್ಯಾಲಯದ ಬಿ.ಕಾಂ. ಪ್ರಶ್ನೆಪತ್ರಿಕೆ ಸೋರಿಕೆಯಾಗಿ ಪರೀಕ್ಷೆಯನ್ನು ರದ್ದುಪಡಿಸಲಾಗಿದೆ.

ಕಲಬುರಗಿಯ ಗುಲ್ಬರ್ಗ ವಿಶ್ವವಿದ್ಯಾನಿಲಯದ ಬಿ.ಕಾಂ. 5ನೇ ಸೆಮಿಸ್ಟರ್‌ನ ಮ್ಯಾನೇಜ್‌ಮೆಂಟ್‌ ಅಕೌಂಟಿಂಗ್‌ (ಡಿಎಸ್‌ಸಿ-13) ಪ್ರಶ್ನೆಪತ್ರಿಕೆ ಗುರುವಾರ ಪರೀಕ್ಷೆ ಆರಂಭಗೊಳ್ಳುವ ಕೆಲ ಗಂಟೆಗಳ ಮುನ್ನ ಸೋರಿಕೆಯಾಗಿದೆ. ರಾಯಚೂರು ಹಾಗೂ ಯಾದಗಿರಿಯಲ್ಲಿ ಪರೀಕ್ಷೆಗೆ ಮುನ್ನವೇ ಪ್ರಶ್ನೆಪತ್ರಿಕೆಗಳು ಬಹಿರಂಗಗೊಂಡಿವೆ. ಈ ಹಿನ್ನೆಲೆಯಲ್ಲಿ ವಿವಿಯು ಆ ವಿಷಯದ ಪರೀಕ್ಷೆಯನ್ನು ರದ್ದುಪಡಿಸಿ ಮುಂದೂಡಿಕೆ ಮಾಡಿದೆ.

ಗುರುವಾರ ಮಧ್ಯಾಹ್ನ 2 ಗಂಟೆಗೆ ಮ್ಯಾನೇಜ್‌ಮೆಂಟ್‌ ಅಕೌಂಟಿಂಗ್‌ ಪರೀಕ್ಷೆ ನಡೆಯಬೇಕಿತ್ತು. ಆದರೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ರಾಯಚೂರು, ಯಾದಗಿರಿ ಸೇರಿ ವಿವಿಧೆಡೆ ಪ್ರಶ್ನೆ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ಎಚ್ಚೆತ್ತುಕೊಂಡ ವಿವಿ ಮ್ಯಾನೇಜ್‌ಮೆಂಟ್‌ ಅಕೌಂಟಿಂಗ್‌ ಪರೀಕ್ಷೆಯನ್ನು ಮುಂದೂಡಿ ಪ್ರಕಟಣೆ ಹೊರಡಿಸಿದೆ. ಬಿ.ಕಾಂ.ನ ಉಳಿದ ವಿಷಯಗಳ ಪರೀಕ್ಷೆಗಳು ವೇಳಾ ಪಟ್ಟಿಯಂತೆಯೇ ನಡೆಯಲಿವೆ ಎಂದು ವಿವಿ ತಿಳಿಸಿದೆ.

ಗುಲ್ಬರ್ಗ ವಿವಿಯಲ್ಲಿ ಹೇಮರೆಡ್ಡಿ ಮಲ್ಲಮ್ಮ ಅಧ್ಯಯನ ಪೀಠದ ನೂತನ ಕಟ್ಟಡ ಉದ್ಘಾಟನೆ

ಯಾವ ಕಾಲೇಜಿಂದ ಪ್ರಶ್ನೆ ಪತ್ರಿಕೆ ಬಹಿರಂಗವಾಗಿದೆ ಎಂಬ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. ತನಿಖೆ ನಂತರ ಈ ಕುರಿತು ಸ್ಪಷ್ಟಚಿತ್ರಣ ಸಿಗುವ ಸಾಧ್ಯತೆ ಇದೆ. ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿ ಸೈಬರ್‌ ಠಾಣೆಗೆ ವಿವಿ ರಿಜಿಸ್ಟ್ರಾರ್‌ ಡಾ.ಮೇಧಾವಿನಿ ದೂರು ನೀಡಿದ್ದಾರೆ. ಈ ಸಂಬಂಧ ಸೈಬರ್‌ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಬಿ.ಕಾಂ.ನ ಮ್ಯಾನೇಜ್‌ಮೆಂಟ್‌ ಅಕೌಂಟಿಂಗ್‌ ಪ್ರಶ್ನೆ ಪತ್ರಿಕೆ ಸೋರಿಕೆಯಾದ ವಿಚಾರ ಮಧ್ಯಾಹ್ನ 12.30ಕ್ಕೆ ಗಮನಕ್ಕೆ ಬಂತು. ತಕ್ಷಣ ಎಲ್ಲರೂ ಸಭೆ ಸೇರಿ ಪರೀಕ್ಷೆ ಮುಂದೂಡುವ ನಿರ್ಣಯ ಕೈಗೊಂಡಿದ್ದೇವೆ ಅಂತ ಗುಲ್ಬರ್ಗ ವಿವಿ ಕುಲಪತಿ ಡಾ.ಅಗಸರ್‌ ಹೇಳಿದ್ದಾರೆ.  
 

click me!