ತುಷಾರ್ ಸುಮೇರಾ ಅವರ ಜೀವನ ಕಥೆ ಅನೇಕರಿಗೆ ಸ್ಫೂರ್ತಿದಾಯಕವಾಗಿದೆ. ಇವರು 2012ರ ಬ್ಯಾಚ್‌ನ ಐಎಎಸ್ ಅಧಿಕಾರಿ. ಅವರು 10 ನೇ ತರಗತಿಯಲ್ಲಿ ಕೇವಲ 35 ಅಂಕಗಳಿಂದ ಇಂಗ್ಲಿಷ್ ಪಾಸ್ ಆಗಿದ್ದಾರೆ.
ತುಷಾರ್ ಸುಮೇರಾ ಅವರ ಜೀವನ ಕಥೆ ಅನೇಕರಿಗೆ ಸ್ಫೂರ್ತಿದಾಯಕವಾಗಿದೆ. ಇವರು 2012ರ ಬ್ಯಾಚ್‌ನ ಐಎಎಸ್ ಅಧಿಕಾರಿ. ಪ್ರಸ್ತುತ ಗುಜರಾತ್‌ನ ಭರೂಚ್‌ನ ಕಲೆಕ್ಟರ್ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ವರ್ಷ ಅವರ 10 ನೇ ತರಗತಿಯ ಅಂಕಪಟ್ಟಿ ಬಹಳ ವೈರಲ್ ಆಗಿತ್ತು. ತುಷಾರ್ ಸುಮೇರಾ ಇಂಗ್ಲಿಷ್, ಗಣಿತ ಮತ್ತು ವಿಜ್ಞಾನದಲ್ಲಿ ಕೇವಲ ಉತ್ತೀರ್ಣ ಅಂಕಗಳನ್ನಷ್ಟೇ ಗಳಿಸಿದ್ದರು. ಆದರೆ ವಿಶ್ವದ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್‌ಸಿ ಯನ್ನು ಪಾಸ್ ಮಾಡಿ ಯಶಸ್ವಿಯಾದರು.
ತುಷಾರ್ ಸುಮೇರಾ 2012 ರಲ್ಲಿ ಯುಪಿಎಸ್‌ಸಿಯನ್ನು ತೇರ್ಗಡೆಗೊಳಿಸಿದರು. ಛತ್ತೀಸ್‌ಗಢ ಕೇಡರ್‌ನ 2009 ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾದ ಐಎಎಸ್ ಅವನೀಶ್ ಶರಣ್ ಕಳೆದ ವರ್ಷ ತುಷಾರ್ ಸುಮೇರಾ ಅವರ 10 ನೇ ತರಗತಿಯ ಅಂಕಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು. ಅದರಲ್ಲಿ ಅವರು ಇಂಗ್ಲಿಷ್‌ನಲ್ಲಿ 35, ಗಣಿತದಲ್ಲಿ 36 ಮತ್ತು ವಿಜ್ಞಾನದಲ್ಲಿ ಕೇವಲ 38 ಅಂಕಗಳನ್ನು ಗಳಿಸಿದ್ದಾರೆ. 33 ಭಾರತದಲ್ಲಿ ಪಾಸಿಂಗ್ ಕಟ್-ಆಫ್ ಆಗಿದೆ.
undefined
ದೇಶದ ಅತ್ಯಂತ ಶ್ರೀಮಂತ ಮಹಿಳಾ ಯೂಟ್ಯೂಬರ್ ದಕ್ಷಿಣ ಭಾರತದ ಪ್ರತಿಭೆ, ವಾರ್ಷಿಕ ಗಳಿಕೆ
ಆರಂಭದಲ್ಲಿ ಸರಾಸರಿಗಿಂತ ಕಡಿಮೆ ವಿದ್ಯಾರ್ಥಿಯಾಗಿದ್ದರೂ, ಅವರು UPSC ಉತ್ತೀರ್ಣರಾಗಿರುವುದು ದೊಡ್ಡ ಸಾಧನೆಯಾಗಿದೆ. 100ರಲ್ಲಿ ಇಂಗ್ಲಿಷ್‌ನಲ್ಲಿ 35 ಮತ್ತು ಗಣಿತದಲ್ಲಿ 36 ಅಂಕಗಳನ್ನು ಪಡೆದಾಗ ಇಡೀ ಊರಲ್ಲಿ ಮಾತ್ರವಲ್ಲದೆ ಅವರ ಶಾಲೆಯಲ್ಲೂ ಭವಿಷ್ಯದಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ತುಷಾರ್ ಸುಮೇರಾ ಅವರು ಕಲಾ ಪದವಿ ಪಡೆದ ನಂತರ ಶಿಕ್ಷಕರಾಗಿ ಕೆಲಸ ಮಾಡಿದರು. ಅವರು 2012 ರಲ್ಲಿ UPSC ಬರೆದು ಪಾಸ್ ಆದರು. ಅವರ ಸ್ವಯಂ ಅಧ್ಯಯನ, ಸತತ ಪ್ರಯತ್ನದಿಂದಲೇ ಇಂಗ್ಲಿಷ್ ಮತ್ತು ಗಣಿತವನ್ನು ಕಲಿತರು.
ಇವರೇ ನೋಡಿ ಭಾರತದ ಅತ್ಯಂತ ಶ್ರೀಮಂತ ಶಾಸಕರು, ಟಾಪ್ 10ರಲ್ಲಿ ಕರ್ನಾಟಕದವರೇ ಹೆಚ್ಚು