ವಿಜಯಪುರ: ಸರ್ಕಾರಿ ಶಾಲಾ ಛಾವಣಿ ಕಾಂಕ್ರಿಟ್ ಕುಸಿತ: ಅಚ್ಚರಿ ರೀತಿಯಲ್ಲಿ ಪಾರಾದ ಮಕ್ಕಳು..!

Published : May 27, 2022, 12:30 PM IST
ವಿಜಯಪುರ: ಸರ್ಕಾರಿ ಶಾಲಾ ಛಾವಣಿ ಕಾಂಕ್ರಿಟ್ ಕುಸಿತ: ಅಚ್ಚರಿ ರೀತಿಯಲ್ಲಿ ಪಾರಾದ ಮಕ್ಕಳು..!

ಸಾರಾಂಶ

*  ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದ ಘಟನೆ *  ಪುರಸಭೆಯಿಂದಲೇ ನಿರ್ಲಕ್ಷವಾಯ್ತಾ? *  ಪ್ರತಿಭಟನೆ ಎಚ್ಚರಿಕೆ ನೀಡಿದ ಪೋಷಕರು

ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ(ಮೇ.27): ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ನಾಲತವಾಡ ರಸ್ತೆ ಪಕ್ಕದ ಮಹಿಬೂಬ ನಗರದಲ್ಲಿರುವ ಸರ್ಕಾರಿ ಉರ್ದು ಶಾಲೆಯ ಕೊಠಡಿಯೊಂದರ ಛಾವಣಿ ಕಾಂಕ್ರಿಟ್ ಪದರು‌ ಕುಸಿದು ಬಿದ್ದು ಮಕ್ಕಳು ಅಚ್ಚರಿಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.

ಪವಾಡ ರೀತಿಯಲ್ಲಿ ಮಕ್ಕಳು ಪಾರು

ಶಾಲೆ ಪ್ರಾರಂಭವಾಗಿರುವುದರಿಂದ ಕಲಿಕಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಹಲವು ಮಕ್ಕಳು ಶಾಲೆಗೆ ಬಂದಿದ್ದರು. ಒಂದು ಕೊಠಡಿಯಲ್ಲಿ ಮಕ್ಕಳು ತಮ್ಮ ಶಾಲಾ ಬ್ಯಾಗ್‌ಗಳನ್ನ ಇಟ್ಟು ಪ್ರಾರ್ಥನೆಗೋಸ್ಕರ ಹೊರಗೆ ಬಂದಿದ್ದಾರೆ. ಇತ್ತ ಪ್ರಾರ್ಥನೆ ಪ್ರಾರಂಭಗೊಂಡ ಕೂಡಲೇ ಅತ್ತ ಕೊಠಡಿಯೊಳಗಿಂದ ಭಾರೀ ಸದ್ದು ಕೇಳಿಬಂದಿದೆ. ಕೂಡಲೇ ಶಿಕ್ಷಕರು ಹೋಗಿ ನೋಡಿದಾಗ ಮೇಲ್ಛಾವಣಿಯ ಪದರು ಕುಸಿದು ಬಿದ್ದಿರುವುದು ಕಂಡು ಬಂದಿದೆ.
ಮಕ್ಕಳು ಒಳಗೆ ಇದ್ದರೇ ಭಾರೀ ಅನಾಹುತವಾಗ್ತಿತ್ತು.

ಹೊಸಪೇಟೆ: ಮಕ್ಕಳಿಗೆ ದೇವಸ್ಥಾನದ ಆವರಣವೇ ಪಾಠಶಾಲೆ..!

ಪಾರ್ಥನೆಗೋಸ್ಕರ ಮಕ್ಕಳು ಹೊರಗೆ ಹೋಗಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದೆ. ಒಂದು ವೇಳೆ ಮಕ್ಕಳು ಒಳಗಿದ್ದಾಗ ಪದರು ಕುಸಿದು ಅವರ ತಲೆಯ ಮೇಲೆ ಬಿದ್ದಿದ್ದರೆ ಅಪಾರ ಗಾಯ, ನೋವು ಸಂಭವ ಹೆಚ್ಚಾಗಿತ್ತು. ಘಟನೆ ಕಂಡ ಸ್ವತಃ ಶಿಕ್ಷಕರೇ ಅಚ್ಚರಿ ವ್ಯಕ್ತಪಡೆಸಿದ್ದಾರೆ

ಸ್ಥಳಕ್ಕೆ ದೌಡಾಯಿಸಿದ SDMC ಸದಸ್ಯರು, ಅಧಿಕಾರಿಗಳು

ವಿಷಯ ತಿಳಿದು ಎಸ್ಡಿಎಂಸಿ ಅಧ್ಯಕ್ಷರೂ ಆಗಿರುವ ಪುರಸಭೆ ಸಧಸ್ಯ ಮಹಿಬೂಬ ಗೊಳಸಂಗಿ ಅವರು ಸ್ಥಳಕ್ಕಾಗಮಿಸಿ ಪರಿಶೀಲಿಸಿದರು. ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ಯು.ಬಿ.ಧರಿಕಾರ ಅವರೂ ಸ್ಥಳಕ್ಕಾಗಮಿಸಿ ಘಟನೆ ವೀಕ್ಷಿಸಿ ಮೇಲಧಿಕಾರಿಗಳ ಗಮನಕ್ಕೆ ತಂದರು. ಆ ಕೊಠಡಿಯಲ್ಲಿ ಮಕ್ಕಳನ್ನು ಕೂಡಿಸದಂತೆ ಸೂಚಿಸಿದರು. 

ಮತ್ತೊಂದು ಕೊಠಡಿಯಲ್ಲು ಬಿರುಕು

ಒಂದು ಕೊಠಡಿಯಲ್ಲಿ ಮೇಲ್ಚಾವಣಿ ಸಿಮೆಂಟ್ ಕಾಂಕ್ರೀಟ್ ಕುಸಿದ ಬೆನ್ನಲ್ಲೆ  ಮತ್ತೊಂದು ಕೊಠಡಿಯಲ್ಲು ಬಿರುಕು ಇರೋದು ಪತ್ತೆಯಾಗಿದೆ. ಪರಿಶೀಲನೆಗೆ ಬಂದಿದ್ದ ಅಧಿಕಾರಿಗಳು ಮತ್ತೊಂದು ಬಿರುಕು ಬಿಟ್ಟ ಕೊಠಡಿಯನ್ನೂ ಪರಿಶೀಲಿಸಿ ಮುನ್ನೆಚ್ಚರಿಕೆವಹಿಸಲು ಶಾಲೆಯ ಮುಖ್ಯಾಧ್ಯಾಪಕಿ ಬಾಗವಾನ ಅವರಿಗೆ ನಿರ್ದೇಶನ ನೀಡಿದರು.

ಹಲವು ಬಾರಿ ಮನವಿ ನೀಡಿದ್ರೂ ಪ್ರಯೋಜನವಾಗಿಲ್ಲ

ಹಲವು ಬಾರಿ ಬಿಇಓ ಕಚೇರಿಗೆ ಶಾಲೆ ದುರಸ್ಥಿ, ಹೆಚ್ಚುವರಿ ಕೊಠಡಿ ಒದಗಿಸಲು ಕೋರಿ ಮನವಿಗಳ ಮೇಲೆ ಮನವಿ ಸಲ್ಲಿಸಿದರೂ ಸ್ಪಂಧಿಸಿಲ್ಲ ಎಂದು ಮುಖ್ಯಾಧ್ಯಾಪಕಿ ಅಸಮಾಧಾನ ತೋಡಿಕೊಂಡಿದ್ದಾರೆ. ವಿದ್ಯಾರ್ಥಿಗಳ ಪೋಷಕರು ಸಹ ಇದೆ ಮಾತನ್ನ ಅಧಿಕಾರಿಗಳ ಎದುರು ಹೇಳಿಕೊಂಡಿದ್ದಾರೆ.

ಗುಲಬರ್ಗಾ ವಿವಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷೆ ಕ್ಯಾನ್ಸಲ್

ಪ್ರತಿಭಟನೆ ಎಚ್ಚರಿಕೆ ನೀಡಿದ ಪೋಷಕರು

ಘಟನೆ ಬಳಿಕ ಗಾಭರಿಗೊಂಡಿರುವ ಪೋಷಕರು, ಸ್ಥಳೀಯರು ಶಾಲೆ ಸಂಪೂರ್ಣ ಹಳೆಯದಾಗಿದೆ, ಅಲ್ಲಲ್ಲಿ ಸಹ ಬಿಟ್ಟಿವೆ. ದುರಸ್ಥಿ ಮಾಡಿ ಎಂದಿದ್ದಾರೆ. ಇನ್ನು ಸ್ಥಾಯಿ ಸಮಿತಿಯ ಅಧ್ಯಕ್ಷ ಗೊಳಸಂಗಿ ಕೂಡ ಆಕ್ರೋಶ ಹೊರಹಾಕಿದ್ದಾರೆ.  ದುರಸ್ತಿಗೆ, ಹೊಸ ಕೊಠಡಿ ಮಂಜೂರಾತಿಗೆ ಯಾರೂ ಗಮನ ಹರಿಸುತ್ತಿಲ್ಲ. ಕೆಲ ಸಣ್ಣ ಪುಟ್ಟ ಕೆಲಸಗಳನ್ನೂ ಶಿಕ್ಷಕರು, ಎಸ್ಡಿಎಂಸಿಯವರ ಸಹಾಯದಿಂದ ಮಾಡಿದ್ದೇವೆ. ಈ ಘಟನೆಯಿಂದಾರೂ ಇಲಾಖೆ ಎಚ್ಚೆತ್ತುಕೊಂಡು ಮಕ್ಕಳ ಪ್ರಾಣ ರಕ್ಷಣೆಗೆ ಕ್ರಮವಹಿಸಬೇಕು. ಇಲ್ಲವಾದರೆ ಮಕ್ಕಳ ಸಮೇತ ಬಿಇಓ ಕಚೇರಿಗೆ ತೆರಳಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪುರಸಭೆಯಿಂದಲೇ ನಿರ್ಲಕ್ಷವಾಯ್ತಾ?

ಸ್ಥಳಕ್ಕೆ ಭೇಟಿ ನೀಡಿದ ಕ್ಷೇತ್ರ ಸಮನ್ವಯಾಧಿಕಾರಿ ಧರಿಕಾರ ಶಾಲೆ ಪುರಸಭೆ ವ್ಯಾಪ್ತಿಯಲ್ಲಿ ಬರುವುದರಿಂದ ಸಣ್ಣಪುಟ್ಟ ದುರಸ್ಥಿಗೆ, ಕಂಪೌಂಡ್ ನಿರ್ಮಾಣಕ್ಕೆ ಪುರಸಭೆಯವರು ಮುಂದಾಗಬೇಕು. ಹಲವು ಬಾರಿ ಪುರಸಭೆ ಆಡಳಿತಕ್ಕೆ ಈ ಕುರಿತು ಗಮನ ಸೆಳೆದರೂ ಅವರು ಸ್ಪಂದಿಸಿಲ್ಲ. ನಮ್ಮಲ್ಲಿ ಅನುದಾನ ಇಲ್ಲ ಎಂದು ಹೇಳುತ್ತಾರೆ ಎಂದು ಆರೋಪಿಸಿದರು.
 

PREV
Read more Articles on
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ