Alma Media School: ಪತ್ರಿಕೋದ್ಯಮ ಆಕಾಂಕ್ಷಿಗಳಿಗೆ ಇಲ್ಲಿದೆ ಖುಷಿ ಕೊಡುವ ಬ್ರೇಕಿಂಗ್ ನ್ಯೂಸ್

By Manjunath Nayak  |  First Published Aug 2, 2022, 5:53 PM IST

Alma Media School: ಆಲ್ಮಾ ಮೀಡಿಯಾ ಸ್ಕೂಲ್‌ನ ಡಿಪ್ಲೋಮಾ ಇನ್‌ ಪ್ರಾಕ್ಟಿಕಲ್‌ ಜರ್ನಲಿಸಂ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌ಕೋರ್ಸ್‌ಗೆ ಅಡಿಶ್ಮನ್‌ ಆರಂಭಗೊಂಡಿದೆ. 


ಬೆಂಗಳೂರು (ಆ. 02): ಕಳೆದ ನಾಲ್ಕು ವರ್ಷಗಳಿಂದ ಸುದ್ದಿ ನಿರೂಪಕ-ಪತ್ರಕರ್ತ ಗೌರೀಶ್ ಅಕ್ಕಿ (Gaurish Akki) ನೇತೃತ್ವದಲ್ಲಿ ಪ್ರಾಯೋಗಿಕ ಪತ್ರಿಕೋದ್ಯಮ ಕಲಿಕೆಯಲ್ಲಿ ತನ್ನದೇ ಆದ ವಿಶೇಷ ಛಾಪನ್ನು ಉಳಿಸಿಕೊಂಡು ಯಶಸ್ವಿಯಾಗಿ ಮುನ್ನಡೆಯುತ್ತಿದೆ ಆಲ್ಮಾ ಮೀಡಿಯಾ ಸ್ಕೂಲ್‌. ಇದೀಗ ಈ ಸಂಸ್ಥೆಯಿಂದ ಹೊಸ ಸುದ್ದಿಯೊಂದು ಹೊರಬಂದಿದೆ. ಆಲ್ಮಾ ಮೀಡಿಯಾ ಸ್ಕೂಲ್‌ನ ಡಿಪ್ಲೋಮಾ ಇನ್‌ ಪ್ರಾಕ್ಟಿಕಲ್‌ ಜರ್ನಲಿಸಂ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌(Diploma in Practical Journalism and Media Management) ಕೋರ್ಸ್‌ಗೆ ಅಡಿಶ್ಮನ್‌ ಆರಂಭಗೊಂಡಿದ್ದು 6 ತಿಂಗಳ ಅವಧಿಯ ಕೋರ್ಸ್‌ ಇದಾಗಿದೆ. 

ಕೋರ್ಸ್‌ ಆರಂಭವಾಗುವ ದಿನಾಂಕ: ಆಗಸ್ಟ್‌ 16, 2022. ಪಿಯು ಅಥವಾ ಯಾವುದೇ ವಿಷಯದಲ್ಲಿ ಪದವಿ ಮುಗಿಸಿದವರು ಈ ಕೋರ್ಸ್‌ಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 23, 2022. ಸೀಮಿತ ಸ್ಥಾನಗಳು ಲಭ್ಯ.

Tap to resize

Latest Videos

ಏನು ಈ ಕೋರ್ಸ್‌ನ ವೈಶಿಷ್ಟ್ಯ?:  ವರ್ಷದಿಂದ ವರ್ಷಕ್ಕೆ ಪಠ್ಯದ ವಿಷಯ, ತಂತ್ರಜ್ಞಾನ ಅಳವಡಿಕೆ, ಕಲಿಕೆಯ ವಿಧಾನ, ಹೀಗೆ ಎಲ್ಲವುಗಳಲ್ಲೂ ಹೊಸತನ್ನು ಮತ್ತು ಸೂಕ್ತವಾದದನ್ನು ಅನುಷ್ಠಾನಕ್ಕೆ ತರುವಲ್ಲಿ ಆಲ್ಮಾ ಮೀಡಿಯಾ ಸ್ಕೂಲ್ ಸದಾ ಮುಂದಿದೆ. ಈ ನಿಟ್ಟಿನಲ್ಲಿ ಈವರೆಗೆ ಒಂದು ವರ್ಷವಿದ್ದ ಕೋರ್ಸಿನ ಅವಧಿಯನ್ನು ಈ ಶೈಕ್ಷಣಿಕ ವರ್ಷದಿಂದ ಆರು ತಿಂಗಳಿಗೆ ಇಳಿಸಲಾಗಿದೆ. 

ಮುಂಬರುವ ಆಗಸ್ಟ್‌ 2022ರ ಹೊಸ ಬ್ಯಾಚಿನಿಂದ ರೆಗ್ಯುಲರ್‌ ಕೋರ್ಸ್‌ ಅಷ್ಟೆ ಅಲ್ಲದೇ ಆನ್‌ಲೈನ್‌ ಮತ್ತು ವೀಕೆಂಡ್‌ ಕೋರ್ಸ್‌ಗಳು ಸಹ ಶುರುವಾಗುತ್ತಿದೆ. ಇದರಿಂದ ರಾಜ್ಯದ ಇತರ ಜಿಲ್ಲೆ, ಊರುಗಳಲ್ಲಿ ನೆಲೆಸಿರುವ ವಿದ್ಯಾರ್ಥಿಗಳು, ಕೆಲಸ ಮಾಡುತ್ತಿದ್ದೂ ಪತ್ರಿಕೋದ್ಯಮ ಕಲಿಯಬೇಕೆಂಬ ಆಸಕ್ತಿಯುಳ್ಳವರಿಗೆ ಇದೊಂದು ಸುವರ್ಣ ಅವಕಾಶ. 

70% ಪ್ರಾಕ್ಟಿಕಲ್‌ 30% ಥಿಯರಿ:  70% ಪ್ರಾಕ್ಟಿಕಲ್, 30% ಥಿಯರಿ ಎಂಬುದು ಆಲ್ಮಾ ಮೀಡಿಯಾ ಸ್ಕೂಲ್‌ನ ಮೂಲ ಸೂತ್ರ. ಅಂದರೆ ಇಡೀ ಸಿಲಬಸ್‌ನಲ್ಲಿ 70 ಪ್ರತಿಶತಃ ಪ್ರಾಯೋಗಿಕ ಕಲಿಕೆಯೇ ಇರುತ್ತದೆ. ಇದರಿಂದ ವಿದ್ಯಾರ್ಥಿಗಳು ಬಹುಬೇಗ ಮಾಧ್ಯಮ ಕ್ಷೇತ್ರದ ಕೌಶಲಗಳನ್ನು ಕಲಿಯಲು ಸಾಧ್ಯವಾಗುತ್ತದೆ. 

ಯುಜಿಸಿ ಹೊಸ ಪೋರ್ಟಲ್‌ನಲ್ಲಿ ಹೊಸ ಕೋರ್ಸು: ಉಚಿತವಾಗಿಯೇ ಲಭ್ಯ

ಆಲ್ಮಾದ ಇನ್ನೂ ಕೆಲವು ವಿಶೇಷತೆಗಳನ್ನು ಹೇಳುವುದಾದರೆ, ಮೊದಲನೆಯದಾಗಿ ಸಿಲಬಸ್ ಮುದ್ರಣ, ರೇಡಿಯೋ, ಡಿಜಿಟಲ್ ಮತ್ತು ಟಿವಿ ಮಾಧ್ಯಮ ಇವುಗಳ ಸಂಯೋಜಿತ (Integrated) ಕಲಿಕೆಯ ಕೋರ್ಸನ್ನು ಒಳಗೊಂಡಿದೆ. ಹಾಗಾಗಿ ಇಲ್ಲಿ ಕಲಿತ ವಿದ್ಯಾರ್ಥಿಗಳು ನ್ಯೂಸ್ ಚಾನೆಲ್, ನ್ಯೂಸ್ ಪೇಪರ್, ರೇಡಿಯೋ ಅಥವಾ ಡಿಜಿಟಲ್ ಮಾಧ್ಯಮ ಹೀಗೆ ತಮ್ಮ ಆಸಕ್ತಿಯ ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಲು ಸಮರ್ಥರಾಗಿರುತ್ತಾರೆ. ‌

ಎರಡನೆಯದಾಗಿ, ಸುದ್ದಿಮನೆಗಳ ನೇರ ಅನುಭವ, ಆಧುನಿಕ ತಂತ್ರಜ್ಞಾನಗಳ ಪರಿಚಯ ಮತ್ತು ಅವುಗಳ ಸಮರ್ಪಕ ಕಲಿಕೆ ವಿದ್ಯಾರ್ಥಿಗಳಿಗೆ ದೊರಕುವಂತೆ ಮಾಡಲಾಗಿದೆ. ನಿರೂಪಣೆ, ಕಂಠದಾನ‌ (ವಾಯ್ಸ್‌ ಓವರ್), ಸುದ್ದಿ ಬರವಣಿಗೆ, ಎಡಿಟಿಂಗ್ ಕೌಶಲ ಇನ್ನಿತರ ಕೆಲಸಗಳನ್ನು ಅವರಿಗೆ ಕಲಿಸಲಾಗುತ್ತದೆ. 

ಮೂರನೆಯ ಅಂಶ-ಆಯಾ ಕ್ಷೇತ್ರಗಳಲ್ಲಿ ಪರಿಣತರಾದ ವ್ಯಕ್ತಿಗಳೇ ವಿದ್ಯಾರ್ಥಿಗಳಿಗೆ ಇಲ್ಲಿ ಉಪನ್ಯಾಸ ನೀಡಲು ಅತಿಥಿ ಉಪನ್ಯಾಸಕರಾಗಿ ಆಗಮಿಸುತ್ತಾರೆ. ಕ್ರೈಮ್ ರಿಪೋರ್ಟಿಂಗ್, ಸಿನಿಮಾ, ಕ್ರೀಡೆ, ಸಾಹಿತ್ಯ, ಹೀಗೆ ಯಾವುದೇ ವಿಚಾರ ಇರಲಿ ಆಯಾ ಕ್ಷೇತ್ರಗಳ ಪರಿಣತ ವ್ಯಕ್ತಿಗಳಿಂದಲೇ ವಿದ್ಯಾರ್ಥಿಗಳಿಗೆ ಆ ಕ್ಷೇತ್ರಗಳ ಒಳಹೊರಗುಗಳನ್ನು ತಿಳಿಸಿಕೊಡಲಾಗುತ್ತದೆ. ನಾಲ್ಕನೆಯ ಬಹುಮುಖ್ಯ ಅಂಶ, ಕೋರ್ಸ್‌ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಮತ್ತು ಪ್ಲೇಸ್‌ಮೆಂಟ್ ಸೌಲಭ್ಯವನ್ನು ಸಹ ಕಲ್ಪಿಸಿರುವುದು.

ಫಿಲ್ಮ್ ಮೇಕರ್ ಆಗುವುದು ಹೇಗೆ?

ಯಾವೆಲ್ಲ ಮಾಧ್ಯಮ ಸಂಸ್ಥೆಗಳಲ್ಲಿ ನಮ್ಮ ವಿದ್ಯಾರ್ಥಿಗಳು?:  ಈಗಾಗಲೇ ನಾಲ್ಕು ಬ್ಯಾಚ್‌ಗಳನ್ನು ಪೂರೈಸಿರುವ ಆಲ್ಮಾ ಮೀಡಿಯಾ ಸ್ಕೂಲ್‌ ಈಗ ಐದನೇ ಬ್ಯಾಚ್‌ನತ್ತ ದಾಪುಗಾಲಿಟ್ಟಿದೆ. ಈ ನಾಲ್ಕು ವರ್ಷಗಳಲ್ಲಿ ಇಲ್ಲಿ ಕಲಿತ ವಿದ್ಯಾರ್ಥಿಗಳು ಕರ್ನಾಟಕದ ಬೇರೆ ಬೇರೆ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿ ಟಿವಿ9, ಸುವರ್ಣ ನ್ಯೂಸ್‌, ನ್ಯೂಸ್‌ ಫಸ್ಟ್, ಪವರ್‌ ಟಿವಿ, ರಾಜ್‌ ನ್ಯೂಸ್‌, ವಿಜಯ ಕರ್ನಾಟಕ ಸೇರಿದಂತೆ  ಹಲವು ಸಂಸ್ಥೆಗಳಲ್ಲಿ ಬೇರೆ ಬೇರೆ ಹುದ್ದೆಗಳಲ್ಲಿ ಕಾರ್ಯನಿರತರಾಗಿದ್ದಾರೆ. 

ಇದೀಗ 6 ತಿಂಗಳ "ಡಿಪ್ಲೋಮಾ ಇನ್‌ ಪ್ರಾಕ್ಟಿಕಲ್‌ ಜರ್ನಲಿಸಂ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡಿಶ್ಮನ್‌ ಆರಂಭಗೊಂಡಿದ್ದು ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು.

https://forms.gle/uM5mTj6fTABs7Hkp6

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 74069 46668 / 74069 46667

click me!