⦁ ಪಿಯು ಪ್ರಥಮ ವರ್ಷದ ಪರೀಕ್ಷೆಗೆ ಹಾಜರಾಗಲು ಒದ್ದಾಡಿದ ಪರೀಕ್ಷಾರ್ಥಿಗಳು.
⦁ ರಸ್ತೆ ಮೇಲೆ ನಿಂತು ಮಕ್ಕಳ ಸಹಾಯವಾಣಿಗೆ ವಿದ್ಯಾರ್ಥಿಗಳ ಕರೆ.
⦁ ಸ್ಥಳಕ್ಕೆ ದೌಡಾಯಿಸಿ ವಿದ್ಯಾರ್ಥಿಗಳನ್ನ ಪರೀಕ್ಷಾ ಕೇಂದ್ರಕ್ಕೆ ಬಿಟ್ಟ ಮಕ್ಕಳ ಸಹಾಯವಾಣಿ 1098 ತಂಡ.
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ
ವಿಜಯಪುರ (ಏ.01): ಪರೀಕ್ಷೆಗೆ (Exam) ಹೊರಟಿದ್ದ ವಿದ್ಯಾರ್ಥಿಗಳನ್ನ (Students) ಕಂಡಕ್ಟರ್ ಒಬ್ಬ ಸರ್ಕಾರಿ ಬಸ್‌ನಿಂದ (Government Bus) ದಾರಿ ಮಧ್ಯೆಯೆ ಇಳಿಸಿ ಅಮಾನವೀಯತೆ ಮೆರೆದ ಘಟನೆ ವಿಜಯಪುರ (Vijayapura) ತಾಲೂಕಿನ ಉತ್ನಾಳ ಗ್ರಾಮದ ಬಳಿ ನಡೆದಿದೆ. ಮನಗೂಳಿ ಗ್ರಾಮದಿಂದ ವಿಜಯಪುರಕ್ಕೆ ಪಿಯು ಪ್ರಥಮ ವರ್ಷದ ಪರೀಕ್ಷೆಗೆ ಹಾಜರಾಗಲು ವಿದ್ಯಾರ್ಥಿಗಳು ಬಸ್ ಏರಿದ್ದರು. ಆದ್ರೆ ಕಂಡಕ್ಟರ್ ಅರ್ಧ ದಾರಿಯಲ್ಲೆ ವಿದ್ಯಾರ್ಥಿಗಳನ್ನ ಕೆಳಗಿಳಿಸಿ ಹೋಗಿದ್ದಾನೆ. ಬಳಿಕ ವಿಜಯಪುರ ಮಕ್ಕಳ ಸಹಾಯವಾಣಿ 1098 ಸಿಬ್ಬಂದಿ ಸಹಾಯಕ್ಕೆ ಧಾವಿಸಿದ ಘಟನೆಯು ನಡೆದಿದೆ..
ಪಾಸ್ ಅವಧಿ ಮುಗಿತು (Bus Pass Expiration) ಎಂದು ಕೆಳಗಿಳಿಸಿದ್ರು: ಪಿಯು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿವೆ. ವಿದ್ಯಾರ್ಥಿಗಳು 9.30ಕ್ಕೆ ಪರೀಕ್ಷೆಗೆ ಹಾಜರಾಗಲೇ ಬೇಕು. ವಿಜಯಪುರದಿಂದ 20 ರಿಂದ 30 ಕಿ.ಮೀ ದೂರದಲ್ಲಿರೋ ವಿದ್ಯಾರ್ಥಿಗಳು ಬಸ್ ಮೂಲಕ ಬಂದು ಪರೀಕ್ಷೆ ಬರೆಯುತ್ತಾರೆ. ಹಾಗೇ ಪರೀಕ್ಷೆಗೆ ಹಾಜರಾಗಲು ಮನಗೂಳಿ ಪಟ್ಟಣದಿಂದ 7 ಪರೀಕ್ಷಾರ್ಥಿಗಳು KA28 F 2422 ನಂಬರಿನ ಬಸ್ ಹತ್ತಿದ್ದಾರೆ. ವಿಜಯಪುರ ನಗರದ ಸರ್ಕಾರಿ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಹೊರಟಿದ್ದ 5 ವಿದ್ಯಾರ್ಥಿಗಳು ಹಾಗೂ ಖೇಡ್ ಕಾಲೇಜಿನಲ್ಲಿ ಪರೀಕ್ಷೆಗೆ ಹಾಜರಾಗಬೇಕಿದ್ದ ಇಬ್ಬರು ವಿದ್ಯಾರ್ಥಿಗಳು ಬಸ್ ಹತ್ತಿದ್ದಾರೆ.
ವಿಜಯಪುರ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮರಾಠಿ ನೃತ್ಯ, ಮಹೇಶ್ ಜೋಶಿ ಆಕ್ರೋಶ..!
ಆದ್ರೆ ಅಲ್ಲಿಂದ ಉತ್ನಾಳ ಬಳಿ ಬರ್ತಿದ್ದಂತೆ ವಿದ್ಯಾರ್ಥಿಗಳನ್ನ ಕಂಡೆಕ್ಟರ್ ನಿಮ್ಮ ಪಾಸ್ ಅವಧಿ ಮುಗಿದಿದೆ ಎಂದು ಕೆಳಗಿಳಿಸಿದ್ದಾನೆ. ನಮ್ಮ ಪರೀಕ್ಷೆ ಇದೆ ಹಾಜರಾಗಬೇಕು, ವಿಜಯಪುರಕ್ಕೆ ಬಿಡಿ ಎಂದ್ರು ಕೇಳದೆ ಕನಿಕರವು ಇಲ್ಲದಂತೆ ಅವರನ್ನೆಲ್ಲ ದಾರಿಯಲ್ಲೆ ಬಿಟ್ಟಿದ್ದಾನೆ. ಪರೀಕ್ಷೆ ಬರೆಯಲು ಹೊರಟಿದ್ದ ವಿದ್ಯಾರ್ಥಿಗಳು ಉತ್ನಾಳ ರಸ್ತೆ ಮೇಲೆ ಕೆಲ ಕಾಲ ಬೇರೆ ವಾಹನಗಳಿಗಾಗಿ ಪರದಾಡಿದ್ದಾರೆ.
ಸಹಾಯಕ್ಕೆ ದೌಡಾಯಿಸಿದ ಮಕ್ಕಳ ಸಹಾಯವಾಣಿ ತಂಡ: ಪರೀಕ್ಷೆಗೆ ಹೋಗಲು ಆಗದೆ ಉತ್ನಾಳ ಬಳಿ ಒದ್ದಾಡುತ್ತಿದ್ದ ವಿದ್ಯಾರ್ಥಿಗಳು ವಿಜಯಪುರದ ಮಕ್ಕಳ ಸಹಾಯವಾಣಿಗೆ 1098 ಗೆ ಕರೆ ಮಾಡಿ ಸಹಾಯ ಕೇಳಿದ್ದಾರೆ. ತಕ್ಷಣವೇ ಮಕ್ಕಳ ಕರೆಗೆ ಸ್ಪಂದಿಸಿದ ಮಕ್ಕಳ ಸಹಾಯವಾಣಿ ಸಿಬ್ಬಂದಿ ತಕ್ಷಣವೇ ವಿದ್ಯಾರ್ಥಿಗಳ ಸಹಾಯಕ್ಕೆ ದೌಡಾಯಿಸಿದ್ದಾರೆ. ಉತ್ನಾಳದಿಂದ ವಿದ್ಯಾರ್ಥಿಗಳು ವಿಜಯಪುರದ ಪರೀಕ್ಷಾ ಕೇಂದ್ರಗಳಿಗೆ ತಲುಬೇಕಾದ ವ್ಯವಸ್ಥೆಯನ್ನ ಮಾಡಿದ್ದಾರೆ. ಉತ್ನಾಳದಿಂದ ಆಟೋ ಮೂಲಕ 7 ವಿದ್ಯಾರ್ಥಿಗಳನ್ನು ವಿಜಯಪುರದ ಪರೀಕ್ಷಾ ಕೇಂದ್ರಗಳಿಗೆ ಕರೆತಂದಿದ್ದಾರೆ. ಪರೀಕ್ಷಾ ಅವಧಿಯ ಒಳಗೆ 5 ವಿದ್ಯಾರ್ಥಿಗಳನ್ನ ಸರ್ಕಾರಿ ಪಿಯು ಕಾಲೇಜು ಹಾಗೂ ಇಬ್ಬರು ವಿದ್ಯಾರ್ಥಿಗಳನ್ನ ಖೇಡ ಕಾಲೇಜು ಪರೀಕ್ಷಾ ಕೇಂದ್ರಗಳಿಗೆ ತಲುಪಿಸಿದ್ದಾರೆ.
QR Code Scam: ಸೈನಿಕರ ಹೆಸರಲ್ಲಿ ವಿಜಯಪುರ ವ್ಯಾಪಾರಿಗಳಿಗೆ ವಂಚನೆ ಜಾಲ.. ಹುಷಾರ್!
ಕಂಡಕ್ಟರ್ ವಿರುದ್ಧ ಕ್ರಮಕ್ಕೆ ಆಗ್ರಹ: ವಿದ್ಯಾರ್ಥಿಗಳು ಪರೀಕ್ಷೆಗೆ ಹೊರಟಿದ್ದಲ್ಲಿ ಅವರಿಗೆ ಸಹಾಯ ಮಾಡಬೇಕಿದ್ದ ಬಸ್ ಕಂಡಕ್ಟರ್ ಬಸ್ ಪಾಸ್ ಅವಧಿ ಮುಗಿದಿದೆ ಎಂದು ನೆಪ ಮಾಡಿ ಅರ್ಧದಾರಿಯಲ್ಲಿ ಬಿಟ್ಟು ಬಂದಿದ್ದಾನೆ. ಇನ್ನು ಬಸ್ ನಂಬರ್ ನೋಟ್ ಮಾಡಿಕೊಂಡಿರುವ ವಿದ್ಯಾರ್ಥಿಗಳಿಗೆ ಕಂಡೆಕ್ಟರ್ ಹೆಸ್ರು, ಗುರುತು ಗೊತ್ತಾಗಿಲ್ಲ. ಈ ಕುರಿತು ಬಸ್ ನಂ ಮೂಲಕ ಕಂಡಕ್ಟರ್ ಪತ್ತೆ ಮಾಡಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎನ್ನುವ ಒತ್ತಾಯ ಕೇಳಿ ಬರ್ತಿದೆ.