ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 150 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

By Govindaraj S  |  First Published Apr 28, 2023, 10:22 PM IST

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ   ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ ಎರಡನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭವು ಕಾಲೇಜು ಆವರಣದಲ್ಲಿ ನಡೆಯಿತು. 


ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಏ.28): ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ   ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ ಎರಡನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭವು ಕಾಲೇಜು ಆವರಣದಲ್ಲಿ ನಡೆಯಿತು. ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಡಾ ಎಂ.ಕೆ ರಮೇಶ್, ಉಪ ಕುಲಪತಿಗಳು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ರವರು ಪ್ರಕೃತಿ ಸೊಬಗಿನ ಬೆಟ್ಟಗುಡ್ಡಗಳ ಮಧ್ಯೆ ಸ್ಥಾಪಿತವಾದ ಈ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ವೈದ್ಯರಾಗಿರುವುದನ್ನು ಸ್ಮರಿಸುತ್ತಾ ಕೋರ್ಸ್ ಗಳಲ್ಲಿ ಅತ್ಯಂತ ಕ್ಲಿಷ್ಟಕರವಾದ ಕೋರ್ಸ್ ಎಂಬಿಬಿಎಸ್ ಆಗಿದ್ದು ಸದರಿ ಕೋರ್ಸ್ ಅವಧಿಯು ದೊಡ್ಡಾದಾಗಿದ್ದು ದೊಡ್ಡ ದೊಡ್ಡ ಪುಸ್ತಕಗಳನ್ನು ಓದಿ ಎಲ್ಲಾ ಕೌಶಲ್ಯಗಳನ್ನು ಕಲಿತು ವೈದ್ಯರಾಗಿದ್ದೀರಿ. 

Tap to resize

Latest Videos

undefined

ನೀವು ಈ ಸಮಯದಲ್ಲಿ ಮೂರು ಜನರಿಗೆ ಕೃತಜ್ಞತೆ ಸಲ್ಲಸಬೇಕೆಂದು ತಿಳಿಸುತ್ತೇನೆ ಎಂದರು. ಮೊದಲು ತಂದೆ ತಾಯಿ ನಂತರ ಎಲ್ಲಾ ರೀತಿಯಲ್ಲಿಯೂ ತಮಗೆ ವಿದ್ಯಾಭ್ಯಾಸ ನೀಡಿದ ಗುರುಗಳು ಮತ್ತು ರೋಗಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಬೇಕೆಂದು ತಿಳಿಸುತ್ತಾ ರೋಗಿಗಳು ಇಲ್ಲದೆ ನಿಮಗೆ ವೈದ್ಯರಾಗಲು ಸಾಧ್ಯವಿಲ್ಲವೆಂದು ತಿಳಿಸಿದರು. ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಮುಗುಳುನಗೆಯಲ್ಲಿ  ಸ್ಟೆತಸ್ಕೋಪ್ ಇಟ್ಟು ನೋಡಿದಲ್ಲಿ ಮಾತ್ರ ರೋಗಿಯು ಸಂತೃಪ್ತಿಯಿಂದ ಗುಣಮುಖರಾಗುತ್ತಾರೆ.  ವೈದ್ಯರಲ್ಲಿ ವಾಕ್ ಸಾಮಾರ್ಥ್ಯ ಚೆನ್ನಾಗಿದ್ದವರು ಮಾತ್ರ ಸಾಧನೆಯನ್ನು ತೋರುತ್ತಾರೆ ಎಂದು ಹೇಳುತ್ತಾ ತಕ್ಷಣಕ್ಕೆ ದುಡ್ಡು ಮಾಡಬೇಕೆಂಬ ಉದ್ದೇಶ ಇರುವವರು ವೈದ್ಯ ಕ್ಷೇತ್ರಕ್ಕೆ ಬರಬಾರದು. ಬಿಜಿನಸ್ ಕ್ಷೇತ್ರಕ್ಕೆ ತೆರಳಬೇಕೆಂದು ಕಿವಿಮಾತು ಹೇಳಿದರು. 

ಮೈಸೂರು ಮಹಾರಾಜರ ಸ್ಫೂರ್ತಿಯಿಂದ ವರುಣ ಮಾದರಿ ಕ್ಷೇತ್ರ ಮಾಡುವೆ: ಸಚಿವ ವಿ.ಸೋಮಣ್ಣ

ಭಾರತ ದೇಶ ಯುವಜನರ ಕಣಜವಾಗಿ ಮಾರ್ಪಾಡಾಗುತಿದ್ದು ಈ ಸಮಯದಲ್ಲಿ ನೀವೆಲ್ಲರೂ ವೈದ್ಯರಾಗಿ ಹೊರ ಹೊಮ್ಮುತ್ತಿದ್ದೀರಿ.  ತಮಗೆ ಶುಭವಾಗಲಿ ಎಂದು ಹಾರೈಸಿದರು. ಅತಿಥಿಗಳಾಗಿ ಆಗಮಿಸಿದ್ದ ಪದ್ಮಶ್ರೀ  ಡಾ. ಮಾತ ಬಿ ಮಂಜಮ್ಮ ಜೋಗತ್ತಿ ಅವರು ಮಾತನಾಡಿ ನಾನು 90 ರ ದಶಕದಲ್ಲಿ ಕಲಾವಿದೆಯಾಗಿ ಮಡಿಕೇರಿ ನಗರದ ಬೀದಿಯಲ್ಲಿ ನೃತ್ಯ ಮಾಡಲು ಬಂದಿದ್ದೆ. ಈಗಾ ಅತಿಥಿಯಾಗಿ ಕೊಡಗು ಜಿಲ್ಲೆಗೆ ಬೇಟಿ ನೀಡುತಿದ್ದು ಮೊದಲ ಬಾರಿಗೆ ವೈದ್ಯ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸುತ್ತಿರುವುದಕ್ಕೆ ಹರ್ಷವಾಗುತ್ತಿದೆ ಎಂದರು. ಕಷ್ಟಪಟ್ಟು ನಿಮ್ಮ ತಂದೆ ತಾಯಿಯವರು ವೈದ್ಯರಾಗಿ ಮಾಡಿದ್ದಾರೆ. ತಂದೆ ತಾಯಿಗಳ ಆಸೆಯನ್ನು ನೀವು ಈಡೇರಿಸಿರುವುದು ಸಂತಸದ ವಿಷಯ ಎಂದರು. 

ಯಾರಾದರೂ ಒಂದು ಲಕ್ಷ ಮತಗಳಿಂದ ಗೆಲ್ಲಲು ಸಾಧ್ಯವೇ?: ಸಿದ್ದು ವಿರುದ್ಧ ಶ್ರೀನಿವಾಸ್ ಪ್ರಸಾದ್‌ ವಾಗ್ದಾಳಿ

ಕಾರ್ಯಕ್ರಮದಲ್ಲಿ ಉಪಕುಲಪತಿಗಳಾದ ಡಾ. ಎಂಕೆ ರಮೇಶ್ ಹಾಗೂ ಪದ್ಮಶ್ರೀ  ಡಾ. ಮಾತ ಬಿ ಮಂಜಮ್ಮ ಜೋಗತ್ತಿ ರವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಆಕಾಶ್ ಎಸ್. ಸಂಸ್ಥೆಯ ನಿರ್ದೇಶಕರು ಹಾಗೂ ಡೀನ್ ರವರಾದ ಡಾ. ಕಾರ್ಯಪ್ಪ ಕೆ.ಬಿ, ಪ್ರಾಂಶುಪಾಲರಾದ ಡಾ. ವಿಶಾಲ್ ಕುಮಾರ್, ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಗಳಾದ ಸ್ವಾಮಿ ಎ.ಎಲ್, ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಡಾ ಜಯಲಕ್ಷ್ಮಿ ಪಾಟ್ಕರ್, ಎಂ.ಎ ನಿರಂಜನ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯಲ್ಲಿ ಈ ಬಾರಿ 150 ವೈದ್ಯ ವಿದ್ಯಾರ್ಥಿಗಳು ಯಶಸ್ವಿಯಾಗಿ ಪದವಿ ಪೂರೈಸಿ ವೈದ್ಯರಾಗಿ ಹೊರಹೊಮ್ಮಿ ಪದವಿ ಸ್ವೀಕರಿಸಿದರು.

click me!